ಭಟ್ಕಳ: ತಾಲೂಕಿನ ಬೆಳಕೆ ಗ್ರಾಮದ ಕಾನುಬದ್ಲು ಬೊಮ್ಮನಕೆರೆ ನಿವಾಸಿ ದೀಪಾಲಿ ಗುರು ಗೊಂಡ ಅವರು ಬೆಂಗಳೂರಿನ (Bengaluru) ಕೆ ಆರ್ ಪುರಂ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ (road accident) ಮೃತಪಟ್ಟಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ಏಳು ತಿಂಗಳಿಂದ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ದೀಪಾಲಿ, ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭಕ್ಕೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಾಹಿತಿಯಂತೆ, ಟಿಟಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ಹೆಚ್ಚಿನ ಸಿಬ್ಬಂದಿ ಕೆಳಗಿಳಿದಿದ್ದರು. ದೀಪಾಲಿ ಸೇರಿದಂತೆ ಮೂವರು ವಾಹನದಲ್ಲೇ ಇದ್ದಾಗ, ಅತಿವೇಗವಾಗಿ ಬಂದ ಲಾರಿಯೊಂದು ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿದೆ.
educational materials/ ಮಕ್ಕಳಿಗೆ ಶೈಕ್ಷಣಿಕ ಪರಿಕರ ವಿತರಣೆ
ಅಪಘಾತದಲ್ಲಿ (accident) ಮತ್ತೋರ್ವ ಯುವತಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದವರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಆರಂಭದಲ್ಲಿ ದೀಪಾಲಿಗೆ ಸಣ್ಣಪುಟ್ಟ ಗಾಯಗಳಾಗಿರುವಂತೆ ಕಂಡುಬಂದಿದ್ದರೂ, ತಲೆಗೆ ಹಾಗೂ ದೇಹದ ಒಳಭಾಗಕ್ಕೆ ತೀವ್ರ ಪೆಟ್ಟಾಗಿದ್ದ ಪರಿಣಾಮ ಅವರು ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದರು. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Talent award/ ಎಸ್ ಎಸ್ ಎಲ್ ಸಿ, ಪಿ ಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಅಪಘಾತದ ಬಳಿಕ ಉಂಟಾದ ಭಾರಿ ವಾಹನ ದಟ್ಟಣೆಯಿಂದ ಆಂಬುಲೆನ್ಸ್ ಸ್ಥಳಕ್ಕೆ ತಲುಪಲು ವಿಳಂಬವಾಗಿದ್ದು, ರಕ್ಷಣಾ ಕಾರ್ಯಕ್ಕೂ ತೊಂದರೆಯಾಯಿತು ಎನ್ನಲಾಗಿದೆ. ಈ ಸಂಬಂಧ ಕೆ ಆರ್ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
DG & IGP Commendation Disc/ ಡಿಜಿ – ಐಜಿಪಿ ಪ್ರಶಂಸಾ ಪತ್ರಕ್ಕೆ ಭಟ್ಕಳದ ದೀಪಕ ನಾಯ್ಕ ಆಯ್ಕೆ
ಕುಟುಂಬದ ಹಿರಿಯ ಮಗಳಾಗಿದ್ದ ದೀಪಾಲಿ ಅವರ ಅಕಾಲಿಕ ನಿಧನದಿಂದ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಸ್ವಗ್ರಾಮ ಬೆಳಕೆ ಕಾನುಬದ್ಲು ಬೊಮ್ಮನಕೆರೆಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದ್ದು, ಗ್ರಾಮಸ್ಥರು ಹಾಗೂ ಬಂಧು-ಬಳಗ ಕಂಬನಿ ಮಿಡಿದರು.
government school/ ಸರಕಾರಿ ಶಾಲೆಯ ಅಭಿವೃದ್ಧಿಗೆ ಕೇಶ್ನಿಮನೆ ಕುಟುಂಬದ ಕೊಡುಗೆ



