ಭಟ್ಕಳ ಡೈರಿ ವರದಿ
ಹೊನ್ನಾವರ: ಭಾರತೀಯ ಜನತಾ ಪಾರ್ಟಿ ಯುವಮೋರ್ಚಾ (BJP Yuva Morcha) ಹೊನ್ನಾವರ (Honnavar) ಮಂಡಲದ ವತಿಯಿಂದ ಸಂಘಟನಾ ಸಪ್ತಾಹದ ಮೊದಲ ಕಾರ್ಯಕ್ರಮವಾಗಿ ಆಯೋಜಿಸಿದ್ದ ‘ಡ್ರಗ್ಸ್ ಬೇಡ ಬ್ರೋ ಪೋಸ್ಟರ್ ಅಭಿಯಾನ’ (‘Drugs Beda Bro’ campaign) ಹಳದೀಪುರ ಹಾಗೂ ಕರ್ಕಿ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯಿತು.
Bike collision/ ಮುರ್ಡೇಶ್ವರದಲ್ಲಿ ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ಗಾಯ
ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಡೆದ ‘ಡ್ರಗ್ಸ್ ಬೇಡ ಬ್ರೋ ಪೋಸ್ಟರ್ ಅಭಿಯಾನ’ದಲ್ಲಿ (‘Drugs Beda Bro’ campaign) ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದರು.
Milad procession/ ಭಟ್ಕಳದಲ್ಲಿ ಅದ್ದೂರಿ ಮಿಲಾದ್ ಮೆರವಣಿಗೆ
ಈ ಸಂದರ್ಭದಲ್ಲಿ ಕುಮಟಾ(Kumta)–ಹೊನ್ನಾವರ(Honnavar) ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ ಶೆಟ್ಟಿ, (MLA Dinakar Shetty), ಉತ್ತರ ಕನ್ನಡ (Uttara Kannada) ಬಿಜೆಪಿ (BJP) ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ, ರಾಜ್ಯ ಶಿಕ್ಷಣ ಪ್ರಕೋಷ್ಟದ ಸಹ ಸಂಚಾಲಕ ಎಂ ಜಿ ಭಟ್ಟ, ಜಿಲ್ಲಾ ಉಪಾಧ್ಯಕ್ಷೆ ಕಮಲಾ ನಾಯ್ಕ, ಹೊನ್ನಾವರ ಮಂಡಲ ಅಧ್ಯಕ್ಷ ಯೋಗೇಶ ಮೇಸ್ತ, ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದ ಗೌಡ ಹಾಗೂ ಗಣಪತಿ ನಾಯ್ಕ ಉಪಸ್ಥಿತರಿದ್ದರು.
Bhatkal/ ಅತಿವೇಗದ ಕಾರು ಚಾಲನೆ: ಬೈಕ್ ಸವಾರನಿಗೆ ಗಂಭೀರ ಗಾಯ
ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಆದಿತ್ಯ ಶೇಟ್, ಜಿಲ್ಲಾ ಯುವಮೋರ್ಚಾ ಖಜಾಂಚಿ ಕಿರಣ್ ಹೆಗಡೆ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯ್ಸನ್ ಡಿಸೋಜ, ಹೊನ್ನಾವರ ಮಂಡಲ ಯುವಮೋರ್ಚಾ ಅಧ್ಯಕ್ಷ ಶಿವಾನಂದ ಮರಾಠಿ, ಪ್ರಧಾನ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಹೆಗಡೆ ಹಾಗೂ ಮಾರುತಿ ಗೌಡ ಸೇರಿದಂತೆ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪಾಲ್ಗೊಂಡಿದ್ದರು.
village assistants/ ನಾಲ್ಕೈದು ದಿನಗಳಲ್ಲಿ ಸಿಎಂ ಜತೆ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳ ಸಭೆ: ಜಿ ಪರಮೇಶ್ವರ
ಅಭಿಯಾನದ ಅಂಗವಾಗಿ ಮಾದಕ ವ್ಯಸನದ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು. ಅಲ್ಲದೆ, ಮಾದಕ ವಸ್ತುಗಳ ನಿಯಂತ್ರಣ ಹಾಗೂ ವ್ಯಸನದ ವಿರುದ್ಧ ಪರಿಣಾಮಕಾರಿ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಮನವಿ ಪತ್ರ ರವಾನಿಸಲು ಸಹಿ ಸಂಗ್ರಹಿಸಲಾಯಿತು. ಮಾದಕ ವ್ಯಸನದಿಂದ (Drugs) ಯುವಜನರನ್ನು (youths) ದೂರವಿಡಲು ಸಮಾಜದ ಎಲ್ಲ ವರ್ಗದವರ ಸಹಕಾರ ಅಗತ್ಯವಾಗಿದ್ದು, ಇಂತಹ ಜಾಗೃತಿ ಅಭಿಯಾನಗಳು ನಿರಂತರವಾಗಿ ನಡೆಯಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.
Scooter accident/ ಭಟ್ಕಳದಲ್ಲಿ ಸ್ಕೂಟರ್ ಅಪಘಾತ: ಗಾಯಗೊಂಡಿದ್ದ ಸವಾರ ಸಾವು

