ಭಟ್ಕಳ: ತಾಲೂಕಿನ ಕಾಯ್ಕಿಣಿ ಗ್ರಾಮದ ತೆರ‍್ನಮಕ್ಕಿಯಲ್ಲಿ ಜೈನ ಜಟಕೇಶ್ವರ ಯುವಕ ಮಂಡಲದ ವತಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ೮೦ನೇ ಸ್ವಾತಂತ್ರೋತ್ಸವದ ನೆನಪಿಗಾಗಿ ಪ್ರಯಾಣಿಕರ ತಂಗುದಾಣ (Passenger shelter) ನಿರ್ಮಿಸಿ ಶನಿವಾರ ಲೋಕಾರ್ಪಣೆಗೊಳಿಸಲಾಯಿತು.

Akhand Bharat/ ಅಖಂಡ ಭಾರತದ ಕಲ್ಪನೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು: ಜಗದೀಶ ಕಾರಂತ

ಬೆಳಿಗ್ಗೆ ೧೧ ಗಂಟೆಗೆ ಹಳೆಕೋಟೆ ಹನುಮಂತ ದೇವಸ್ಥಾನದ ಮೊಕ್ತೇಸರ ಸುಬ್ರಾಯ ಜಟ್ಟ ನಾಯ್ಕ ಅವರು ಉಪಸ್ಥಿತ ಗಣ್ಯರೊಂದಿಗೆ ಸೇರಿ ವಿದ್ಯುಕ್ತವಾಗಿ ಉದ್ಘಾಟನೆ ಮಾಡಿ ತಮ್ಮ ಊರಿನ ಯುವಕ ಮಂಡಲದ ಬಗ್ಗೆ ಮೆಚ್ಚುಗೆಯ ಮಾತನಾಡಿ ಅವರ ಸೇವಾ ಕಾರ್ಯವನ್ನು ಕೊಂಡಾಡಿದರು. ಅತಿಥಿಗಳಾದ ಎ ಎನ್ ಶೆಟ್ಟಿ ಹಾಗೂ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ಎಂ ನಾಯ್ಕ ಕಾಟಿಕಲ್ ಶುಭ ಹಾರೈಸಿದರು. ಯುವಕ ಮಂಡಲದ ಅಧ್ಯಕ್ಷ ನಾಗೇಶ ನಾಯ್ಕ ಅವರನ್ನು ಅಭಿನಂಧಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

Murudeshwar/ ಮುರುಡೇಶ್ವರದಲ್ಲಿ ಗಾಂಜಾ ಸೇವಿಸಿದ ಆರು ಜನರ ಬಂಧನ 

ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಆದ ಮೇಲೆ ಪ್ರಯಾಣಿಕರಿಗೆ ತೆರನಮಕ್ಕಿ ಭಾಗದಲ್ಲಿ ಮಳೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಒಂದು ಬಸ್ಸು ತಂಗುದಾಣ ತೀರಾ ಅವಶ್ಯಕತೆ ಇತ್ತು. ಇದನ್ನು ಮನಗಂಡ ಯುವಕ ಮಂಡಲವು ಈ ಕಾರ್ಯ ಕೈಗೊಂಡು, ಸಾರ್ವಜನಿಕ ಬಳಕೆಗೆ ಬೇಕಾದ ಪ್ರಯಾಣಿಕರ ತಂಗುದಾಣವನ್ನು (Passenger shelter) ಕೇವಲ ೨೦ರಿಂದ ೨೫ ದಿನಗಳ ಅವಧಿಯಲ್ಲಿ ಅತ್ಯಂತ ಸುಂದರವಾಗಿ ಸದೃಢವಾಗಿ ನಿರ್ಮಿಸಿ ಕೊಟ್ಟಿದ್ದಾರೆ.

Independence Day/ ಭಟ್ಕಳ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