ಭಟ್ಕಳ: ಮುರುಡೇಶ್ವರದ (Murudeshwar) ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ (RNS PU College) ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು (Doctor’s Day) ಆಚರಿಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಆರ್ ಎನ್ ಎಸ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಚೇತನ್ ಕಲ್ಕೂರ ವಿದ್ಯಾರ್ಥಿಗಳನ್ನು ಕುರಿತಂತೆ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಸರಿಯಾಗಿ ನಿಭಾಯಿಸಲು ಯೋಗ, ವ್ಯಾಯಾಮದ ಜೊತೆಗೆ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದರು.

school bags/ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್ ವಿತರಣೆ

ಮುರುಡೇಶ್ವರದ (Murdeshwar) ವೇದ ಕ್ಲಿನಿಕ್ ವೈದ್ಯ ಡಾ ಜಿ ಮನೋಜ, ವಾರ್ಷಿಕ ಸಂಯೋಜಕ ಕೃಷ್ಣಪ್ರಸಾದ್ ಪಿ ಉಪಸ್ಥಿತರಿದ್ದರು. ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ (RNS PU College) ಪ್ರಾಚಾರ್ಯೆ ಅಶ್ವಿನಿ ಶೇಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಉಪನ್ಯಾಸಕರು, ಪ್ರಥಮ ಹಾಗೂ ದ್ವಿತೀಯ ವರ್ಷದ ಜೀವಶಾಸ್ತ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿಹಾರಿಕ ನಾಯಕ ನಿರೂಪಿಸಿದರು.

Letter of Appreciation/ ಭಟ್ಕಳದ ಇಬ್ಬರು ಸಿಬ್ಬಂದಿಗೆ ಎಸ್‌ಪಿ ಗೌರವ