ಭಟ್ಕಳ: ಇಲ್ಲಿನ ನ್ಯೂ ಇಂಗ್ಲೀಷ್ ಸ್ಕೂಲಿನ ವಿಶ್ರಾಂತ ಆಂಗ್ಲ ಭಾಷಾ ಶಿಕ್ಷಕಿ (retired teacher) ರಾಜಂ ಹಿಚ್ಕಡರವರಿಗೆ ಭಾರತ ವಿಭೂಷಣ (Bharat Vibhushan) ಪ್ರಶಸ್ತಿಯು ಲಭಿಸಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ ಸಮಾರಂಭದಲ್ಲಿ ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ಪರಿಷತ್ತು ರಾಜಂ ಹಿಚ್ಕಡರವರಿಗೆ ಪ್ರದಾನ ಮಾಡಿದೆ. ರಾಜಂರವರ ಶಿಕ್ಷಣ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ರಾಜಂ ಹಿಚ್ಕಡರವರು ಭಟ್ಕಳದಲ್ಲಿ ದೀರ್ಘಕಾಲಿಕವಾಗಿ ಪ್ರೌಢ ಶಾಲಾ ಆಂಗ್ಲ ಭಾಷಾ ಶಿಕ್ಷಕರಾಗಿ ಅನುಪಮವಾದ ಸೇವೆಯನ್ನು ಸಲ್ಲಿಸಿ, ಅಸಂಖ್ಯಾತ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ಇತ್ತೀಚಿಗಷ್ಟೇ ವಯೋನಿವೃತ್ತಿಗೊಂಡವರು. ಸೇವಾವಧಿಯಲ್ಲಿದ್ದಾಗಲೇ ಸಮಾಜಮುಖಿಯಾಗಿ ಸಂಘಟನಾತ್ಮಕವಾಗಿ ತೊಡಗಿಸಿಕೊಂಡವರು. ನಿವೃತ್ತರಾದ ಬಳಿಕವೂ ಒಂದಿಲ್ಲೊಂದು ಜನಪರವಾದ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿದ್ದವರು. ಅದಕ್ಕಾಗಿಯೇ ತಮ್ಮ ಅಪ್ಪ-ಅಮ್ಮನ ಹೆಸರಿನಲ್ಲಿ ಭಾವ ಚಂದ್ರಮ ” – ಸದಭಿರುಚಿಯ ವೇದಿಕೆಯನ್ನು ಹುಟ್ಟು ಹಾಕಿ, ನಾಡಿನಾದ್ಯಂತ ಸೇವೆಯಲ್ಲಿ ತೊಡಗಲು ಮುಂದಾಗಿದ್ದಾರೆ.

AITM/ ಭಟ್ಕಳದ ಎಐಟಿಎಂನಲ್ಲಿ ೪೩ನೇ ಪದವಿ ಪ್ರದಾನ ಸಮಾರಂಭ  

ಇದುವರೆಗೆ ಹತ್ತಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದ ಇವರು ಭಾರತ ವಿಭೂಷಣ ಪ್ರಶಸ್ತಿಗೆ (Bharat Vibhushan) ಭಾಜನರಾದ ಕುರಿತು ಅಂಕೋಲಾದ ನವ ಕರ್ನಾಟಕ ಸಂಘದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ಗಾಂವಕರ ಬರ್ಗಿ, ಯಕ್ಷಮುಖಿಯ ಸಂಚಾಲಕ ರಾಜೇಶ ಸೂರ್ವೆ, ಸಮರ್ಪಣ ವಿಶ್ರಾಂತ ಬೋಧಕರ ಸಂಘದ ಸಂಚಾಲಕ ವಿಜಯಕುಮಾರ್, ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ ಹೊಸಕೇರಿ, ಶಿಕ್ಷಕರ ಬಳಗದ ನಿಕಟ ಪೂರ್ವ ಅಧ್ಯಕ್ಷ ಎನ್ ಬಿ ನಾಯಕ, ಸೇವಾಲಾಲ್ ಸಂಘದ ಅಧ್ಯಕ್ಷ ಶಿವಚಂದ್ರ, ಅಂಕೋಲಾ ಕನ್ನಡ ಸಂಘದ ಗೌರವಾಧ್ಯಕ್ಷರಾದ ಹಿರಿಯ ನ್ಯಾಯವಾದಿ ವಿ ಎಸ್ ನಾಯಕ ಕಣಗಿಲ್, ಕನ್ನಡ ಭಾರತಿ ಪ್ರಪಂಚದ ಸಂಚಾಲಕ ನಾಗನೆಲೆಯ ನಾರಾಯಣ ನಾಗು ನಾಯಕ ಮೊದಲಾದವರು ಅಭಿನಂದಿಸಿದ್ದಾರೆ.

campaign/ ಮನೆಗೊಂದು ಗಿಡ ಅಭಿಯಾನಕ್ಕೆ ಚಾಲನೆ

ಭಾರತ ವಿಭೂಷಣ ಪ್ರಶಸ್ತಿಗೆ ಪಾತ್ರರಾದ ರಾಜಂ ಹಿಚ್ಕಡರವರು ಪ್ರಶಸ್ತಿಯು ಲಭಿಸಿರುವ ಕುರಿತಂತೆ ಸಂತಸವನ್ನು ವ್ಯಕ್ತಪಡಿಸಿ, ಇದು ತನ್ನ ಸಾಧನೆಗೆ ಸಂದ ಗೌರವವೆಂದೆಣಿಸದೇ, ಸಾಧಿಸಬೇಕಾಗಿದ್ದು ಬೇಕಷ್ಟು ಇದೆ ಎಂದು ಎಚ್ಚರಿಸಿ ಜವಾಬ್ದಾರಿಯನ್ನು ಹೆಚ್ಚಿಸಿದ್ದು, ಇನ್ನಷ್ಟು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಪ್ರೇರಕವಾಗಿದೆ ಎಂದಿದ್ದಾರೆ.

sewage work/ ಭಟ್ಕಳ ನಗರಸಭೆ ನಿರ್ಲಕ್ಷ್ಯಕ್ಕೆ ಒಳಗಾದ ಒಳಚರಂಡಿ ಕಾಮಗಾರಿ