ಭಟ್ಕಳ: ೨೦೨೬–೨೭ನೇ ಸಾಲಿನಲ್ಲಿ ತೋಟಗಾರಿಕೆ (horticulture department) ಇಲಾಖೆಯ ವಿವಿಧ ಯೋಜನೆಗಳಡಿ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್‌ನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಾಷ್ಟ್ರೀಯ ತೋಟಗಾರಿಕೆ ಮಿಷನ್ (NHM) ಯೋಜನೆಯಡಿ ಬಾಳೆ, ಮಾವು, ಗೇರು ಸೇರಿದಂತೆ ವಿವಿಧ ತೋಟಗಾರಿಕೆ (horticulture) ಬೆಳೆಗಳ ಪ್ರದೇಶ ವಿಸ್ತರಣೆಗೆ ಶೇ ೪೦ರ ಸಹಾಯಧನ ನೀಡಲಾಗುತ್ತದೆ. ಕಾಳುಮೆಣಸು, ಜಾಯಿಕಾಯಿ, ಏಲಕ್ಕಿ ಬೆಳೆಗಳಿಗೂ ಇದೇ ಸೌಲಭ್ಯ ಲಭ್ಯ. ಪ್ಲಾಸ್ಟಿಕ್ ಹೊದಿಕೆ ಹಾಗೂ ಕಳೆಚಾಪೆಗೆ ಶೇ ೫೦ರ ಸಹಾಯಧನ, ಕಾಳುಮೆಣಸು ಪುನಶ್ಚೇತನಕ್ಕೂ ಶೇ ೫೦ರ ಸಹಾಯಧನ ದೊರೆಯಲಿದೆ. ಸಮಗ್ರ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ಎಕರೆಗೆ ರೂ ೬೦೦ರಂತೆ (ಗರಿಷ್ಠ ೫ ಎಕರೆ) ಶೇ ೩೦ರ ಸಹಾಯಧನ ಹಾಗೂ ವೈಯಕ್ತಿಕ ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಶೇ ೫೦ರಂತೆ ಗರಿಷ್ಠ ರೂ ೭೫ ಸಾವಿರ ಸಹಾಯಧನ ನೀಡಲಾಗುತ್ತದೆ.

Leopards/ ಕೋಣಾರ ಭಾಗದಲ್ಲಿ ಚಿರತೆಗಳ ಓಡಾಟ 

ಕೃಷಿ ಯಾಂತ್ರೀಕರಣ ಉಪ ಅಭಿಯಾನ (SMAM) ಯೋಜನೆಯಡಿ ತೋಟಗಾರಿಕೆ ಚಟುವಟಿಕೆಗಳಿಗೆ ಅಗತ್ಯ ಯಂತ್ರೋಪಕರಣಗಳ ಖರೀದಿಗೆ ಸಣ್ಣ, ಅತಿ ಸಣ್ಣ, ಮಹಿಳಾ ಹಾಗೂ ಪರಿಶಿಷ್ಟ ಜಾತಿ/ಪಂಗಡದ ರೈತರಿಗೆ ಶೇ ೫೦ರ ಸಹಾಯಧನ, ಇತರ ರೈತರಿಗೆ ಶೇ ೪೦ರ ಸಹಾಯಧನ ದೊರೆಯಲಿದೆ.

Mankal Vaidya/ ‘ಸಾಮಾಜಿಕ ಜಾಲತಾಣದಲ್ಲಿ ಬರೆಯುವವರು ಬರೆದುಕೊಳ್ಳಲಿ’

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY-PDMC) ಅಡಿಯಲ್ಲಿ ಹನಿ ನೀರಾವರಿ ಅಳವಡಿಕೆಗೆ ೨ ಹೆಕ್ಟೇರ್ ವರೆಗೆ ಶೇ ೯೦ ಹಾಗೂ ೨ರಿಂದ ೫ ಹೆಕ್ಟೇರ್ ವರೆಗೆ ಶೇ ೪೫ರ ಸಹಾಯಧನ ನೀಡಲಾಗುತ್ತದೆ. ಹಿಂದಿನ ಸಹಾಯಧನ ಪಡೆದು ೭ ವರ್ಷ ಪೂರೈಸಿದವರು ಮರು ಅರ್ಜಿ ಸಲ್ಲಿಸಬಹುದಾಗಿದೆ.

