ಭಟ್ಕಳ: ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಭಟ್ಕಳ ತಾಲೂಕಿನ ಗೊಂಡ ಸಮುದಾಯದ (Gonda community) ಜನರು ಮೇ ೧೯ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರಕ್ಕೆ (State government) ಮನವಿ ಸಲ್ಲಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಗೊಂಡ ಸಮಾಜ ಅಭಿವೃದ್ಧಿ ಸಂಘದ ಭಟ್ಕಳ (Bhatkal) ತಾಲೂಕು ಅಧ್ಯಕ್ಷ ರಾಘವೇಂದ್ರ ಎಸ್ ಗೊಂಡ ನೇತೃತ್ವದಲ್ಲಿ ಗೊಂಡ ಸಮಾಜದ (Gonda community) ೯೫೦ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಂಗಳವಾರ ಬೆಳಿಗ್ಗೆ ಕೋಕ್ತಿ ಬೈಲ್ ನಿಂದ ಬಂದರ ರಸ್ತೆ ೨ನೇ ಕ್ರಾಸ್, ಅಲ್ಲಿಂದ ವೆಂಕಟರಮಣ ದೇವಸ್ಥಾನ ರಸ್ತೆಯ ಮೂಲಕ ಬಂದು, ನೂರ ಮಸೀದಿ ಪಕ್ಕ ರಾಷ್ಟ್ರೀಯ ಹೆದ್ದಾರಿ ೬೬ರ ಮೂಲಕ ತಾಲೂಕು ಸೌಧದ ಎದುರು ಮೌನ ಮೆರವಣಿಗೆ ಬಂದು ತಲುಪಿತು. ಗೊಂಡ ಸಮುದಾಯಕ್ಕೆ ಸೇರಿದ ನಮಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಶಿರಸ್ತೇದಾರ್ ಪ್ರವೀಣ್ ನಾಯ್ಕ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ (CM Siddaramaiah) ಮನವಿ ಪತ್ರ ಕಳುಹಿಸಲಾಯಿತು.
power outages/ ಮಣ್ಣಕುಳಿ ಭಾಗದಲ್ಲಿ ನಿರಂತರ ವಿದ್ಯುತ್ ವ್ಯತ್ಯಯ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ
ಭಟ್ಕಳ ತಾಲೂಕಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಗೊಂಡ ಬುಡಕಟ್ಟಿನವರು (tribe) ವಾಸಿಸಿಕೊಂಡು ಬಂದಿದೆ. ಭಟ್ಕಳ ತಾಲೂಕಿನಾದ್ಯಂತ ಗೊಂಡ ಬುಡಕಟ್ಟಿನವರಾದ ಸುಮಾರು ೧೫೦೦೦ಕ್ಕೂ ಅಧಿಕವಾಗಿರುವಂತಹ ಜನಸಂಖ್ಯೆಯನ್ನು ಹೊಂದಿದೆ. ಗೊಂಡ ಬುಡಕಟ್ಟಿನವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ದುರ್ಬಲರಾಗಿದ್ದು, ಹೆಚ್ಚಿನವರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಗೊಂಡ ಬುಡಕಟ್ಟು ಸಮುದಾಯ ತಲ-ತಲಾಂತರಗಳಿಂದ ಬಂದಿರುವ ಸಮಾಜ ಭೌಗೋಳಿಕವಾಗಿ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಕೇಂದ್ರಿಕೃತಗೊಂಡು ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor) ತಾಲೂಕು ಹಾಗೂ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ(Sagar)ದವರೆಗೆ ಹರಡಿಕೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Doctor Mama/ ‘ಡಾಕ್ಟರ್ ಮಾಮ’ ಎಂದು ಇನ್ನು ಯಾರನ್ನು ಕರೆಯಲಿ?
