ಭಟ್ಕಳ: ಚಿಪ್ಪಿಕಲ್ಲು ದುರಂತದಲ್ಲಿ (Chippikallu tragedy) ಮಡಿದ ಸಾರದಹೊಳೆಯ ೧೧ ಜನರ ಕೌಟುಂಬಿಕ ಪರಿಹಾರ ನಿಧಿಗೆ ಮುರುಡೇಶ್ವರ (Murudeshwa) ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘದ ವತಿಯಿಂದ ಎಲ್ಲಾ ಚಾಲಕರ (auto drivers) ಸಹಕಾರದೊಂದಿಗೆ ೫೦ ಸಾವಿರ ರೂಪಾಯಿ ನಗದು ಹಣವನ್ನು ಸಾರದಹೊಳೆಯ ಶ್ರೀ ಕ್ಷೇತ್ರಕ್ಕೆ ತೆರಳಿ ಕ್ಷೇತ್ರದ ಕಾರ್ಯದರ್ಶಿಗೆ ದೇವರ ಸಮ್ಮುಖದಲ್ಲಿ ಚಿಪ್ಪಿಕಲ್ಲು ದುರಂತದ (Chippikallu tragedy) ಸಂತ್ರಸ್ತರ ಪರಿಹಾರ ನಿಧಿಯ ಚೆಕ್ ನೀಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಆಟೋ ಯುನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ, ಉಪಾಧ್ಯಕ್ಷ ಜಗದೀಶ ನಾಯ್ಕ, ಮಾಜಿ ಅಧ್ಯಕ್ಷ ಸತೀಶ ನಾಯ್ಕ, ಸದಸ್ಯರಾದ ಅಣ್ಣಪ್ಪ ನಾಯ್ಕ, ಪ್ರಮೋದ ಸಾವಂತ, ಪಾಂಡು ನಾಯ್ಕ, ಶ್ರೀಕಾಂತ ನಾಯ್ಕ ಮುಂತಾದವರು ಇದ್ದರು.



