ಭಟ್ಕಳ: ಬಿಜೆಪಿ (Bhatkal BJP) ಸಂಘಟನೆಯಲ್ಲಿ ಅಸಮಾಧಾನದ ಧ್ವನಿ ಕೇಳಿಬರುತ್ತಿದ್ದು, ಉತ್ತರ ಕನ್ನಡ (Uttara Kannada) ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ದೇವಾಡಿಗ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ರಾಜಕೀಯ (political) ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

“ರಾಜಕಾರಣದಲ್ಲಿ (politics) ಪಕ್ಷ ನಿಷ್ಠರಾಗುವುದಕ್ಕಿಂತ ವ್ಯಕ್ತಿ ನಿಷ್ಠರಾಗಿರುವುದೇ ಉತ್ತಮ ಅಂತ ಅನಿಸುತ್ತಿದೆ” ಎಂದು  ಸುಬ್ರಾಯ ದೇವಡಿಗ ಫೇಸ್‌ಬುಕ್‌ನಲ್ಲಿ(facebook) ಬರೆದುಕೊಂಡಿದ್ದು, ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಂತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಭಟ್ಕಳ ಬಿಜೆಪಿಯಲ್ಲಿ ಸುಬ್ರಾಯ ದೇವಾಡಿಗ ಅವರ ತ್ಯಾಗ ಮತ್ತು ಪಕ್ಷಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಆ ಬಗ್ಗೆ ಅವರ ವಿರೋಧಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಈಗ ಅವರ ಈ ಪೋಸ್ಟ್ ಕಾರ್ಯಕರ್ತರ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬರಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

BJP/ ಭಟ್ಕಳದಲ್ಲಿ ಬಿಜೆಪಿ ವಿಶೇಷ ಪೂಜೆ 

ಈ ಪೋಸ್ಟ್‌ಗೆ ಹಲವು ಬಿಜೆಪಿ ಕಾರ್ಯಕರ್ತರು ಮತ್ತು ಹಿಂಬಾಲಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಬಿಜೆಪಿ ಕಾರ್ಯಕರ್ತ ಒಬ್ಬರು “ಸಮಯ ಮೌನವನ್ನು ಕೇಳುತ್ತೆ, ರಾಜಕೀಯ ಚದುರಂಗದಲ್ಲಿ ತಾಳ್ಮೆ ಅನಿವಾರ್ಯ, ಯಶಸ್ಸು ಯಾವಾಗಲೂ ನಿಮ್ಮ ಜೊತೆಗೆ ಇದೆ” ಎಂಬ ಸಮಾಧಾನಪಡಿಸಿದ್ದಾರೆ. “ಅಣ್ಣಾಮಲೈ ಜೊತೆ ಸೇರೋಣ” ಎಂದು ಒಬ್ಬ ಅಭಿಮಾನಿ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಮತ್ತೊಬ್ಬ “ಈಗ ಅಧಿಕಾರಕ್ಕೆ ಬಂದು ಪಕ್ಷದ ತತ್ವ-ಸಿದ್ಧಾಂತವನ್ನೇ ಬದಲಾಯಿಸಲು ಬಂದವರು ಯಾರೂ ಶಾಶ್ವತ ಅಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಕಾರ್ಯಕರ್ತ “ನಿಮಗೆ ತುಂಬಾ ಲೇಟಾಗಿ ಜ್ಞಾನೋದಯ ಆಗಿದೆ” ಎಂದು ಕಾಮೆಂಟ್ ಮಾಡಿದ್ದು, ಮತ್ತೊಬ್ಬ ಹಿಂಬಾಲಕ “ಕೆಲವು ಬಕೆಟ್ ಹಿಡಿಯುವ ಗಿರಾಕಿಗಳಿಂದ ಪಕ್ಷ ನಿಷ್ಠೆ ವ್ಯರ್ಥವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Auto driver/ ವರಕೊಡ್ಲು ಮೈದಾನದಲ್ಲಿ ಆಟೋ ಚಾಲಕ ಬಂಧನ

ಸುಬ್ರಾಯ ದೇವಾಡಿಗ ಅವರ ಪೋಸ್ಟ್ ಹಾಗೂ ಅದರ ಸುತ್ತ ಮೂಡಿರುವ ಚರ್ಚೆಗಳು ಭಟ್ಕಳ ಬಿಜೆಪಿ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ ಹಾಡಬಹುದೇ ಎಂಬ ಕುತೂಹಲ ಮೂಡಿಸಿದೆ.

tribute/ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಡಾ ಆರ್ ವಿ ಸರಾಫಗೆ  ನುಡಿನಮನ