ಭಟ್ಕಳ ಡೈರಿ ವಿಶೇಷ ವರದಿ

ಭಟ್ಕಳ: ಉತ್ತರ ಕನ್ನಡ (Uttara Kannada) ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (Vishveshwara Hegde Kageri) ಆರು ಬಾರಿ ಶಾಸಕರಾಗಿದ್ದವರು, ಒಮ್ಮೆ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿಯವರ ಕಾರ್ಯಾಲಯದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ವಿಧಾನಸಭೆಯ ಸ್ಪೀಕರ್ ಆಗಿ ಕೂಡ ಜವಾಬ್ದಾರಿ ನಿರ್ವಹಿಸಿದ್ದಾರೆ. ೪-೫ ದಶಕಗಳಿಂದ ರಾಜಕೀಯದಲ್ಲಿದ್ದು ಇಷ್ಟೆಲ್ಲ ಅನುಭವವಿದ್ದರೂ, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS) ಅನುದಾನ ಬಳಸಿಕೊಳ್ಳುವಲ್ಲಿ (grant allocation) ಅನುಭವಿ ಸಂಸದರು ಸೋತಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೌದು, ಎಂಪಿಲ್ಯಾಡ್ಸ್ ಡ್ಯಾಶ್‌ಬೋರ್ಡ್ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ೧೪.೭೦ ಕೋಟಿ ರೂ ಅನುದಾನದಲ್ಲಿ (grant allocation) ಇದುವರೆಗೆ ೩.೦೬೫ ಕೋಟಿ ರೂ (೨೦.೯%) ಮಾತ್ರ ಬಳಕೆಯಾಗಿದೆ. ಅಂದರೆ, ೧೧.೬೩೫ ಕೋಟಿ ರೂ ಅನುದಾನ ಇನ್ನೂ ಬಳಕೆಯಾಗದೆ ಉಳಿದಿದೆ.

missing fisherman/ ನಾಪತ್ತೆಯಾಗಿದ್ದ ಮೀನುಗಾರನ ಶವ ಪತ್ತೆ

ಇದಕ್ಕಿಂತ ಗಮನಾರ್ಹ ಅಂಶವೆಂದರೆ, ಸಂಸದರಾಗಿ ಎರಡೂವರೆ ವರ್ಷವಾದರೂ ಶಿಫಾರಸು ಮಾಡಲಾದ ೨೦ ಕಾಮಗಾರಿಗಳಲ್ಲಿ ಒಂದೇ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ. ಸುಮಾರು ೩.೧೦ ಕೋಟಿ ರೂ ಪಾವತಿ ಆಗಿದ್ದರೂ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎನ್ನುವುದು ಡ್ಯಾಶ್‌ಬೋರ್ಡ್ ಮಾಹಿತಿಯಿಂದ ತಿಳಿದುಬರುತ್ತದೆ.

Suspicious death/ ಶಿವಮೊಗ್ಗದ ಯುವಕ ಮುರ್ಡೇಶ್ವರದಲ್ಲಿ ಶಂಕಾಸ್ಪದ ಸಾವು

ಕಳಪೆ ಸಾಧನೆ: ೨೦.೯% ನಿಧಿ ಬಳಕೆ ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಎಂದು ‘ಪರಿಗಣಿಸಲಾಗದ’ ಮಟ್ಟದಲ್ಲಿದೆ. ಅನುದಾನದ ಸುಮಾರು ೭೯% ಇನ್ನೂ ಬಳಕೆಯಾಗದೆ ಉಳಿದಿದೆ. ಇದರಿಂದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ ಎಂಬ ಅಭಿಪ್ರಾಯ ಮೂಡುತ್ತದೆ. ಪೂರ್ಣಗೊಂಡ ಕಾಮಗಾರಿಗಳು ‘೦’ ಎನ್ನುವುದು ಆಡಳಿತಾತ್ಮಕ ಪ್ರಗತಿಯ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದ್ದರೂ ಅವು ಪೂರ್ಣಗೊಂಡಿಲ್ಲ ಎಂಬುದು ಯೋಜನೆಗಳ ಅನುಷ್ಠಾನ, ಗುತ್ತಿಗೆ ಪ್ರಕ್ರಿಯೆ ಅಥವಾ ಆಡಳಿತಾತ್ಮಕ ವಿಳಂಬದ ಸೂಚಕವಾಗಿರಬಹುದು.

Fisherman missing/ ದೋಣಿ ಪಲ್ಟಿಯಾಗಿ ಸಮುದ್ರದಲ್ಲಿ ಮೀನುಗಾರ ನಾಪತ್ತೆ

ಒಟ್ಟಾರೆ, ಸರ್ಕಾರದ ಅವಧಿ ಅರ್ಧದಷ್ಟು ಮುಗಿಯುತ್ತ ಬಂದರೂ ಎಂಪಿಲ್ಯಾಡ್ಸ್ ಡ್ಯಾಶ್‌ಬೋರ್ಡ್ನ ಲಭ್ಯ ಮಾಹಿತಿಯ ಪ್ರಕಾರ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಅನುದಾನದ ಬಳಕೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಕಾಮಗಾರಿಗಳ ಅನುಷ್ಠಾನ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ ಎಂಬ ಚಿತ್ರಣ ಕಂಡುಬರುತ್ತದೆ.

condolences/ ಮೃತರ ಮನೆಗೆ ಸಂತಾಪ ಸೂಚಿಸಲು ತೆರಳಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್!

ಏನಿದು ‘ಎಂಪಿಲ್ಯಾಡ್ಸ್ ಡ್ಯಾಶ್‌ಬೋರ್ಡ್’?

‘ಎಂಪಿಲ್ಯಾಡ್ಸ್ ಡ್ಯಾಶ್‌ಬೋರ್ಡ್’ ಎಂಬುದು ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ನೈಜ-ಸಮಯದ ಡಿಜಿಟಲ್ ಮೇಲ್ವಿಚಾರಣಾ ವ್ಯವಸ್ಥೆಯಾಗಿದೆ. ಈ ವ್ಯವಸ್ಥೆಯ ಮೂಲಕ ಅನುದಾನ ಹಂಚಿಕೆ ಮತ್ತು ಬಳಕೆಯನ್ನು ಪರಿಶೀಲಿಸಬಹುದು. ಶಿಫಾರಸು ಮಾಡಿದ ಕಾಮಗಾರಿಗಳ ಪ್ರಗತಿ ತಿಳಿಯಬಹುದು. ಕ್ಷೇತ್ರವಾರು ಮತ್ತು ರಾಜ್ಯವಾರು ಅಂಕಿ-ಅಂಶಗಳನ್ನು ವೀಕ್ಷಿಸಬಹುದು. ನಾಗರಿಕರು ಮತ್ತು ಅಧಿಕಾರಿಗಳು ಯೋಜನೆಗಳ ಅನುಷ್ಠಾನದ ಸ್ಥಿತಿಯನ್ನು ಪಾರದರ್ಶಕವಾಗಿ ಗಮನಿಸಬಹುದು.

Case registered/ ಜಾಲಿ ಯುವಕನ ವಿರುದ್ಧ ಕೇಸು ದಾಖಲು: ಯಾಕೆ ಗೊತ್ತಾ?