ಭಟ್ಕಳ: ತಾಲೂಕಿನ ಬೆಳಕೆ ಗ್ರಾಮದಲ್ಲಿ ಮೃತರ ಮನೆಗೆ ಸಂತಾಪ (condolences) ಸೂಚಿಸಲು ತೆರಳಿದ್ದ ಕುಟುಂಬದ ಸದಸ್ಯರ ಮೇಲೆಯೇ ಮಾಟ-ಮಂತ್ರ ಮಾಡಿಸಿ ತಂದೆಯ ಸಾವಿಗೆ ಕಾರಣರಾಗಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿ, ಸ್ಟೀಲ್ ರಾಡ್‌ನಿಂದ ಹೊಡೆದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಆರೋಪದಡಿ ಇಬ್ಬರ ವಿರುದ್ಧ ಭಟ್ಕಳ ಗ್ರಾಮೀಣ (Bhatkal rural) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಕೆ ಗ್ರಾಮದ ಜ್ಯೋತಿ ಮಂಜುನಾಥ ನಾಯ್ಕ ನೀಡಿದ ದೂರಿನ ಮೇರೆಗೆ, ಹೊನ್ನೆಮಡಿ ಗ್ರಾಮದ ದೇವಿದಾಸ ಮಾದೇವ ನಾಯ್ಕ (೪೨) ಹಾಗೂ ವೆಂಕಟೇಶ ಮಾದೇವ ನಾಯ್ಕ (೩೭) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನ ಪ್ರಕಾರ, ಆರೋಪಿಗಳ ತಂದೆ ನಾಲ್ಕು ದಿನಗಳ ಹಿಂದೆ ಮೃತಪಟ್ಟಿದ್ದು, ಜ್ಯೋತಿ ಅವರ ಪತಿ, ಅವರ ಅಕ್ಕ ಹಾಗೂ ಅಕ್ಕನ ಪತಿ ಮೃತರ ಮನೆಗೆ ಸಂತಾಪ (condolences) ಸೂಚಿಸಲು ತೆರಳಿದ್ದರು. ಈ ವೇಳೆ ಮೊದಲ ಆರೋಪಿ ದೇವಿದಾಸ ನಾಯ್ಕ, “ನೀವು ಮಾಟ-ಮಂತ್ರ ಮಾಡಿಸಿ ನಮ್ಮ ತಂದೆಯ ಸಾವಿಗೆ ಕಾರಣರಾಗಿದ್ದೀರಿ” ಎಂದು ಆರೋಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, “ಇನ್ನು ಮುಂದೆ ನಮ್ಮ ಮನೆಗೆ ಬರಬೇಡಿ” ಎಂದು ಬೆದರಿಕೆ ಹಾಕಿದ್ದಾನೆ.
Case registered/ ಜಾಲಿ ಯುವಕನ ವಿರುದ್ಧ ಕೇಸು ದಾಖಲು: ಯಾಕೆ ಗೊತ್ತಾ?
ಇದನ್ನು ಪ್ರಶ್ನಿಸಿದ ಜ್ಯೋತಿ ಅವರ ಪತಿಯೊಂದಿಗೆ ಎರಡನೇ ಆರೋಪಿ ವೆಂಕಟೇಶ ನಾಯ್ಕ ಕೈಯಿಂದ ಹಲ್ಲೆ ನಡೆಸಿ ತಳ್ಳಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಮೊದಲ ಆರೋಪಿ ದೇವಿದಾಸ ನಾಯ್ಕ ತನ್ನ ಕಾರಿನಲ್ಲಿದ್ದ ಸ್ಟೀಲ್ ರಾಡ್ ತೆಗೆದುಕೊಂಡು ಜ್ಯೋತಿ ಅವರ ಪತಿಯ ತಲೆಯ ಎಡಭಾಗಕ್ಕೆ ಹೊಡೆದು ಗಾಯಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
Bike accident/ ಶಿರಾಲಿಯಲ್ಲಿ ಬೈಕುಗಳ ಅಪಘಾತ: ದಂಪತಿಗೆ ಗಾಯ
ಹಲ್ಲೆ ತಡೆಯಲು ಮುಂದಾದ ಜ್ಯೋತಿ ಅವರ ಮೇಲೆಯೂ ಆರೋಪಿಗಳು ಹಲ್ಲೆ ನಡೆಸಿದ್ದು, ಈ ವೇಳೆ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡವರು ಚಿಕಿತ್ಸೆ ಪಡೆದಿದ್ದಾರೆ.

