ಭಟ್ಕಳ: ಇಲ್ಲಿನ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಭಟ್ಕಳ ಮಾರಿಜಾತ್ರೆ (Bhatkal Marijathre) ಆಗಸ್ಟ್ ೫ ಮತ್ತು ೬ರಂದು ಜರುಗಲಿದೆ. ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಬಿಟ್ಟರೆ  ಆಷಾಢದಲ್ಲಿ ಜರುಗುವ ಈ ಮಾರಿಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆಯಾಗಿದೆ. ಈ ಭಟ್ಕಳ‌ ಮಾರಿಜಾತ್ರೆಗೆ (Bhatkal Marijathre) ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಗೆ ಹರಕೆ ಅರ್ಪಿಸಿ ಪುನೀತರಾಗುತ್ತಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜುಲೈ ೨೮ರಂದು ಮೂರ್ತಿ ತಯಾರಿಕೆಯ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಗುತ್ತದೆ. ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಅಂದಿನಿಂದ ಜುಲೈ ೩೧ರವರೆಗೆ ಅದೇ ಜಾಗದಲ್ಲಿ ಕೆತ್ತನೆ ಮಾಡಿ, ಅಂದು ಮಾರಿಯ ತವರುಮನೆ ಎಂದೇ ಕರೆಯುವ ಮಣ್ಕುಳಿಯ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಗುತ್ತದೆ. ಅಲ್ಲಿಂದ‌ ಇನ್ನೊಂದು ಆ ೪ರವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಗುತ್ತದೆ.

Bhatkal/ ಮುಂಡಳ್ಳಿಯಲ್ಲಿ ಯುವ ಮೀನುಗಾರ ಆತ್ಮಹತ್ಯೆ 

ಪೂರ್ಣಗೊಂಡ ಮೂರ್ತಿಗೆ ಆ ೪ ಮಂಗಳವಾರ ಸಾಯಂಕಾಲ ಮಾರಿಗೆ ಬಣ್ಣ ಬಳಿದು, ಬಳೆ, ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೇವಿಗೆ ತೊಡಿಸಲಾಗುತ್ತದೆ. ಮಂಗಳವಾರ ರಾತ್ರಿ ಮಾರಿಮನೆ ಮುಖ್ಯಸ್ಥರ ಮನೆಯವರಿಂದ ಹಾಗೂ ಊರಿನವರಿಂದ ಪ್ರಥಮ ಪೂಜೆ ನೆರವೇರಲಿದೆ.

Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ 

ಆ ೫ರ ಬುಧವಾರ ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಾರಿಯನ್ನು ಹೊತ್ತುಕೊಂಡು ಮೆರವಣಿಗೆಯಲ್ಲಿ ಮಾರಿಗುಡಿಯಲ್ಲಿ (Marigudi) ಪ್ರತಿಷ್ಠಾಪಿಸಲಾಗುತ್ತದೆ. ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ‌ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ‌ ಆಚರಿಸುವುದು ಪ್ರತೀತಿ.

Saraf Memorial Award/ ಡಾ ಆರ್ ವಿ ಸರಾಫ್ ಸಂಸ್ಮರಣಾ ಪ್ರಶಸ್ತಿ ಕರಿಯಾ ಗೊಂಡಗೆ ಪ್ರದಾನ: ಯಾರಿವರು ಗೊತ್ತಾ?

ಆ ೬ರಂದು ಗುರುವಾರ ಸಂಜೆ ಮಾರಿ ಮೂರ್ತಿಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಸುಮಾರು ೬ ಕಿ ಮೀ ದೂರದ ಜಾಲಿ ಸಮುದ್ರ ತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿಜಾತ್ರೆಗೆ ತೆರೆ ಬೀಳಲಿದೆ.

Bharat Vibhushan/ ರಾಜಂ ಹಿಚ್ಕಡ ಮುಡಿಗೇರಿದ ಭಾರತ ವಿಭೂಷಣ