ಭಟ್ಕಳ: ತಾಲೂಕಿನ ಮುರಿನಕಟ್ಟೆ (Murinakatte)ಯಲ್ಲಿ ಕಟ್ಟಿದ ಕಟ್ಟೆಯನ್ನು ಕೆಡವಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ (Congress) ಪಕ್ಷದಿಂದಲೂ ಖಂಡನೆ ಇದ್ದು, ಬಿಜೆಪಿಯವರು ಇದನ್ನು ರಾಜಕೀಯವಾಗಿ ಬಳಸಿಕೊಂಡಿದ್ದಾರೆ. ಮುರಿನಕಟ್ಟೆ ಕೆಡವಿದ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಒತ್ತಾಯಿಸಿದರು. ಅವರು ಮಂಗಳವಾರದಂದು ಇಲ್ಲಿನ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
‘ಮಾಜಿ ಶಾಸಕ ಸುನೀಲ ನಾಯ್ಕ ಹಾಗೂ ಬಿಜೆಪಿ (BJP ಮುಖಂಡರು ಮುರಿನಕಟ್ಟೆ ವಿಚಾರವಾಗಿ ರಾಜಕೀಯವನ್ನು ಎಳೆದು ತಂದಿದ್ದಾರೆ. ಮುರಿನಕಟ್ಟೆ (Murinakatte) ಹಿಂದೂ ಶ್ರದ್ದಾಕೇಂದ್ರವಾಗಿದ್ದು, ನಾವು ಕೂಡ ಆ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದೇವೆ. ಇಂತಹ ಶ್ರದ್ದಾಕೇಂದ್ರದ ವಿಚಾರವಾಗಿ ಬಿಜೆಪಿ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದ ಅವರು, ಮುರಿನಕಟ್ಟೆ ಕೆಡವಿದ ಬಗ್ಗೆ ನಮಗೂ ಕೂಡಾ ನೋವಿದೆ. ಅದನ್ನು ನಾವು ಖಂಡಿಸುತ್ತೇವೆ ಅಂತಹ ಕಿಡಿಗೇಡಿಗಳಿಗೆ ಶಿಕ್ಷೆ ಆಗಬೇಕು ಎಂದು ನಾವು ಒತ್ತಾಯಿಸುತ್ತೇವೆ. ನಮ್ಮ ಧಾರ್ಮಿಕ ಕೇಂದ್ರವನ್ನು ಮುಂದಿಟ್ಟುಕೊಂಡು ನಾವು ಬಿಜೆಪಿಯಂತೆ ರಾಜಕೀಯ ಮಾಡುವುದಿಲ್ಲ ಎಂದರು.
Murinakatte/ ಮುರಿನಕಟ್ಟೆ ಮರುನಿರ್ಮಾಣಕ್ಕೆ ೪೮ ಗಂಟೆ ಗಡುವು
ಶಾಸಕ ಹಾಗೂ ಸಚಿವ ಮಂಕಾಳ ವೈದ್ಯ (Mankal Vaidya) ಅವರು ಮುರಿನಕಟ್ಟೆ ವಿರುದ್ದ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಬಗ್ಗೆ ಅವರು ವಿರೋಧ ವ್ಯಕ್ತಪಡಿಸಿದಂತೆ ಜನರಲ್ಲಿ ಬಿಜೆಪಿ ಅವರು ಸುಳ್ಳು ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ. ಈ ಮೊದಲೇ ಅದನ್ನು ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ವೇಳೆಗೆ ತೆರವು ಮಾಡಲಾಗಿದೆ. ಐದು ವರ್ಷದ ಹಿಂದೆ ಬಿಜೆಪಿ ಸರಕಾರವಿತ್ತು. ಆ ಸಂಧರ್ಭದಲ್ಲಿ ಇವರು ಕಟ್ಟೆಯನ್ನು ಕಟ್ಟಬಹುದಿತ್ತು. ಅವರು ಡಬಲ್ ಇಂಜಿನ್ ಸರಕಾರ ಎಂದು ಹೇಳಿಕೊಳ್ಳುತ್ತಿದ್ದರು. ಯಾಕೆ ಆ ಸಂದರ್ಭದಲ್ಲಿ ಕಟ್ಟೆಯನ್ನು ಕಟ್ಟಲಿಲ್ಲ. ಈಗ ಬಂದು ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ಪಕ್ಷ ಹಾಗೂ ನಮ್ಮ ಸಚಿವರ ಮೇಲೆ ಆರೋಪ ಹೊರಿಸಿ ನೀವು ರಾಜಕೀಯ ಲಾಭ ಪಡೆದುಕೊಳ್ಳುತ್ತಿದ್ದೀರಿ ಎಂದು ಹರಿಹಾಯ್ದರು.
