ಭಟ್ಕಳ: ತಾಲೂಕಿನ ಬಿಳಲಖಂಡ ಗ್ರಾಮದ ಸಾಗರ ರಸ್ತೆ (Sagar Road) ಸೇರಿದಂತೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಗ್ರಾಮವನ್ನು ಸ್ವಚ್ಛ ಹಾಗೂ ನೈರ್ಮಲ್ಯಯುತವಾಗಿಡುವ ಉದ್ದೇಶದಿಂದ ಎರಡು ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು (CCTV surveillance) ಅಳವಡಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಳಲಖಂಡ ಹಾಗೂ ಪಟ್ಟಣದ ಕೆಲವರು ಬಳಕೆಯಲ್ಲದ ವಸ್ತುಗಳು ಮತ್ತು ಇತರ ತ್ಯಾಜ್ಯವನ್ನು ಸಾಗರ ರಸ್ತೆಯ ಬದಿಯಲ್ಲಿ ತಂದು ಎಸೆಯುತ್ತಿರುವ (dumping garbage) ಬಗ್ಗೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೆ ನಿರಂತರ ದೂರು ನೀಡುತ್ತಿದ್ದರು. ಪಂಚಾಯಿತಿ ಹಾಗೂ ಸ್ಥಳೀಯರು ಹಲವು ಬಾರಿ ಸ್ವಚ್ಛತಾ ಕಾರ್ಯ ನಡೆಸಿ, ಸಾರ್ವಜನಿಕರಿಗೆ ಕಸ ಎಸೆಯದಂತೆ ಮನವಿ ಮಾಡಿದರೂ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ.
ಇದೇ ಪ್ರದೇಶದ ಸಮೀಪದಲ್ಲೇ ಪುರಸಭೆಯ ಘನತ್ಯಾಜ್ಯ ಸಂಸ್ಕರಣಾ ಘಟಕವಿದ್ದರೂ, ಕೆಲವರು ರಸ್ತೆ ಬದಿಯಲ್ಲೇ ಕಸ ಸುರಿದು ಪರಿಸರ ಹಾಗೂ ನೈರ್ಮಲ್ಯ ಹಾಳು ಮಾಡುತ್ತಿರುವುದು ಮುಂದುವರಿದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಟ್ಟಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಇಟಗಿ ಅವರ ನೇತೃತ್ವದಲ್ಲಿ ಕಸ ಎಸೆಯುವವರನ್ನು ಗುರುತಿಸಲು ಎರಡು ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು (CCTV surveillance) ಅಳವಡಿಸಲಾಗಿದೆ.
Jan Dhan Yojana/ ಜನಧನ ಯೋಜನೆ ಸಾಲದ ಆಮಿಷಕ್ಕೆ ₹೬೮.೫೮ ಲಕ್ಷ ಕಳಕೊಂಡ ಭಟ್ಕಳದ ಮಹಿಳೆ
ಪ್ರಭಾರ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ ಇಟಗಿ ಮಾತನಾಡಿ, “ಬಹಳ ದಿನಗಳಿಂದ ಬಿಳಲಖಂಡ–ಸಾಗರ ರಸ್ತೆ ಭಾಗದಲ್ಲಿ ಕಸ ಸುರಿಯುವ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಸಿಸಿಟಿವಿ ಅಳವಡಿಸಲಾಗಿದೆ. ಕ್ಯಾಮೆರಾ ಅಳವಡಿಸಿದ ನಂತರ ಕಸ ಎಸೆಯುವ ಪ್ರಕರಣಗಳು ಕಡಿಮೆಯಾಗಿರುವುದು ಗಮನಕ್ಕೆ ಬಂದಿದೆ. ಆದರೂ ಕ್ಯಾಮೆರಾಗಳನ್ನು ನಿರಂತರವಾಗಿ ಪರಿಶೀಲಿಸಲಾಗುವುದು. ಯಾರಾದರೂ ಕಸ ಎಸೆಯುತ್ತಿರುವುದು ಕಂಡುಬಂದರೆ ಮೊದಲಿಗೆ ದಂಡ ವಿಧಿಸಲಾಗುವುದು. ಮರುಕಳಿಸಿದರೆ ಘನತ್ಯಾಜ್ಯ ನಿರ್ವಹಣಾ ನಿಯಮಗಳಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
Murinakatte/ ಬದಲಾವಣೆಯಾಗದ ಮುರಿನಕಟ್ಟೆ: ಡಿಸಿಗೆ ಹಿಂದೂ ಒಕ್ಕೂಟ ಮನವಿ


