ಭಟ್ಕಳ: ಪ್ರಧಾನ ಮಂತ್ರಿ ಜನಧನ ಯೋಜನೆಯಡಿ (Jan Dhan Yojana) ಕಡಿಮೆ ಬಡ್ಡಿದರದಲ್ಲಿ ಸಾಲ ಮಂಜೂರು (loan sanction) ಮಾಡಿಕೊಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಂದ ಹಂತ ಹಂತವಾಗಿ ₹೬೮.೫೮ ಲಕ್ಷ ಅಧಿಕ ಹಣ ಪಡೆದು ವಂಚಿಸಿದ ಆರೋಪದಡಿ (loan scam) ಮೂವರ ವಿರುದ್ಧ ಭಟ್ಕಳ (Bhatkal) ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮಾರುಕೇರಿಯ ಕೋಟಖಂಡ ಹಳ್ಳಿಕೇರಿ ನಿವಾಸಿ ಹರಿಣಿ ಗಜಾನನ ಹೆಬ್ಬಾರ ನೀಡಿದ ದೂರಿನ ಮೇರೆಗೆ ಬೆಂಗಳೂರು (Bengaluru) ಮಾರೇನಹಳ್ಳಿ ಜೆ ಪಿ ನಗರದ ನವೀನ ಕುಮಾರ, ಪ್ರಕಾಶ ಕುಮಾರ ಹಾಗೂ ಲಕ್ಷ್ಮೀ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ೨೦೨೪ರ ಫೆಬ್ರವರಿ ೧೯ರಂದು ಆರೋಪಿಗಳು ಮೊಬೈಲ್ ಕರೆ ಮಾಡಿ, ತಾವು ಪ್ರಧಾನ ಮಂತ್ರಿ ಜನಧನ ಯೋಜನೆಯ (Jan Dhan Yojana) ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ವಾಟ್ಸ್‌ಆಪ್ (Whatsapp) ಮೂಲಕ ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಿ, ಕಡಿಮೆ ಬಡ್ಡಿದರದಲ್ಲಿ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಿಕೊಡುವುದಾಗಿ ನಂಬಿಸಿದ್ದಾರೆ.

Murinakatte/ ಬದಲಾವಣೆಯಾಗದ ಮುರಿನಕಟ್ಟೆ: ಡಿಸಿಗೆ ಹಿಂದೂ ಒಕ್ಕೂಟ ಮನವಿ

ಆರಂಭದಲ್ಲಿ ಪ್ರಕ್ರಿಯೆ ಶುಲ್ಕದ ಹೆಸರಿನಲ್ಲಿ ₹೯೪,೬೪೪ ಪಡೆದ ಆರೋಪಿಗಳು, ಬಳಿಕ ಸಾಲ ಮಂಜೂರಿಗೆ ಪ್ರೊಸೆಸಿಂಗ್ ಶುಲ್ಕ, ಜಿಎಸ್‌ಟಿ, ಭದ್ರತಾ ಠೇವಣಿ, ವಿಮೆ, ಎನ್‌ಒಸಿ ಹಾಗೂ ದಾಖಲೆ ಪರಿಶೀಲನೆ ಸೇರಿದಂತೆ ವಿವಿಧ ಕಾರಣಗಳನ್ನು ನೀಡಿ ಪದೇ ಪದೇ ಹಣ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ಸೂಚನೆಯಂತೆ ಹರಿಣಿ ಹೆಬ್ಬಾರ ಅವರು, ಕರ್ನಾಟಕ ಬ್ಯಾಂಕ್ (Karnataka Bank), ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಹಾಗೂ ಕೆನರಾ ಬ್ಯಾಂಕ್ (Canara Bank) ಖಾತೆಗಳಿಗೆ ೨೦೨೪ರ ಫೆಬ್ರವರಿ ೨೦ರಿಂದ ೨೦೨೬ರ ಜನವರಿ ೨೫ರವರೆಗೆ ವಿವಿಧ ದಿನಾಂಕಗಳಲ್ಲಿ ಹಲವು ಕಂತುಗಳಲ್ಲಿ ಒಟ್ಟು ₹೬೮,೫೮,೭೫೪ ವರ್ಗಾವಣೆ ಮಾಡಿದ್ದಾರೆ.

mobile phone seized/ ಭಟ್ಕಳ ಯುವಕನ ಮೊಬೈಲ್ ಜಪ್ತಿ

ಆದರೆ ಇಷ್ಟೊಂದು ಹಣ ಪಡೆದಿದ್ದರೂ ಯಾವುದೇ ಸಾಲ ಮಂಜೂರು ಮಾಡದೇ, ಹಣವನ್ನೂ ಹಿಂದಿರುಗಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ವಂಚನೆಯಾಗಿರುವುದು ತಿಳಿದ ಬಳಿಕ ಹರೀಣಿ ಹೆಬ್ಬಾರ ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸಂಬಂಧಿತ ಕಲಂಗಳಡಿ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆ ಹಾಗೂ ವರ್ಗಾವಣೆಯಾದ ಹಣದ ಜಾಡು ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

snatching gold chain/ ಮುರ್ಡೇಶ್ವರದಲ್ಲಿ ಚಿನ್ನದ ಸರ ಸುಲಿಗೆ ಆರೋಪಿ ಸೆರೆ