ಭಟ್ಕಳ: ಪಟ್ಟಣದ ಜಾಲಿ ರಸ್ತೆಯ ಜಟಕೇಶ್ವರ ಅಂಗಡಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಅಧಿಕೃತ ಪರವಾನಗಿ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಡಿ ಒಬ್ಬನ ವಿರುದ್ಧ ಭಟ್ಕಳ ನಗರ (Bhatkal town) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (Case registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಾಲಿ ಸಂಪನಕೇರಿ ನಿವಾಸಿ ಈಶ್ವರ ಸೋಮಯ್ಯ ಗೊಂಡ (೨೯) ಎಂಬಾತ ಕರ್ನಾಟಕ ರಾಜ್ಯದ ವಿವಿಧ ಮಾದರಿಯ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ಬಳಿ ಸಂಗ್ರಹಿಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪಿಎಸ್‌ಐ ನವೀನ್ ನಾಯ್ಕ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿತು.
Bike accident/ ಶಿರಾಲಿಯಲ್ಲಿ ಬೈಕುಗಳ ಅಪಘಾತ: ದಂಪತಿಗೆ ಗಾಯ
ದಾಳಿಯ ವೇಳೆ ಆರೋಪಿಯ ಬಳಿ ವಿವಿಧ ಬ್ರ್ಯಾಂಡ್‌ಗಳ ಮದ್ಯದ ಪ್ಯಾಕೆಟ್‌ಗಳು ಹಾಗೂ ಬಾಟಲಿಗಳು ಪತ್ತೆಯಾಗಿದ್ದು, ಒಟ್ಟು ಸುಮಾರು ₹3,685 ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದು ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ (Case registered).