Woman death/ ಮುರುಡೇಶ್ವರದ ಮಹಿಳೆ ಸಾವಿಗೆ ಹೊಟ್ಟೆನೋವು ಕಾರಣವಾಯ್ತು

ಜಿಲ್ಲಾ ಹಾಗೂ ರಾಜ್ಯ ವಲಯದ ಮಧುವನ ಮತ್ತು ಜೇನು ಕೃಷಿ ಅಭಿವೃದ್ಧಿ ಯೋಜನೆಯಡಿ ಜೇನು ಪೆಟ್ಟಿಗೆ, ಜೇನು ಕುಟುಂಬ ಮತ್ತು ಸ್ಟ್ಯಾಂಡ್ ಖರೀದಿಗೆ ಶೇ ೭೫ರ ಸಹಾಯಧನ (ರೂ ೩೩೭೫) ನೀಡಲಾಗುತ್ತದೆ. ಖಾಸಗಿ ಮಧುವನ ಸ್ಥಾಪನೆ ಹಾಗೂ ಜೇನುತುಪ್ಪ ತೆಗೆಯುವ ಯಂತ್ರಗಳಿಗೂ ಇದೇ ಪ್ರಮಾಣದ ಸಹಾಯಧನ ದೊರೆಯಲಿದೆ.

Admissions/ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಪದವಿ ತರಗತಿಗಳಿಗೆ ಪ್ರವೇಶಾತಿ ಆರಂಭ

ಸಮಗ್ರ ತೋಟಗಾರಿಕೆ ಅಭಿವೃದ್ಧಿ (CHD) ಯೋಜನೆ ಯೋಜನೆಯಡಿ ಗುಚ್ಚ ಗ್ರಾಮ ಮಾದರಿಯಲ್ಲಿ ಅಡಿಕೆ ತೋಟಗಳಲ್ಲಿ ಕಾಳುಮೆಣಸು ವಿಸ್ತರಣೆಗೆ ಹಾಗೂ ನವೀನ ತಂತ್ರಜ್ಞಾನ, ಯಂತ್ರೋಪಕರಣಗಳ ಬಳಕೆಗೆ ಸಹಾಯಧನ ನೀಡಲಾಗುತ್ತದೆ. ಧರ್ತಿ ಅಬಾ ಯೋಜನೆಯಡಿ ಪಟ್ಟಾ ಹೊಂದಿರುವ ಪರಿಶಿಷ್ಟ ಪಂಗಡದ ರೈತರಿಗೆ ವಿವಿಧ ಯೋಜನೆಗಳಡಿ ಶೇ ೯೦ರ ಸಹಾಯಧನ ಲಭ್ಯವಿರುತ್ತದೆ.

Alumni Reunion/ ಏ ೨೯ರಂದು ದಿ ನ್ಯೂ ಇಂಗ್ಲಿಷ್ ಶಾಲೆಯ ಹಳೇ ವಿದ್ಯಾರ್ಥಿಗಳ ಸಮಾಗಮ

ಆಸಕ್ತ ರೈತರು ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ನಕಲು, ಪಾಸ್‌ಪೋರ್ಟ್ ಗಾತ್ರದ ಫೋಟೋ ಹಾಗೂ (ಎಸ್ ಸಿ/ಎಸ್ ಟಿ ರೈತರಿಗೆ ಜಾತಿ ಪ್ರಮಾಣಪತ್ರ) ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Murudeshwar/ ಮುರುಡೇಶ್ವರದಲ್ಲಿ ಸರ್ಕಾರಿ ಸಾರಿಗೆ ಬಸ್ಸಿಗೆ ಬೆಂಕಿ