ಭಟ್ಕಳ: ಗುರುಪೂರ್ಣಿಮೆ (Guru Purnima) ಕೇವಲ ಹಬ್ಬವಲ್ಲ ಅದು ಗುರು- ಶಿಷ್ಯರ ಪವಿತ್ರ ಸಂಬಂಧವನ್ನು ಸ್ಮರಿಸುವ, ಗುರುವನ್ನು ಗೌರವಿಸುವ ಶುಭ ದಿನ. ನಮ್ಮನ್ನು ಅಜ್ಞಾನವೆಂಬ ಕತ್ತಲೆಯಿಂದ ಜ್ಞಾನ -ಸುಜ್ಞಾನ -ವಿಜ್ಞಾನದ ಬೆಳಕಿನ ಕಡೆಗೆ ಕರೆದೊಯ್ಯುವ ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಶ್ರೀಧರ ಶೇಟ ಶಿರಾಲಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಜಾಲಿಯ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಆವರಣದಲ್ಲಿರುವ ಯೋಗ ತರಬೇತಿ ಕೇಂದ್ರದಲ್ಲಿ ನಡೆದ ಗುರು ಪೂರ್ಣಿಮೆ (Guru Purnima) ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ, ಕಾರ್ಯಕ್ರಮ ಸಂಘಟಿಸಿದ್ದ ಯೋಗ ಗುರುಗಳಾದ ಗೋವಿಂದ ಗುರೂಜಿಯವರ ಯೋಗ ಕ್ಷೇತ್ರದ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು.
Guru Purnima/ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಗುರುಪೂರ್ಣಿಮೆ ಉತ್ಸವ
ಭಟ್ಕಳ ಅರ್ಬನ್ ಕೋ- ಆಪರೇಟಿವ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಸುಭಾಷ್ ಶೆಟ್ಟಿ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಸೌಜನ್ಯ-ಸಂಸ್ಕಾರ ಕಡಿಮೆಯಾಗುತ್ತಿದ್ದು, ಅವರೆಲ್ಲ ಮೊಬೈಲ್ ನ ದಾಸರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಯೋಗ ಗುರು ಗೋವಿಂದ ಗುರೂಜಿ ಮಾತನಾಡಿ, ‘ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ’ ಎಂಬ ಕವಿವಾಣಿಯಂತೆ ನಾವೆಲ್ಲರೂ ಗುರುವಿಗೆ ಶರಣಾದಾಗಲೇ ನಮ್ಮ ಬದುಕು ಸಾರ್ಥಕ ಎಂದು ನುಡಿದರು.
Rotary/ ರೋಟರಿ ಅಧ್ಯಕ್ಷರಾಗಿ ಶ್ರೀನಾಥ ಪೈ ಪದಗ್ರಹಣ
ಪ್ರಾರಂಭದಲ್ಲಿ ಗುರುವಿನ ಮಹಿಮೆಯನ್ನು ಸಾರುವ ಭಜನೆಗಳನ್ನು ಹಾಡಲಾಯಿತು. ವೇದವ್ಯಾಸರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಭಟ್ಕಳ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ್ದ ಯೋಗಾಭ್ಯಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


