ಭಟ್ಕಳ: ಮೇ ೨೪ರಂದು ನಡೆದ ಭೀಕರ ಚಿಪ್ಪಿಕಲ್ಲು ದುರಂತದಲ್ಲಿ (Chippikallu Tragedy) ಮೃತಪಟ್ಟಿದ್ದ ಶಿರಾಲಿ ಕೋಟೆಬಾಗಿಲಿನ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಿಬ್ಬಂದಿ ಲಕ್ಷ್ಮೀ ಶಿವರಾಮ ನಾಯ್ಕ ಅವರ ಕುಟುಂಬಕ್ಕೆ ಶಾಲೆಯ ಆಡಳಿತ ಮಂಡಳಿ ಮಾನವೀಯ ನೆರವು (Humanitarian aid) ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸುಮಾರು ೧೬ ವರ್ಷಗಳ ಕಾಲ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಲಕ್ಷ್ಮೀ ಶಿವರಾಮ ನಾಯ್ಕ ಅವರ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಕರ ಸಹಕಾರದೊಂದಿಗೆ ಸಂಗ್ರಹಿಸಲಾದ ₹೧,೧೦,೪೦೦ ಮೊತ್ತವನ್ನು ಅವರ ಹೆಸರಿನಲ್ಲಿ ಸ್ಥಿರ ಠೇವಣಿ (Fixed Deposit) ರೂಪದಲ್ಲಿ ಜಮೆ ಮಾಡಲಾಗಿದೆ. ಅಷ್ಟೇ ಅಲ್ಲದೆ, ಲಕ್ಷ್ಮೀ ಶಿವರಾಮ ನಾಯ್ಕ ಅವರ ಪುತ್ರನ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಶಾಲೆಯೇ ವಹಿಸಿಕೊಂಡಿದೆ (Humanitarian aid).

Jan Dhan Yojana/ ಜನಧನ ಯೋಜನೆ ಸಾಲದ ಆಮಿಷಕ್ಕೆ ₹೬೮.೫೮ ಲಕ್ಷ ಕಳಕೊಂಡ ಭಟ್ಕಳದ ಮಹಿಳೆ

ಎಲ್‌ಕೆಜಿಯಿಂದಲೇ ಶಾಲೆಯಲ್ಲಿ ಉಚಿತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಪ್ರಸ್ತುತ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಂದಿನ ವಿದ್ಯಾಭ್ಯಾಸಕ್ಕೂ ಅಗತ್ಯವಿರುವ ಎಲ್ಲ ರೀತಿಯ ನೆರವು ಹಾಗೂ ಸಹಕಾರವನ್ನು ಶಾಲೆಯ ಆಡಳಿತ ಮಂಡಳಿ ನೀಡಲಿದೆ. ಸಂಕಷ್ಟದ ಸಂದರ್ಭದಲ್ಲೂ ಸಿಬ್ಬಂದಿ ಹಾಗೂ ಅವರ ಕುಟುಂಬದ ಬೆನ್ನಿಗೆ ನಿಲ್ಲುವುದು ಶಾಲೆಯ ಸಾಮಾಜಿಕ ಬದ್ಧತೆಯ ಭಾಗವಾಗಿದೆ. ಲಕ್ಷ್ಮೀ ಶಿವರಾಮ ನಾಯ್ಕ ಅವರ ಸೇವೆ ಶಾಲೆಯ ಇತಿಹಾಸದಲ್ಲಿ ಸದಾ ಸ್ಮರಣೀಯವಾಗಿರಲಿದ್ದು, ಅವರ ಕುಟುಂಬದ ಶಿಕ್ಷಣ ಹಾಗೂ ಭವಿಷ್ಯಕ್ಕೆ ಅಗತ್ಯ ಬೆಂಬಲ ಮುಂದುವರಿಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

Murinakatte/ ಬದಲಾವಣೆಯಾಗದ ಮುರಿನಕಟ್ಟೆ: ಡಿಸಿಗೆ ಹಿಂದೂ ಒಕ್ಕೂಟ ಮನವಿ

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸ್ಯಾಮ್ಯುಯೆಲ್ ವರ್ಗೀಸ್, ಸಹ ಶಿಕ್ಷಕರಾದ ಸಿಜೋ ಸ್ಯಾಮ್ಯುಯೆಲ್, ಸಿಂಟೋ ಸ್ಯಾಮ್ಯುಯೆಲ್, ಚಂದ್ರಾವತಿ ನಾಯ್ಕ, ಜಯಶ್ರೀ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಯೋಧನ್ ಮೊಗೇರ ಮತ್ತು ಪಂಚಮಿ ಶೆಟ್ಟಿ ಉಪಸ್ಥಿತರಿದ್ದರು.

mobile phone seized/ ಭಟ್ಕಳ ಯುವಕನ ಮೊಬೈಲ್ ಜಪ್ತಿ