ಹೊನ್ನಾವರ: ಭಟ್ಕಳ ಶಾಸಕ (Bhatkal MLA) ಹಾಗೂ ಮಾಜಿ ಸಚಿವ (former minister) ಮಂಕಾಳ ವೈದ್ಯ (Mankal Vaidya) ಅವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ (ministerial post) ಕೈತಪ್ಪಿರುವುದಕ್ಕೆ ಹೊನ್ನಾವರದಲ್ಲೂ (Honnavar) ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು (supporters) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಮಂಕಾಳ ವೈದ್ಯರಿಗೆ ಸಚಿವ ಸ್ಥಾನ (ministerial post) ನೀಡಬೇಕೆಂದು ಒತ್ತಾಯಿಸಿದರು. ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಕೊನೆಯ ಹಂತದಲ್ಲಿ ಹೆಸರು ಬದಲಾಯಿಸಿರುವುದು ನೋವು ತಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
Kaup shootout case/ ಕಾಪು ಶೂಟೌಟ್ ಪ್ರಕರಣ: ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದ ಮೂವರ ಬಂಧನ
“ಊಟಕ್ಕೆ ಬಾಳೆ ಎಲೆ ಹಾಕಿ, ಊಟ ಬಡಿಸಿ, ಕೊನೆಯಲ್ಲಿ ಈ ಬಾಳೆ ನಿಮ್ಮದಲ್ಲ ಎನ್ನುವ ರೀತಿಯಲ್ಲಿ ಮಂಕಾಳ ವೈದ್ಯರನ್ನು ನಡೆಸಿಕೊಳ್ಳಲಾಗಿದೆ” ಎಂದು ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು. ಟೈಪಿಂಗ್ ಮಿಸ್ಟೇಕ್ ಎಂದು ಹೇಳಿ ಕೊನೆಯ ಹಂತದಲ್ಲಿ ಹೆಸರು ಬದಲಾಯಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.
Mankala Vaidya/ ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಉತ್ತರ: ಕಾರವಾರದಲ್ಲಿ ಮೀನುಗಾರ ಸಮುದಾಯದ ಎಚ್ಚರಿಕೆ
ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಿಸಿದರೆ, ಜಿಲ್ಲೆಯ ಸ್ಥಳೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಕಷ್ಟವಾಗಬಹುದು. ಜಿಲ್ಲೆಯ ಸಮಸ್ಯೆಗಳು ಹಾಗೂ ಜನರ ಬೇಡಿಕೆಗಳ ಬಗ್ಗೆ ಉತ್ತಮ ಅರಿವು ಹೊಂದಿರುವ ಮಂಕಾಳ ವೈದ್ಯರಿಗೆ ಸಚಿವ ಸ್ಥಾನ ನೀಡುವುದು ಸೂಕ್ತ ಎಂದು ಮುಖಂಡರು ಅಭಿಪ್ರಾಯಪಟ್ಟರು. ಮುಂದಿನ ದಿನಗಳಲ್ಲಿ ಸರ್ಕಾರ ಮಂಕಾಳ ವೈದ್ಯರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
Open letter/ ಡಿಕೆಶಿಗೆ ಬಹಿರಂಗ ಪತ್ರ ಬರೆದ ಭಟ್ಕಳ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ: ಪತ್ರದಲ್ಲೇನಿದೆ ಗೊತ್ತಾ?
