ಭಟ್ಕಳ: ವಿವಾಹದ ನಂತರ ಹಲವು ವರ್ಷಗಳಿಂದ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಾ, ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆಸಲಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪತಿ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (Case registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗೊರಟೆಯ ಜಾಣನಮನೆಯ ನಿವಾಸಿ ಮಾನಸಾ (ಕಾವ್ಯ) ಮೊಗೇರ ನೀಡಿದ ದೂರಿನ ಮೇರೆಗೆ, ಪತಿ ಶ್ರೀಧರ ಮೊಗೇರ, ಮಾವ ಪರಮೇಶ್ವರ ಶನಿಯಾರ ಮೊಗೇರ, ಅತ್ತೆ ಪದ್ಮಾವತಿ ಹಾಗೂ ಮೈದುನರಾದ ಯೋಗೇಶ್ವರ ಮತ್ತು ಆನಂದ ವಿರುದ್ಧ ಪ್ರಕರಣ ದಾಖಲಾಗಿದೆ.

RNSPU College/ ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ಸಮಾರಂಭ

ದೂರಿನಲ್ಲಿ ತಿಳಿಸಿರುವಂತೆ, ೨೦೧೬ರಲ್ಲಿ ವಿವಾಹವಾದ ಬಳಿಕ ವರದಕ್ಷಿಣೆ ತರುವಂತೆ ನಿರಂತರ ಒತ್ತಡ ಹೇರಲಾಗುತ್ತಿತ್ತು. ತವರು ಮನೆಯಿಂದ ಹಣ ತರದಿದ್ದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾನಸಿಕವಾಗಿ ಕುಗ್ಗಿಸುವುದರ ಜೊತೆಗೆ ದೈಹಿಕ ಹಲ್ಲೆಯನ್ನೂ ನಡೆಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

Coaching/ ಸಿಎ ಫೌಂಡೇಶನ್, ಸಿಎಸ್ ಪ್ರವೇಶ ಪರೀಕ್ಷೆ ತರಬೇತಿ ಉದ್ಘಾಟನೆ 

೨೦೨೪ರಲ್ಲಿ ಮನೆಯಿಂದ ಹೊರಹಾಕಲಾಗಿದ್ದು, ಬಳಿಕವೂ ಕುಟುಂಬಸ್ಥರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟು ವರ್ಷ ಕುಟುಂಬ ಉಳಿಸಿಕೊಳ್ಳುವ ಉದ್ದೇಶದಿಂದ ಎಲ್ಲವನ್ನೂ ಸಹಿಸಿಕೊಂಡಿದ್ದರೂ, ಕಿರುಕುಳ ಮುಂದುವರಿದ ಹಿನ್ನೆಲೆಯಲ್ಲಿ ಕಾನೂನಿನ ಮೊರೆ ಹೋಗಬೇಕಾಯಿತು ಎಂದು ದೂರಿನಲ್ಲಿ ತಿಳಿಸಿದ್ದಾರೆ.

Chippikallu Tragedy/ ಬಾವಿಗೆ ಹಾರಿದ ಚಿಪ್ಪಿಕಲ್ಲು ಸಂತ್ರಸ್ತ 

ಈ ದೂರಿನ ಆಧಾರದಲ್ಲಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಾಗಿದ್ದು (Case registered), ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Farming lessons/ ಗದ್ದೆಯಲ್ಲೇ ಕೃಷಿ ಪಾಠ