ಭಟ್ಕಳ: ತಾಲೂಕಿನ ಮಾರುಕೇರಿಯ ಶಿವಶಾಂತಿಕಾ ಪರಮೇಶ್ವರಿ ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಇನ್ಫಿನಿಟಿ ಆರ್ಗನೈಸೇಶನ್ ವತಿಯಿಂದ ಶಾಲಾ ಬ್ಯಾಗ್ (school bag), ಪಟ್ಟಿ, ಕಂಪಾಸ್ ಮತ್ತಿತರ ಪರಿಕರಗಳನ್ನು (educational materials) ವಿತರಿಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿದ್ಯಾರ್ಥಿಗಳಿಗೆ ಪರಿಕರ (educational materials) ವಿತರಿಸಿ ಮಾತನಾಡಿದ ಇನ್ಫಿನಿಟಿ ಅರ್ಗನೈಸೇಶನ್ ಮುಖ್ಯಸ್ಥೆ ಮತ್ತು ಸಾಹಿತಿ ಡಾ ನಿವಿಯಾ ಗೋಮ್ಸ, ಇನ್ಫಿನಿಟಿ ಅರ್ಗನೈಸೇಶನ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲರೂ ಶಿಕ್ಷಣ ಪಡೆಯಬೇಕು ಎನ್ನುವುದು ಆರ್ಗನೈಸೇಶನ್ ನ ಆಶಯವಾಗಿದೆ. ಇಲ್ಲಿನ ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
Talent award/ ಎಸ್ ಎಸ್ ಎಲ್ ಸಿ, ಪಿ ಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಉಪಸ್ಥಿತರಿದ್ದ ರಾಘವೇಂದ್ರ ಹೆಬ್ಬಾರ ಮಾತನಾಡಿ, ಶಿವಶಾಂತಿಕಾ ಪ್ರೌಢಶಾಲೆಗೆ ೬೦ ವರ್ಷದ ಇತಿಹಾಸ ಇದೆ. ಹಿರಿಯರು ಕಷ್ಟಪಟ್ಟು ಕಟ್ಟಿದ ಶಾಲೆಯನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ದಾನಿಗಳು ನೀಡಿದ ಪರಿಕರಗಳನ್ನು ಬಳಸಿಕೊಂಡು ಉತ್ತಮ ಅಂಕ ಪಡೆಯಬೇಕು. ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದರು.
DG & IGP Commendation Disc/ ಡಿಜಿ – ಐಜಿಪಿ ಪ್ರಶಂಸಾ ಪತ್ರಕ್ಕೆ ಭಟ್ಕಳದ ದೀಪಕ ನಾಯ್ಕ ಆಯ್ಕೆ
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಂಠ ಹೆಬ್ಬಾರ ಮಾತನಾಡಿ, ಪ್ರೌಢಶಾಲೆ ದಾನಿಗಳ ಸಹಾಯದಿಂದ ನಡೆಸಬೇಕಿದೆ. ಡಾ ನವೀಯಾ ಗೋಮ್ಸ ಅವರು ಶಾಲೆಯ ಎಲ್ಲಾ ಮಕ್ಕಳಿಗೆ ಬ್ಯಾಗ್, ಕಂಪಾಸ ಮತ್ತಿತರ ಪರಿಕರ ನೀಡುವುದರ ಮೂಲಕ ನೆರವಾಗಿದ್ದಾರೆ. ಇದನ್ನು ಮಕ್ಕಳು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
government school/ ಸರಕಾರಿ ಶಾಲೆಯ ಅಭಿವೃದ್ಧಿಗೆ ಕೇಶ್ನಿಮನೆ ಕುಟುಂಬದ ಕೊಡುಗೆ
ವೇದಿಕೆಯಲ್ಲಿ ತೆರೆಸಾ ನೊರೋನಾ, ಪೀಟರ್ ಗೋಮ್ಸ, ವೆಂಕಟೇಶ ದೇವಡಿಗ, ಗಣೇಶ ಅಡಿಗ, ವೆರೋನಿಕಾ, ಶ್ರುತಿ ರಾಕೇಶ, ರಾಕೇಶ, ದೇವ್ ಮುಂತಾದರಿದ್ದರು. ಮುಖ್ಯ ಶಿಕ್ಷಕ ಪಿ ಟಿ ಚಹ್ವಾಣ ಸ್ವಾಗತಿಸಿದರು. ಶಿಕ್ಷಕ ದಿನೇಶ ನಿರೂಪಿಸಿದರು. ದೈಹಿಕ ಶಿಕ್ಷಕ ವಿನಾಯಕ ಭಟ್ಟ ವಂದಿಸಿದರು.