Murinakatte/ ಮುರಿನಕಟ್ಟೆ ಕಟ್ಟಿಯೇ ಸಿದ್ದ: ಸುನೀಲ ನಾಯ್ಕ ಘೋಷಣೆ
ಧಾರ್ಮಿಕ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಕಟ್ಟೆಯನ್ನು ಕಟ್ಟಲು ನಾವು ಕೂಡ ಸಿದ್ದರಿದ್ದೇವೆ. ನಮ್ಮ ಸರಕಾರವೇ ಇವರಿಗೆ ಕಟ್ಟೆಯನ್ನು ಕಟ್ಟಲು ಜಾಗ ಗುರುತಿಸಿಕೊಟ್ಟಿದ್ದು ಈ ಬಗ್ಗೆ ಜನರಿಗೆ ಗೊತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಾಗ ನಿಮಗೆ ದೇವಸ್ಥಾನ, ಧರ್ಮ ನೆನಪಾಗುತ್ತದೆ. ಮೂಲದಲ್ಲಿ ನಮ್ಮ ಸಚಿವರು ೧೦*೧೦ ಜಾಗ ನೀಡುವಂತೆ ಸೂಚನೆ ನೀಡಿದ್ದು, ಸುಖಾಸುಮ್ಮನೆ ನಮ್ಮ ಸಚಿವರ ಮೇಲೆ ಆಪಾದನೆ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
Murinakatte/ ಮುರಿನಕಟ್ಟೆ ವಿವಾದ: ನಾಲ್ಕು ಪ್ರಕರಣ ದಾಖಲು
ಕಟ್ಟಿಸಿಕೊಟ್ಟಿದ್ದಾರೆ ಹೇಳಬೇಕು. ನಾವು ಈ ಬಗ್ಗೆ ಚರ್ಚೆಗೆ ಬರಲು ಸಿದ್ದರಿದ್ದೇವೆ. ನಮ್ಮ ಸಚಿವರು ಹಲವಾರು ದೇವಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಹಾಗೂ ಭಟ್ಕಳ (Bhatkal) ತಾಲೂಕಿನ ವ್ಯಾಪ್ತಿಯಲ್ಲಿ ಹೊನ್ನಾವರ (Honnavar) ತಾಲೂಕಿನ ವ್ಯಾಪ್ತಿಯಲ್ಲಿ ತಮ್ಮ ಸ್ವಂತ ಹಣದಲ್ಲಿ ದಾನ ನೀಡಿದ್ದಾರೆ. ಇದಕ್ಕೆ ನಮ್ಮಲ್ಲಿ ದಾಖಲೆಗಳಿವೆ ಎಂದು ದಾಖಲೆ ಬಿಡುಗಡೆ ಮಾಡಿದ್ದು, ಇಲ್ಲಿಯವರೆಗೆ ೧೭ ಕೋಟಿ ೩೦ ಲಕ್ಷ ರೂ ದಾನವನ್ನು ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ನಾರಾಯಣ ನಾಯ್ಕ, ಕಾರ್ಯದರ್ಶಿ ಸುರೇಶ ನಾಯ್ಕ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ರಾಜು ನಾಯ್ಕ, ಭಟ್ಕಳ ನಗರ ಕಾಂಗ್ರೆಸ್ ಅಧ್ಯಕ್ಷ ಸುಧಾಕರ ನಾಯ್ಕ, ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ಜಯಶ್ರೀ ಮೋಗೇರ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

