ಭಟ್ಕಳ: ನಗರದ ಶ್ರೀ ಗುರು ಸುಧೀಂದ್ರ ಕಾಲೇಜು (SGS college) ಅಪರಾಧಶಾಸ್ತ್ರ (Criminology) ಮತ್ತು ನ್ಯಾಯಾಲಯ ವಿಜ್ಞಾನ (Forensic Science) ವಿಷಯಗಳಲ್ಲಿ ಹೊಸ ಪದವಿ ಬಿಎಸ್ಸಿ ಕೋರ್ಸ್‌ (BSc course) ಹಾಗೂ ಇದಕ್ಕಾಗಿ ಮೀಸಲಾದ ನ್ಯಾಯಾಲಯ ವಿಜ್ಞಾನ ಪ್ರಯೋಗಾಲಯವನ್ನು ಪ್ರಾರಂಭಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶನಿವಾರ ಕಾಲೇಜಿನ ‘ಶ್ರೀಮತಿ ವಿದ್ಯಾ ರಮೇಶ ಶಾನಭಾಗ ಸಭಾಂಗಣ’ದಲ್ಲಿ ನಡೆದ ಸಮಾರಂಭದಲ್ಲಿ ಈ ಹೊಸ ಬಿಎಸ್ಸಿ ಕೋರ್ಸ್ (BSc course) ಮತ್ತು ಪ್ರಯೋಗಾಲಯವನ್ನು ಉದ್ಘಾಟಿಸಿದ ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (police superintendent) ದೀಪನ್ ಎಂ ಎನ್, ಆಧುನಿಕ ಅಪರಾಧಗಳ ತನಿಖೆಯಲ್ಲಿ ನ್ಯಾಯಾಲಯ ವಿಜ್ಞಾನ ಮತ್ತು ಅಪರಾಧಶಾಸ್ತ್ರವು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಹೇಳಿದರು.

Ministerial post/ ‘ಬಾಳೆ ಎಲೆ ಹಾಕಿ ಊಟ ಬಡಿಸಿ, ಕೊನೆಯಲ್ಲಿ ಇದು ನಿಮ್ಮದಲ್ಲ ಎಂದಂತಾಗಿದೆ’

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (MIT) ಕಂಪ್ಯೂಟರ್ ಸೈನ್ಸ್ (computer science) ವಿಭಾಗದ ಪ್ರಾಧ್ಯಾಪಕರು ಹಾಗೂ ‘ಸೈಬರ್ ಸೆಕ್ಯುರಿಟಿ ನಿಕೇತನ’ದ ಸಂಯೋಜಕ ಡಾ ಶ್ರೀಕಾಂತ ಪ್ರಭು ಮಾತನಾಡಿ, ತಂತ್ರಜ್ಞಾನದ ಕ್ಷಿಪ್ರ ಬೆಳವಣಿಗೆಯೊಂದಿಗೆ ಡಿಜಿಟಲ್ (Digital) ಮತ್ತು ನ್ಯಾಯಾಲಯ ವಿಜ್ಞಾನಕ್ಕೆ ಸಂಬಂಧಿಸಿದ ಸಾಕ್ಷ್ಯಗಳ ವಿಶ್ಲೇಷಣೆಯು ಒಂದು ಪ್ರಮುಖ ಸವಾಲಾಗಿ ಪರಿಣಮಿಸಿದೆ ಎಂದು ಹೇಳಿದರು.

Kaup shootout case/ ಕಾಪು ಶೂಟೌಟ್ ಪ್ರಕರಣ: ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದ ಮೂವರ ಬಂಧನ

ಮಣಿಪಾಲದ ಸೈಬರ್ ಭದ್ರತಾ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ ನಾಗರಾಜ ಕಾಮತ ಅವರು, ಡಿಜಿಟಲ್ ಪರಿಸರದಲ್ಲಿ ಸುರಕ್ಷಿತ ಕ್ರಮಗಳು ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Mankala Vaidya/ ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಉತ್ತರ: ಕಾರವಾರದಲ್ಲಿ ಮೀನುಗಾರ ಸಮುದಾಯದ ಎಚ್ಚರಿಕೆ

ಟ್ರಸ್ಟ್‌ನ ಅಧ್ಯಕ್ಷ ಸುರೇಂದ್ರ ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಭಟ್ಕಳ ಎಜುಕೇಶನ್ ಟ್ರಸ್ಟ್‌ ಉಪಾಧ್ಯಕ್ಷ ರವೀಂದ್ರ ಜಿ ಕೊಲ್ಲೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕ ಟ್ರಸ್ಟಿ ರಾಜೇಶ ನಾಯಕ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ವಂದನಾರ್ಪಣೆ ಸಲ್ಲಿಸಿದರು. ಭಟ್ಕಳ ಡಿವೈಎಸ್‌ಪಿ (DySP) ಗಿರೀಶ್, ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್, ಪಿಎಸ್‌ಐ ನವೀನ್ ನಾಯಕ್, ಪೊಲೀಸ್ ಸಿಬ್ಬಂದಿ, ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಭಟ್ಕಳ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Pepper Well/ ರೋಚಕ ಇತಿಹಾಸ ಹೇಳುವ ಮೆಣಸಿನ ಬಾವಿ