ಭಾರತದ ಸಂವಿಧಾನದ ರಚನೆಯ ನಂತರ (೧೯೫೦) ಗೊಂಡ ಬುಡಕಟ್ಟಿನ ಪರಿಶಿಷ್ಟ ವರ್ಗದ ಪ್ರಮಾಣಪತ್ರವನ್ನು ನೀಡಲು ಪ್ರಾರಂಭಿಸಿದ್ದು, ಆ ಸಂಧರ್ಭದಲ್ಲಿ ಏರಿಯಾ ರಿಸ್ಟ್ರಿಕ್ಷನ್ ಇದ್ದರೂ ಕೂಡ ಉತ್ತರ ಕನ್ನಡ(Uttara Kannada)ದಲ್ಲಿರುವ ಗೊಂಡರೆಲ್ಲರೂ ಪರಿಶಿಷ್ಟ ವರ್ಗದ ಗೊಂಡರು ಎಂದು ಸಂವಿಧಾನದಲ್ಲಿನ ಮೀಸಲು ಪ್ರಕಾರ ಪರಿಶಿಷ್ಟ ವರ್ಗದ ಪ್ರಮಾಣಪತ್ರ ನೀಡುವಂತೆ ಆದೇಶ ಆಗಿದೆ. ಅಲ್ಲದೇ ದಿನಾಂಕ ೧೦/೧೨/೧೯೫೬ರಲ್ಲಿ ಮೈಸೂರು (Mysuru) ಸರ್ಕಾರವು ಭಾರತ ಸರ್ಕಾರದ ಆದೇಶದ ಮೇಲೆ ಮೈಸೂರು ಗಜೆಟೆನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬುಡಕಟ್ಟಿನ ಮತ್ತು ಜಿಲ್ಲೆಗಳ ಯಾದಿಯಲ್ಲಿ ಉತ್ತರ ಕನ್ನಡದಲ್ಲಿರುವ ಗೊಂಡ ಬುಡಕಟ್ಟಿನ ಜನರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎನ್ನುವುದನ್ನು ಪ್ರಕಟಿಸಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Dr Ramesh Saraf/ ಅಗಲಿದ ಭಟ್ಕಳದ ಸಾಹಿತ್ಯಕ, ಸಾಂಸ್ಕೃತಿಕ ಮನಸ್ಸು
ಗೊಂಡ ಸಮುದಾಯದವರು ಸಂವಿಧಾನವು ನೀಡಿರುವ ಹಕ್ಕನ್ನು ಈ ಹಿಂದಿನಿಂದಲೂ ಪಡೆದುಕೊಂಡು ಬಂದಿದ್ದರೂ ಕೆಲವು ದಿನಗಳಿಂದ “ಗೊಂಡ” ಜಾತಿಯ ಜನರು “ಗೊಂಡ್” ಬುಡಕಟ್ಟಿನ ಜನರಾಗಿರುವುದಿಲ್ಲ ಎಂದು ತಪ್ಪಾಗಿ ಅರ್ಥೈಸಿ ನಮಗೆ ಜಾತಿ ಪ್ರಮಾಣಪತ್ರವನ್ನು ಮತ್ತು ಸಿಂಧುತ್ವ ಪ್ರಮಾಣಪತ್ರವನ್ನು ನೀಡುವಲ್ಲಿ ತೊಂದರೆಯನ್ನುಂಟು ಮಾಡಲಾಗಿದೆ. ಹಾಲಿ ಜಾತಿ ಪ್ರಮಾಣಪತ್ರವನ್ನು ಉದ್ದೇಶಪೂರ್ವಕವಾಗಿ ನಿರಾಕರಿಸಿ ನಮ್ಮನ್ನು ಸಂವಿಧಾನಬದ್ಧ ಹಕ್ಕಿನಿಂದ ವಂಚಿತರನ್ನಾಗಿಸಲಾಗುತ್ತಿದೆ. ಕಾರಣ “ಗೊಂಡ್” ಮತ್ತು “ಗೊಂಡ” ಎರಡೂ ಹೆಸರುಗಳು ಒಂದೇ ಎಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳ ಸ್ಪಷ್ಟಿಕರಣದ ಆದೇಶವಿದ್ದಾಗ್ಯೂ ನಮಗೆ ಜಾತಿ ಪ್ರಮಾಣಪತ್ರವನ್ನು ನೀಡಲು ತಹಶೀಲ್ದಾರರು ನಿರಾಕರಿಸುತ್ತಿದ್ದಾರೆ. ಕನ್ನಡದ ಗೊಂಡ ಎಂದು ನಮೂದಾಗಿರುವ ಶಾಲಾ ಧೃಢೀಕರಣ ಇದ್ದಾಗ ಜಾತಿ ಪ್ರಮಾಣ ಪತ್ರ ನೀಡಲು ಆದೇಶ ನೀಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
Cattle transporters/ ಅರಣ್ಯ ಇಲಾಖೆ ಜೀಪ್ ಕಂಡೊಡನೆ ಕಾರು ಬಿಟ್ಟು ಪರಾರಿಯಾದ ಜಾನುವಾರು ಸಾಗಾಟಗಾರರು
ಗೊಂಡ ಬುಡಕಟ್ಟಿಗೆ ಸೇರಿದ ಜನರ ಜಾತಿ ಪ್ರಮಾಣಪತ್ರವನ್ನು ನೀಡುವಲ್ಲಿ ಶಾಲಾ ದಾಖಲಾತಿಗಳು ಲಭ್ಯವಿರದ ಪಕ್ಷದಲ್ಲಿ ಅಥವಾ ಶಾಲಾ ದಾಖಲಾತಿಗಳು ತಪ್ಪಾಗಿದ್ದ ಪಕ್ಷದಲ್ಲಿ ದಾಖಲಾತಿಯೊಂದನ್ನೇ ಆಧಾರವಾಗಿಟ್ಟುಕೊಳ್ಳದೇ ಸ್ಥಾನಿಕ ಚೌಕಾಶಿ ಮಾಡಿ ಜಾತಿ ಪ್ರಮಾಣಪತ್ರವನ್ನು ನೀಡುವಂತೆ ತಹಶೀಲ್ದಾರರಿಗೆ ಸೂಕ್ತ ಆದೇಶವನ್ನು ಮಾಡುವುದು ಮತ್ತು ಜಾತಿ ಪ್ರಮಾಣಪತ್ರ ಪ್ರಮಾಣಪತ್ರ ನೀಡುವಲ್ಲಿ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಆದೇಶಿಸಬೇಕು. ಜಾತಿ ಮತ್ತು ಸಿಂಧುತ್ವದ ಕುರಿತು ಯಾವುದೇ ಮೂರನೇ ವ್ಯಕ್ತಿಯು ತಕರಾರು ಸಲ್ಲಿಸಿದಲ್ಲಿ ಸದ್ರಿ ತಕರಾರನ್ನು ಪರಿಗಣಿಸದೇ ಅಂತಹ ತಕರಾರುಗಳನ್ನು ವಿಲೆಗೆ ತರಬೇಕು. ಆದಷ್ಟು ಬೇಗ ಗೊಂಡ ಜಾತಿಯನ್ನು ಓಟಿಸಿ ಕ್ರಮದಡಿಯಲ್ಲಿ ಅಳವಡಿಸಿ ಜಾತಿ ಪ್ರಮಾಣಪತ್ರ ವಿತರಿಸುವ ಏರ್ಪಾಡು ಮಾಡಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.



