ಭಟ್ಕಳ: ತಾಲೂಕಿನ ಮುರುಡೇಶ್ವರ (Murudeshwara) ರೈಲ್ವೆ ನಿಲ್ದಾಣದಲ್ಲಿ (railway station) ರವಿವಾರ ಬೆಳಿಗ್ಗೆ ಚಲಿಸುವ ರೈಲಿನಿಂದ ಇಳಿಯಲು ಯತ್ನಿಸಿ ಕಾಲು ಜಾರಿ ಬಿದ್ದ ೨೨ ವರ್ಷದ ಮೊಹಮ್ಮದ ಗಫೂರ್ ಎಂಬ ಯುವಕನನ್ನು ರೈಲ್ವೆ ಸಿಬ್ಬಂದಿ ಗಣಪತಿ ನಾಯ್ಕ ರಕ್ಷಿಸಿದ್ದಾರೆ (Punctuality).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೊಚ್ಚಿವಲ್ಲಿಯಿಂದ ಗಂಗಾನಗರಕ್ಕೆ ತೆರಳುತ್ತಿದ್ದ ರೈಲು ಮುರುಡೇಶ್ವರ (Murdeshwar) ನಿಲ್ದಾಣಕ್ಕೆ ಬರುತ್ತಿದ್ದಂತೆ ಗಫೂರ್ ಗಾಬರಿಯಿಂದ ಕೆಳಗೆ ಜಿಗಿದಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಅವರು ರೈಲಿನ ಅಡಿಗೆ ಸಿಲುಕುವ ಸ್ಥಿತಿಯಲ್ಲಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಅವರನ್ನು ಎಳೆದು ಅಪಾಯದಿಂದ ಪಾರು ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ (CC camera) ಸೆರೆಯಾಗಿದೆ. ಸಿಬ್ಬಂದಿಯ ಸಮಯಪ್ರಜ್ಞೆಗೆ (Punctuality) ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Government Hospital road/ ಸರ್ಕಾರಿ ಆಸ್ಪತ್ರೆ ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ಮಧ್ಯೆ ಗಿಡ ನೆಟ್ಟು ಪ್ರತಿಭಟನೆ


