ಭಟ್ಕಳ: ಸ್ಟಾಂಡರ್ಡ ಕಾರ್ಗೋ ಸರ್ವೀಸ್ ನಡೆಸುವ ರಾಜೇಶ ನಾಯ್ಕ ತಮ್ಮ ಸಹಚರ ಸಚಿನ್ ನಾಯ್ಕ ಜತೆ ಸೇರಿ ರೈಲ್ವೆ ನಿಲ್ದಾಣದ ಹಮಾಲಿ ಗಣಪತಿ ನಾಯ್ಕ ಅವರಿಗೆ ಹೊಡೆದಿರುವ (Porter assaulted) ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (case registered). ರೈಲಿನ ಮೂಲಕ ಬಂದ ಪಾರ್ಸಲ್’ಗಳನ್ನು ಕಮರ್ಷಿಯಲ್ ಅಧಿಕಾರಿಗಳ ಮುಂದೆ ಹಾಜರುಪಡಿಸಿದ ಕಾರಣ ಹಲ್ಲೆ ಮಾಡಿದ್ದಾರೆ (Porter assaulted) ಎಂದು ದೂರಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಮುಟ್ಟಳ್ಳಿ ಮುಂಡಳ್ಳಿಮನೆಯ ಗಣಪತಿ ನಾರಾಯಣ ನಾಯ್ಕ ಅವರು ಐದು ವರ್ಷದಿಂದ ರೈಲ್ವೆ ನಿಲ್ದಾಣದಲ್ಲಿ (railway station) ಹಮಾಲಿಯಾಗಿದ್ದಾರೆ. ಭಟ್ಕಳದ ರಘುನಾಥ ರೋಡಿನಲ್ಲಿರುವ ರಾಜೇಶ ನಾರಾಯಣ ನಾಯ್ಕ ಅವರ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ಹಾಗೂ ಸುಕ್ರಪ್ಪ ಮಾದೇವ ನಾಯ್ಕ ಅವರ ಎಸ್ ಎಂ ರೈಲ್ವೆ ಟ್ರಾನ್ಸಫರ್ ಎಂಬ ಹೆಸರಿನ ಪಾರ್ಸಲನ್ನು ಹಿಡಿದು ಅಧಿಕಾರಿಗಳ ಮುಂದೆ ಹಾಜರುಪಡಿಸುತ್ತಾರೆ. ಮುಂಡಳ್ಳಿಯ ಸಚಿನ್ ನಾರಾಯಣ ನಾಯ್ಕ, ತಲಾಂದ ಹೊಸ್ಮನೆಯ ಮಾದೇವ ಈರಪ್ಪ ನಾಯ್ಕ, ಮುಟ್ಟಳ್ಳಿ ಬಗ್ಗಿಮನೆಯ ಕೃಷ್ಣ ಗೋವಿಂದ ನಾಯ್ಕ, ಮುಟ್ಟಳ್ಳಿ ನರ್ಸತ್ತಿಮನೆಯ ಗಣಪತಿ ನಾರಾಯಣ ನಾಯ್ಕ ಅವರು ಸಹ ಅಲ್ಲಿಯೇ ಹಮಾಲಿ ಕೆಲಸ ಮಾಡಿಕೊಂಡಿದ್ದು, ಅವರೆಲ್ಲರೂ ಸೇರಿ ದೊಡ್ಡ ದೊಡ್ಡ ಪಾರ್ಸಲ್ ಇಳಿಸಿ ಅದನ್ನು ವಾಣಿಜ್ಯ ಅಧಿಕಾರಿಗಳ ಗಮನಕ್ಕೆ ತರುತ್ತಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Competitive Exams/ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆಗೈದ ಅನೀಶ್ ನಾಯ್ಕಗೆ ಸನ್ಮಾನ
ಅದರಂತೆ, ಜುಲೈ ೭ರಂದು ಪಂಚಗಂಗಾ ಎಕ್ಸಪ್ರೆಸ್ (panchaganga express) ರೈಲಿನಲ್ಲಿ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ಹೆಸರಿನಲ್ಲಿ ಪಾರ್ಸಲ್ ಬಂದಿದೆ. ಅದನ್ನು ಅಲ್ಲಿನ ಹಮಾಲಿಗಳಾದ ಗಣಪತಿ ನಾಯ್ಕ ಅವರ ಜೊತೆ ಮಾದೇವ ನಾಯ್ಕ, ಕೃಷ್ಣ ನಾಯ್ಕ ಸೇರಿ ಇಳಿಸಿದ್ದಾರೆ. ನಂತರ ಅದನ್ನು ಕಮರ್ಶಿಯಲ್ ಅಧಿಕಾರಿಗಳ (commercial officer) ಬಳಿ ಒಯ್ಯುವಾಗ ಅಲ್ಲಿಗೆ ಧಾವಿಸಿ ಬಂದ ಸ್ಟಾಂಡರ್ಡ ಕಾರ್ಗೋ ಸರ್ವೀಸ್ ನಡೆಸುವ ರಾಜೇಶ ನಾರಾಯಣ ನಾಯ್ಕ ಹಾಗೂ ಮುಂಡಳ್ಳಿ ಪಟೇಲಮನೆಯ ಸಚಿನ್ ನಾರಾಯಣ ನಾಯ್ಕ ಸೇರಿ ಅಡ್ಡಗಟ್ಟಿದ್ದಾರೆ. `ಆ ಪಾರ್ಸಲ್ ಅಧಿಕಾರಿಗಳಿಗೆ ಕೊಡಬೇಡಿ’ ಎಂದು ತಾಕೀತು ಮಾಡಿದ್ದಾರೆ. ಜೊತೆಗೆ ಗಣಪತಿ ನಾಯ್ಕ ಅವರನ್ನು ಹೊಡೆದು ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿತರು ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Government School/ ಸರ್ಕಾರಿ ಶಾಲೆ ಅಭಿವೃದ್ಧಿಗೆ ಪಣ: ಒಂದಾದ ಹಳೆಯ ವಿದ್ಯಾರ್ಥಿಗಳು


