ಭಟ್ಕಳ: ಗುಂಪು ಗಲಾಟೆ ತಡೆಯಲು ಹೋಗಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆ ಮಾರಣಾಂತಿ ಹಲ್ಲೆ ನಡೆದಿದ್ದು, ಗಾಯಗೊಂಡ ಇಬ್ಬರು ಸಿಬ್ಬಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಐವರ ವಿರುದ್ಧ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ (police station) ಪ್ರಕರಣ ದಾಖಲಾಗಿದೆ (complaint registered).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಗಸ್ಟ್ ೮ರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ (National Highway) ೬೬ರ ಸರ್ವಿಸ್ ರಸ್ತೆಯ ಪ್ರಜಾ ಜ್ಯೂಸ್ ಸೆಂಟರ್ ಎದುರು ಗಲಾಟೆ ನಡೆಯುತ್ತಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ತೆರಳಿದ್ದ ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಮಾರಕ ಆಯುಧಗಳಿಂದ ಹಲ್ಲೆ (assault) ನಡೆಸಿ ಕೊಲೆಗೆ ಯತ್ನಿಸಲಾಗಿದೆ.
BSc course/ ಭಟ್ಕಳದ ಸುಧೀಂದ್ರ ಕಾಲೇಜಿನಲ್ಲಿ ಫೋರೆನ್ಸಿಕ್ ಸೈನ್ಸ್ ಬಿಎಸ್ಸಿ ಕೋರ್ಸ್ ಆರಂಭ
ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ವಿನಾಯಕ ಶೆಟ್ಟಿ ನೀಡಿದ ದೂರಿನ ಪ್ರಕಾರ, ಆಗಸ್ಟ್ ೮ರ ರಾತ್ರಿ ಗಸ್ತು ಕರ್ತವ್ಯದಲ್ಲಿದ್ದಾಗ ಮುರುಡೇಶ್ವರ (Murdeshwar) ನಾಕಾ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಹೆಡ್ ಕಾನ್ಸ್ಟೇಬಲ್ ಸಂಗಪ್ಪ ಕರೆ ಮಾಡಿ ತಿಳಿಸಿದ್ದರು. ತಕ್ಷಣವೇ ಇಬ್ಬರೂ ಸ್ಥಳಕ್ಕೆ ತಲುಪಿದಾಗ, ಆರೋಪಿಗಳಾದ ರಾಜು ನಾಯ್ಕ, ಪೃಥ್ವಿಕ್ ನಾಯ್ಕ, ಮದನ ನಾಯ್ಕ, ಯೋಗೇಶ ನಾಯ್ಕ, ದರ್ಶನ ಹಾಗೂ ಇತರರು ಕಾನೂನುಬಾಹಿರವಾಗಿ ಗುಂಪುಗೂಡಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದರು. ಆ ಸಂದರ್ಭದಲ್ಲಿ ಆರೋಪಿಗಳು ಮನೋಜ ನಾಯ್ಕ ಎಂಬಾತನಿಗೆ ಚಾಕುವಿನಿಂದ ಇರಿಯಲು ಯತ್ನಿಸಿದಾಗ, ಅದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಆರೋಪಿಗಳು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವರ ಮೇಲೆಯೇ ಕೊಲೆ ಮಾಡುವ ಉದ್ದೇಶದಿಂದ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
Ministerial post/ ‘ಬಾಳೆ ಎಲೆ ಹಾಕಿ ಊಟ ಬಡಿಸಿ, ಕೊನೆಯಲ್ಲಿ ಇದು ನಿಮ್ಮದಲ್ಲ ಎಂದಂತಾಗಿದೆ’
ಆರೋಪಿ ಪೃಥ್ವಿಕ್ ನಾಯ್ಕ ತನ್ನ ಕೈಯಲ್ಲಿದ್ದ ಚಾಕುವಿನಿಂದ ಕಾನ್ಸ್ಟೇಬಲ್ ವಿನಾಯಕ ಶೆಟ್ಟಿ ಅವರ ಎಡ ಅಂಗೈಗೆ ಇರಿದು ಗಾಯಗೊಳಿಸಿದರೆ, ಇನ್ನೊಬ್ಬ ಆರೋಪಿ ರಾಜು ನಾಯ್ಕ ಹೆಡ್ ಕಾನ್ಸ್ಟೇಬಲ್ ಸಂಗಪ್ಪ ಹರಿಜನ ಅವರ ಬಲಗೈ ಮೇಲ್ಭಾಗಕ್ಕೆ ಚಾಕುವಿನಿಂದ ಬಲವಾಗಿ ಇರಿದು ತೀವ್ರ ಗಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯ ನಂತರ ಆರೋಪಿಗಳು ಪೊಲೀಸರಿಗೆ ಅಶ್ಲೀಲವಾಗಿ ಬೈದು, ಇನ್ನೊಮ್ಮೆ ತಮ್ಮ ವಿಷಯಕ್ಕೆ ಬಂದರೆ ಜೀವಂತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡ ಸಿಬ್ಬಂದಿ ಆರ್ ಎನ್ ಎಸ್ ಆಸ್ಪತ್ರೆಯಲ್ಲಿ (RNS Hospital) ಚಿಕಿತ್ಸೆ ಪಡೆದಿದ್ದಾರೆ.
Kaup shootout case/ ಕಾಪು ಶೂಟೌಟ್ ಪ್ರಕರಣ: ಬಸ್ಸಿನಲ್ಲಿ ಭಟ್ಕಳ ಕಡೆಗೆ ಪರಾರಿಯಾಗುತ್ತಿದ್ದ ಮೂವರ ಬಂಧನ
