ಭಟ್ಕಳ: ಇಲ್ಲಿನ ಸರ್ಕಾರಿ ಆಸ್ಪತ್ರೆ ರಸ್ತೆ (Government Hospital road) ಸಂಪೂರ್ಣ ಹದಗೆಟ್ಟರೂ ಈವರೆಗೆ ದುರಸ್ತಿ ಮಾಡದಿರುವುದಕ್ಕೆ ಜನರು ರಸ್ತೆ ಮಧ್ಯೆ ಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸರ್ಕಾರಿ ಆಸ್ಪತ್ರೆಗೆ ಹೋಗುವ ಈ ಪ್ರಮುಖ ರಸ್ತೆ (Government Hospital road) ಹಲವು ವರ್ಷಗಳಿಂದ ಹೊಂಡ-ಗುಂಡಿಗಳಿಂದ ತುಂಬಿದ್ದು, ಇತ್ತೀಚಿನ ಮಳೆಗೆ ಮತ್ತಷ್ಟು ಹಾಳಾಗಿದೆ. ರಸ್ತೆಯ ದೊಡ್ಡ ದೊಡ್ಡ ಹೊಂಡಗಳಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನಿಗರು, ಪಾದಚಾರಿಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಆಂಬುಲೆನ್ಸ್ ಸೇರಿದಂತೆ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಕರೆತರುವ ವಾಹನಗಳಿಗೆ ಈ ರಸ್ತೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿದೆ. ರಸ್ತೆ ದುರಸ್ತಿ ಮಾಡುವಂತೆ ಜನರು ಮತ್ತು ಸ್ಥಳೀಯರು ಹಲವು ಬಾರಿ ತಡಿಯಾಡಳಿತ ಮತ್ತು ಶಾಸಕರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮಕೈಗೊಳ್ಳದ ಹಿನ್ನೆಲೆಯಲ್ಲಿ, ಜನರು ರಸ್ತೆಯ ಗುಂಡಿಯಲ್ಲೇ ಗಿಡ ನೆಟ್ಟು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
Porter assaulted/ ಭಟ್ಕಳ ರೈಲ್ವೆ ನಿಲ್ದಾಣದ ಹಮಾಲಿ ಮೇಲೆ ಹಲ್ಲೆ
ಆಸ್ಪತ್ರೆಯಂತಹ ಅತ್ಯಂತ ಮಹತ್ವದ ಸರ್ಕಾರಿ ಸಂಸ್ಥೆಗೆ ಸಂಪರ್ಕ ಕಲ್ಪಿಸುವ ರಸ್ತೆ ಈ ಮಟ್ಟಿಗೆ ಹದಗೆಟ್ಟಿರುವುದು ಆಡಳಿತದ ತೀವ್ರ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಸ್ಥಳೀಯ ಶಾಸಕ (MLA) ಮಂಕಾಳ ವೈದ್ಯ (Mankal Vaidya) ಸಚಿವ ಸ್ಥಾನ (Minister) ಅಲಂಕರಿಸಿದ್ದರೂ ಈ ರಸ್ತೆಯ ದುರವಸ್ಥೆಗೆ ಮುಕ್ತಿ ಸಿಕ್ಕಿಲ್ಲ ಎಂದು ಜನರು ಆರೋಪಿಸಿದ್ದಾರೆ. ಭಟ್ಕಳ ತಾಲೂಕು ಆಸ್ಪತ್ರೆಯ ಈ ರಸ್ತೆಯನ್ನು ತಕ್ಷಣವೇ ದುರಸ್ತಿ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Government School/ ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಒಂದಾದ ಹಳೆಯ ವಿದ್ಯಾರ್ಥಿಗಳು


