ಭಟ್ಕಳ: ಇಲ್ಲಿನ ಗ್ರಾಮೀಣ ಪೊಲೀಸರು (rural police) ಮೋಟಾರ್‌ಸೈಕಲ್ ಕಳ್ಳತನ (bike theft) ಪ್ರಕರಣವೊಂದನ್ನು ಭೇದಿಸಿದ್ದು, ಆರೋಪಿಯನ್ನು ಬಂಧಿಸಿ (arrest) ಕಳುವಾದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ (stolen two-wheeler recovered). ಬಂಧಿತನನ್ನು ಹೆಬ್ಳೆಯ ಫಿರ್ದೋಸ್ ನಗರದ ೪ನೇ ಕ್ರಾಸ್ ನಿವಾಸಿ ಸೈಯದ್ ಅಲಿ (೨೨) ಎಂದು ಗುರುತಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪೊಲೀಸರ ಪ್ರಕಾರ, ಹೆಬ್ಳೆ ಗ್ರಾಮದ ನರ್ಲೇಸರದಲ್ಲಿರುವ ಮನೆಯೊಂದರ ಅಂಗಳದಲ್ಲಿ ನಿಲ್ಲಿಸಿದ್ದ ಮೋಟಾರ್‌ಸೈಕಲ್ ಅನ್ನು ಸೈಯದ್ ಅಲಿ ಕಳವು ಮಾಡಿದ್ದನೆನ್ನಲಾಗಿದೆ. ಬೆಳ್ಕೆಯ ಜನತಾ ಕಾಲೋನಿ ನಿವಾಸಿ ಲೋಹಿತ್ ಸುಬ್ಬಯ್ಯ ಮೊಗೇರ (೨೬) ಅವರು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಈ ಬೈಕ್ ಕಳ್ಳತನದ (bike theft) ವಿಷಯ ಬೆಳಕಿಗೆ ಬಂದಿದೆ.
Gold Medal/ ಹೆಡ್ ಕಾನ್ಸ್‌ಟೇಬಲ್ ದೀಪಕ್ ನಾಯ್ಕಗೆ ಡಿಜಿ–ಐಜಿಪಿ ಶ್ಲಾಘನಾ ಚಿನ್ನದ ಪದಕ
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ ಪರಿಣಾಮ ಆರೋಪಿಯನ್ನು ಬಂಧಿಸಲಾಗಿದೆ (arrest). ಆತನ ವಶದಿಂದ ಕಳುವಾದ ಮೋಟಾರ್‌ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇನ್ಸ್‌ಪೆಕ್ಟರ್ ವೆಂಕಟೇಶ ಮುರನಾಳ ನೇತೃತ್ವದಲ್ಲಿ ಪಿಎಸ್‌ಐ ಭರಮಪ್ಪ ಬೆಳಗಲಿ ಹಾಗೂ ಪೊಲೀಸ್ ಸಿಬ್ಬಂದಿ ಮಂಜುನಾಥ್ ಗೊಂಡ ಮತ್ತು ಈರಪ್ಪ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

