ಭಟ್ಕಳ: ತಾಲೂಕಿನ ಮಾರುಕೇರಿಯ ಹೂತ್ಕಳದ ಶ್ರೀ ಆದಿಧನ್ವಂತರಿ ಕ್ಷೇತ್ರ ಧನ್ವಂತರಿ ಮಹಾವಿಷ್ಣುಮೂರ್ತಿ ವಿಘ್ನೇಶ್ವರ ದೇವಸ್ಥಾನದಲ್ಲಿ ಶನಿವಾರ ಆಷಾಢ ಶುದ್ಧ ಪ್ರಥಮ ಏಕಾದಶಿಯಂದು (Ekadashi) ಲೋಕಕಲ್ಯಾಣಾರ್ಥವಾಗಿ ಲಕ್ಷತುಳಸಿ ಅರ್ಚನೆ (Laksha Tulasi Archana) ಹಾಗೂ ಶ್ರೀರಾಮಚಂದ್ರಪುರ ಮಠದ ರಾಘವೇಶ್ವರ ಭಾರತೀ ಸ್ವಾಮಿಯವರ (Rageshwara Swamy) ಸ್ವರ್ಣ ಪಾದುಕಾ ಭಿಕ್ಷೆ ಸಂಪನ್ನಗೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಏಕಾದಶಿ (Ekadashi) ಪ್ರಯುಕ್ತ ಬೆಳಿಗ್ಗೆ ಅಭಿಷೇಕದೊಂದಿಗೆ ವಿಘ್ನೇಶ್ವರ ದೇವರಿಗೆ ಸಹಸ್ರ ದೂರ್ವಾಚನೆ, ವಿಶೇಷ ಅಲಂಕಾರ ಪೂಜೆ, ಶ್ರೀ ಧನ್ವಂತರಿಯಲ್ಲಿ ಶ್ರೀಸೂಕ್ತ, ಪುರುಷಸೂಕ್ತಾದಿ ವಿಶೇಷ ಅಭಿಷೇಕಗಳು,ಕಲ್ಪೋಕ್ತ ಮಹಾಪೂಜೆ ಲಕ್ಷ ತುಳಸಿ ಅರ್ಚನೆ ಹಾಗೂ ಸಾಮೂಹಿಕ ವಿಷ್ಣು ಪಾರಾಯಣ, ಸ್ವರ್ಣ ಪಾದುಕೆ ಪೂಜೆ, ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ ಭಕ್ತಾಧಿಗಳಿಗೆ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.
felicitation/ ಆಟೋ ಚಾಲಕರ-ಮಾಲಕರ ಸಂಘದಿಂದ ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಸನ್ಮಾನ
ದೇವಸ್ಥಾನದ ಪ್ರಧಾನ ಅರ್ಚಕ ಶಂಕರ ಭಟ್ಟ ಇವರ ನೇತೃತ್ವದಲ್ಲಿ ವೇ ಮೂ ಗುರು ಉಪಾಧ್ಯಾಯ, ವಿನಾಯಕ ಭಟ್ಟ ಬೆಟ್ಕೂರು, ವಿನಾಯುಕ ಉಪಾಧ್ಯಾಯ, ವಿನಯ ಉಪಾಧ್ಯಾಯ, ಶೇಖರ ಉಪಾಧ್ಯಾಯ, ಗಣಪಯ್ಯ ಹೆಗಡೆ ಸೇರಿದಂತೆ ೫೦ಕ್ಕೂ ಅಧಿಕ ಪುರೋಹಿತರು ಲಕ್ಷ ತುಳಸಿ ಅರ್ಚನೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಾತೆಯರು ವಿಷ್ಣು ಸಹಸ್ರನಾಮ ಓದಿ ಕುಂಕುಮಾರ್ಚನೆ ನೆರವೇರಿಸಿದರು.
Punyatithi/ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮಿ ಪುಣ್ಯತಿಥಿ ಸಂಪನ್ನ
ಸ್ಥಳೀಯರು ಸೇರಿದಂತೆ ಭಟ್ಕಳ (Bhatkal)!ತಾಲೂಕಿನ ವಿವಿಧ ಭಾಗದಿಂದ ಮಳೆಯ ಮಧ್ಯೆಯೂ ನೂರಾರು ಭಕ್ತರು ಆಗಮಿಸಿದ್ದರು. ಮಧ್ಯಾಹ್ನ ಸಮ್ಯಕ್ ಸಂಗೀತ ಗುರುಕುಲದ ವಿದ್ಯಾರ್ಥಿಗಳಿಂದ ಭಕ್ತಿ ಸಂಗೀತ ನಡೆಯಿತು. ಸಂಜೆ ಶ್ರೀ ಶಿವಶಾಂತಿಕಾ ಕಲಾವರ್ಧಕ ಸಂಘ ಮತ್ತು ಅತಿಥಿ ಕಲಾವಿದರಿಂದ ಏರ್ಪಡಿಸಲಾದ ಪಟ್ಟಾಭಿಷೇಕ ಯಕ್ಷಗಾನ (Yakshagana) ತಾಳಮದ್ದಲೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
Sports Meet/ ಸಿಐಎಸ್ಸಿಇ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿದ್ಯಾಂಜಲಿ ಶಾಲೆಗೆ ಪದಕಗಳ ಸುರಿಮಳೆ

