ಭಟ್ಕಳ: ಬಕ್ರೀದ್ ಹಬ್ಬವನ್ನು(Bakrid festival) ಶಾಂತಿ ಸೌಹಾರ್ದತೆಯಿಂದ ಆಚರಿಸಿ ಎಂದು ಭಟ್ಕಳ (Bhatkal) ಸಹಾಯಕ ಆಯುಕ್ತ ಮಹೇಶ ಜೆ ಹೇಳಿದರು. ಬಕ್ರೀದ್ ಹಬ್ಬದ ನಿಮಿತ್ತ ಗುರುವಾರ ತಾಲೂಕಾಡಳಿತ ಸೌಧದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕರೆಯಲಾದ ಶಾಂತಿಪಾಲನಾ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಾಡಳಿತ ನೀಡುವ ಮಾರ್ಗಸೂಚಿ ಪ್ರಕಾರವಾಗಿ ಹಬ್ಬವನ್ನು ಆಚರಿಸಿ ಎಂದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಪೇಜ್ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ

ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ಈದ್ಗಾ ಮೈದಾನದಲ್ಲಿ ನಾವೆಲ್ಲ ಸೇರಿ ಪ್ರಾರ್ಥನೆ ಮಾಡಿ ಬಕ್ರೀದ್ ಹಬ್ಬವನ್ನು (Bakrid festival) ಆಚರಿಸಲಿದ್ದೇವೆ. ಮಳೆ ಬಂದಲ್ಲಿ ಮಸೀದಿಗಳಲ್ಲೇ ಪ್ರಾರ್ಥನೆ ಮಾಡುತ್ತೇವೆ. ತಾಲೂಕಿನಲ್ಲಿ ಪದೇ-ಪದೇ ಕರೆಂಟ್ ಹೋಗುತ್ತಿರುವುದರ ಬಗ್ಗೆ ಹೆಸ್ಕಾಂ ಇಲಾಖೆ ಗಮನಕೊಡಬೇಕು ಎಂದರು.

Cattle protection/ ಭಟ್ಕಳದಲ್ಲಿ ಜಾನುವಾರುಗಳ ರಕ್ಷಣೆ 

ಸಿಪಿಐ ದಿವಾಕರ್ ಎಂ ಮಾತನಾಡಿ, ಮಧ್ಯರಾತ್ರಿ ಅಜಾಗರೂಕತೆಯಿಂದ ಬೈಕ್ ಚಾಲನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕಸ ಎಸೆಯುವರ ಮೇಲೆ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲಾಗುವದು. ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪತ ಕಾಮಗಾರಿ ನಡೆಯುತ್ತಿದ್ದು, ಟ್ರಾಫಿಕ್ ಸಮಸ್ಯೆಯ ಬಗ್ಗೆ ಅಗತ್ಯ ಕ್ರಮ ಕೈಗೊಳುತ್ತೇವೆ ಎಂದರು.

SSLC exam/ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಗಳಿಸಿದ ಶಿರಾಲಿಯ ಶ್ರೀಶಾ ಶ್ರೀಧರ ಶೇಟ

ಹೆಚ್ಚುವರಿ ಪೊಲೀಸ್ ಅಧಿಕ್ಷಕ ಕೃಷ್ಣಮೂರ್ತಿ ಮಾತನಾಡಿ, ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್‌ ಇಲಾಖೆ ಸದಾ ಸಿದ್ಧವಾಗಿದ್ದು, ಯಾವುದೇ ಅಹಿತಕರ ಘಟನೆ ಆಗದಂತೆ ಶಾಂತತೆಯಿಂದ ಹಬ್ಬ ಆಚರಿಸಬೇಕು. ನಿಮ್ಮ ಸಹಕಾರ ಪೊಲೀಸ್ ಅಧಿಕಾರಿಗಳ ಜೊತೆಗೆ ಇರಬೇಕು. ಯಾವುದೇ ಸಮಸ್ಯೆಗಳಿದ್ದಲ್ಲಿ ಕೂಡಲೇ ನಮ್ಮ ಗಮನಕ್ಕೆ ತನ್ನಿ ಎಂದರು.

SSLC exam/ ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಹತ್ತನೇ ರ‍್ಯಾಂಕ್ ಗಳಿಸಿದ ಶಿರಾಲಿಯ ಶ್ರೀಶಾ ಶ್ರೀಧರ ಶೇಟ

ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ, ತಾಲೂಕು ಪಂಚಾಯತ್ ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

car collision/ ಭಟ್ಕಳದಲ್ಲಿ ಎರಡು ಕಾರುಗಳು ಡಿಕ್ಕಿ ಹೊಡೆದು ನಾಲ್ವರಿಗೆ ಗಾಯ