ಭಟ್ಕಳ: ಶಿರಾಲಿಯ ಗುರು ನಮನ ಬಳಗದವರಿಂದ ಇಲ್ಲಿಯ ಜನತಾ ವಿದ್ಯಾಲಯದ ೮ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಕೂಲ್ ಬ್ಯಾಗ್ (school bags), ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗುರು ನಮನ ಬಳಗದ ಅಧ್ಯಕ್ಷ ಸಾಹಿತಿ- ಶಿಕ್ಷಕ ಶ್ರೀಧರ ಶೇಟ್ ಶಿರಾಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ಗಳನ್ನು (school bags) ವಿತರಿಸಿದರು. ಅವರು ಮಾತನಾಡುತ್ತಾ ನಾವೆಲ್ಲರೂ ತಂದೆ- ತಾಯಿ- ಗುರು ಮತ್ತು ಸಮಾಜದ ಋಣವನ್ನು ತೀರಿಸಬೇಕಿದ್ದು, ಆ ಹಿನ್ನೆಲೆಯಲ್ಲಿ ನಮಗೆ ಇದೇ ಶಾಲೆಯಲ್ಲಿ ೩೫-೪೦ ವರ್ಷಗಳ ಹಿಂದೆ ಕಲಿಸಿದ ಗುರುಗಳ ಗೌರವಾರ್ಥ ಗುರುನಮನ ಬಳಗವನ್ನು ರಚಿಸಿಕೊಂಡು, ಗುರುಗಳಿಗೆ ಗುರುವಂದನೆ ಸಲ್ಲಿಸುವುದರ ಜೊತೆಗೆ ಅವರ ಹೆಸರಿನಲ್ಲಿ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ತಿಳಿಸಿದರು.
Letter of Appreciation/ ಭಟ್ಕಳದ ಇಬ್ಬರು ಸಿಬ್ಬಂದಿಗೆ ಎಸ್ಪಿ ಗೌರವ
ಗುರುನಮನ ಬಳಗದ ಕಾರ್ಯದರ್ಶಿ ಮಂಜುನಾಥ ಕೋಡಿಹಿತ್ತಲು ಪ್ರಾಸ್ತಾವಿಕ ಮಾತನಾಡಿ, ಗುರುನಮನ ಬಳಗ ಬೆಳೆದು ಬಂದ ದಾರಿಯನ್ನು ವಿವರಿಸಿ, ಇಂದಿನ ವಿದ್ಯಾರ್ಥಿಗಳು ಬಹಳಷ್ಟು ಸೌಲಭ್ಯಗಳನ್ನು ಹೊಂದಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ ಮಾತನಾಡುತ್ತಾ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ ಸಾಧನೆಗಳನ್ನು ಮಾಡುತ್ತಿದ್ದು, ಕನ್ನಡ ಮಾಧ್ಯಮದಲ್ಲಿ ಕಲಿಯುವುದರಿಂದ ವಿಷಯವನ್ನು ಹೆಚ್ಚು ಅರ್ಥೈಸಿಕೊಳ್ಳಬಹುದು. ಹೀಗಾಗಿ ಜೀವನದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
Bhatkal Marijathre/ ಆ ೫, ೬ರಂದು ಭಟ್ಕಳ ಮಾರಿಜಾತ್ರೆ
ಜನತಾ ವಿದ್ಯಾಲಯ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ವಿತರಿಸಿದ ಗುರು ನಮನ ಬಳಗದವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ನುಡಿದರು. ಸಹ ಕಾರ್ಯದರ್ಶಿ, ಪತ್ರಕರ್ತ ವಿಷ್ಣು ದೇವಡಿಗ ಮಾತನಾಡಿ, ಆಂಗ್ಲ ಭಾಷೆಗಳ ವ್ಯಾಮೋಹದಿಂದಾಗಿ ಕನ್ನಡ ಮಾಧ್ಯಮದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು.
Bhatkal/ ಮುಂಡಳ್ಳಿಯಲ್ಲಿ ಯುವ ಮೀನುಗಾರ ಆತ್ಮಹತ್ಯೆ
ಪರಿವಾರದ ಖಜಾಂಚಿ ರಾಮರಾಯ ಕಾಮತ ಶಾಲೆಯ ಹಿಂದಿನ ದಿನಗಳನ್ನು ಮೆಲುಕು ಹಾಕಿದರು. ಜನತಾ ವಿದ್ಯಾಲಯ ಕಾಲೇಜಿನ ಪ್ರಾಚಾರ್ಯ ಜಿ ಎಸ್ ಹೆಗಡೆ ಮಾತನಾಡಿ, ಅಂಕಗಳ ಜೊತೆಗೆ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು ಎಂದರಲ್ಲದೆ ಹಳೆ ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿ ರಾಮಕೃಷ್ಣ ಪ್ರಭು ಉಚಿತವಾಗಿ ನೀಡಿದ ಕಂಪಾಸ್ ಬಾಕ್ಸ್ (compass box) ವಿತರಿಸಲಾಯಿತು. ಶಿರಾಲಿಯ ಜನಪದ್ಮ ಸರಸ್ವತಿ ಕಾಮತ ಚಾರಿಟೇಬಲ್ ಟ್ರಸ್ಟ್ ಪರವಾಗಿ ಶ್ರೀನಿವಾಸ ಕಾಮತ್ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿ ತನುಜಾ ಸೋಮಯ್ಯ ಗೊಂಡ ಇವರಿಗೆ ವಿದ್ಯಾರ್ಥಿ ವೇತನ (scholarship) ವಿತರಿಸಿದರು.
Environmental awareness/ ಪರಿಸರ ಜಾಗೃತಿ ಮಾಹಿತಿ ಶಿಬಿರ, ಗಿಡ ನಾಟಿಗೆ ಚಾಲನೆ
ಪರಿವಾರದ ಕಾರ್ಯದರ್ಶಿ ನಟರಾಜ್ ದೇವಡಿಗ ನಿರೂಪಿಸಿದರು. ಮುಖ್ಯಾಧ್ಯಾಪಕಿ ಆಶಾ ಕಲ್ಮನೆ ಸ್ವಾಗತಿಸಿ, ಮಾತನಾಡಿದರು. ಶಿಕ್ಷಕಿ ಲೀಲಾವತಿ ಮೊಗೇರ ವಂದಿಸಿದರು. ಗುರು ನಮನ ಬಳಗದ ಖಜಾಂಚಿ ರಾಮ ನಾಯ್ಕ ತಟ್ಟಿಹಕ್ಕಲ, ದೈಹಿಕ ಶಿಕ್ಷಣ ಶಿಕ್ಷಕ ಅರುಣ ಗೌಡ, ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಮತ್ತು ಪಾಲಕರು ಉಪಸ್ಥಿತರಿದ್ದರು.
Saraf Memorial Award/ ಡಾ ಆರ್ ವಿ ಸರಾಫ್ ಸಂಸ್ಮರಣಾ ಪ್ರಶಸ್ತಿ ಕರಿಯಾ ಗೊಂಡಗೆ ಪ್ರದಾನ: ಯಾರಿವರು ಗೊತ್ತಾ?



