ಭಟ್ಕಳ: ತಾಲೂಕಿನ ಜಾಲಿಕೋಡಿ ಸಮೀಪ ಅರಬ್ಬಿ ಸಮುದ್ರದಲ್ಲಿ (Arabian sea) ಮೀನುಗಾರಿಕೆ (fishing) ನಡೆಸುತ್ತಿದ್ದ ವೇಳೆ ಭಾರಿ ಅಲೆಯ ಹೊಡೆತಕ್ಕೆ ಪಾತಿ ದೋಣಿ (fishing boat) ಮುಳುಗಿ ನಾಪತ್ತೆಯಾಗಿದ್ದ ಮೀನುಗಾರ (missing fisherman) ಮಂಜುನಾಥ ಬೇಟಿ ಮೊಗೇರ (೫೭) ಅವರ ಶವ ಬುಧವಾರ ಬೆಳಗ್ಗೆ ಮುಂಡಳ್ಳಿ ಸಮೀಪದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಾಲಿಕೋಡಿ ನಿವಾಸಿಯಾದ ಮಂಜುನಾಥ ಅವರು ಮಂಗಳವಾರ ಮಧ್ಯಾಹ್ನ ಸುಮಾರು ೧.೩೦ರ ವೇಳೆಗೆ ಪಾತಿ ದೋಣಿಯಲ್ಲಿ ಒಬ್ಬರೇ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಏಕಾಏಕಿ ಎದ್ದ ಭಾರಿ ಅಲೆಯ ಹೊಡೆತಕ್ಕೆ ದೋಣಿ ಪಲ್ಟಿಯಾಗಿ ಮುಳುಗಿದ್ದು, ಅವರು ಸಮುದ್ರದ ಆಳಕ್ಕೆ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು (missing fisherman). ಘಟನೆಯ ಬಳಿಕ ಸ್ಥಳೀಯ ಮೀನುಗಾರರು ದೋಣಿಗಳ ಮೂಲಕ ತೀವ್ರ ಶೋಧ ಕಾರ್ಯ ನಡೆಸಿದರೂ, ಸಮುದ್ರ ಪ್ರಕ್ಷುಬ್ಧವಾಗಿದ್ದರಿಂದ ಮತ್ತು ಅಲೆಗಳ ಅಬ್ಬರ ಹೆಚ್ಚಿದ್ದ ಕಾರಣ ಕಾರ್ಯಾಚರಣೆಗೆ ಅಡಚಣೆ ಉಂಟಾಗಿತ್ತು.

Guru Purnima/ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಗುರುಪೂರ್ಣಿಮೆ ಉತ್ಸವ

ಬುಧವಾರ ಬೆಳಗ್ಗೆ ಮುಂಡಳ್ಳಿ ಗ್ರಾಮದ ಮೊಗೇರಕೇರಿ ಸಮೀಪದ ಸಮುದ್ರ ತೀರದಲ್ಲಿ ಮಂಜುನಾಥ ಅವರ ಶವ ತೇಲಿಬಂದಿದ್ದು, ಸ್ಥಳೀಯ ಮೀನುಗಾರರು ಶವವನ್ನು ದಡಕ್ಕೆ ತಂದಿದ್ದಾರೆ. ಮೃತರ ಪುತ್ರ ಓಂಪ್ರಕಾಶ ಮೊಗೇರ (೩೨) ನೀಡಿದ ದೂರಿನ ಮೇರೆಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು