ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನಲ್ಲಿ ಸಿಎನ್‌ಜಿ (CNG) ಗ್ಯಾಸ್ ಪೂರೈಕೆಯಲ್ಲಿ ಉಂಟಾಗಿರುವ ಕೊರತೆಯಿಂದ ಆಟೋ ರಿಕ್ಷಾ ಚಾಲಕರು (Rickshaw Drivers) ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಟ್ಕಳ ರಿಕ್ಷಾ ಚಾಲಕರ ಸಂಘದ ವತಿಯಿಂದ ಸಹಾಯಕ ಆಯುಕ್ತರಿಗೆ ಮನವಿ ಪತ್ರ (memorandum) ಸಲ್ಲಿಸಲಾಯಿತು.
‘Drugs Beda Bro’/ ಮಾದಕ ವ್ಯಸನದ ವಿರುದ್ಧ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನ
ಭಟ್ಕಳದ (Bhatkal) ಭಾರತ ಪೆಟ್ರೋಲ್ ಬಂಕ್‌ನಲ್ಲಿರುವ ಏಕೈಕ ಸಿಎನ್‌ಜಿ ಪಂಪ್‌ಗೆ ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗುತ್ತಿಲ್ಲ. ತಾಲೂಕಿನಲ್ಲಿ ಇದೊಂದೇ ಸಿಎನ್‌ಜಿ ಪಂಪ್ ಇರುವುದರಿಂದ ಗ್ಯಾಸ್ ತುಂಬಿಸಿಕೊಳ್ಳಲು ಆಟೋ ಚಾಲಕರು ಪ್ರತಿದಿನ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘದ ಪದಾಧಿಕಾರಿಗಳು ಮನವಿಯಲ್ಲಿ (memorandum) ತಿಳಿಸಿದ್ದಾರೆ.
Bike collision/ ಮುರ್ಡೇಶ್ವರದಲ್ಲಿ ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ಗಾಯ
ಗ್ಯಾಸ್‌ಗಾಗಿ ಹೆಚ್ಚಿನ ಸಮಯ ವ್ಯಯವಾಗುತ್ತಿರುವುದರಿಂದ ಆಟೋ ಚಾಲಕರ ದಿನದ ದುಡಿಮೆಗೆ ಹೊಡೆತ ಬೀಳುತ್ತಿದ್ದು, ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಕುಟುಂಬ ನಿರ್ವಹಣೆಯೂ ಕಷ್ಟಕರವಾಗುತ್ತಿದೆ. ಆದ್ದರಿಂದ ಸಿಎನ್‌ಜಿ ಪೂರೈಕೆ ಸಂದರ್ಭದಲ್ಲಿ ಆಟೋ ರಿಕ್ಷಾಗಳಿಗೆ ಆದ್ಯತೆ ನೀಡಬೇಕು ಹಾಗೂ ಪೆಟ್ರೋಲ್ ಬಂಕ್‌ಗೆ ಸಮರ್ಪಕವಾಗಿ ಗ್ಯಾಸ್ ಪೂರೈಕೆಯಾಗುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕು ಎಂದು ಒತ್ತಾಯಿಸಲಾಗಿದೆ.
Milad procession/ ಭಟ್ಕಳದಲ್ಲಿ ಅದ್ದೂರಿ ಮಿಲಾದ್ ಮೆರವಣಿಗೆ
ಇದರೊಂದಿಗೆ ಪಟ್ಟಣದಲ್ಲಿ ನಡೆಯುತ್ತಿರುವ ಐಆರ್‌ಬಿ (IRB) ಕಾಮಗಾರಿಯಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಸಾರ್ವಜನಿಕರು ಹಾಗೂ ಆಟೋ ಚಾಲಕರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘ ದೂರಿದೆ. ಸರ್ವಿಸ್ ರಸ್ತೆ ಕಾಮಗಾರಿ ಸಮರ್ಪಕವಾಗಿ ಪೂರ್ಣಗೊಳ್ಳದ ಕಾರಣ ವಾಹನ ಸಂಚಾರ ಮತ್ತಷ್ಟು ಸಮಸ್ಯೆಯಾಗಿದೆ. ಹೀಗಾಗಿ ಪಟ್ಟಣದ ಹೆದ್ದಾರಿ ಹಾಗೂ ಸರ್ವಿಸ್ ರಸ್ತೆಗಳ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ.
Bhatkal/ ಅತಿವೇಗದ ಕಾರು ಚಾಲನೆ: ಬೈಕ್ ಸವಾರನಿಗೆ ಗಂಭೀರ ಗಾಯ
ಈ ಸಂದರ್ಭದಲ್ಲಿ ಭಟ್ಕಳ ರಿಕ್ಷಾ ಯೂನಿಯನ್ ಅಧ್ಯಕ್ಷ ವೇಂಕಟೇಶ ನಾಯ್ಕ, ಉಪಾಧ್ಯಕ್ಷ ಪಯಾಜ್, ಕಾರ್ಯದರ್ಶಿ ಮಾದೇವ ನಾಯ್ಕ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಲೀಮ್ ಮಹಮ್ಮದ್, ಲೋಕೇಶ ನಾಯ್ಕ, ಮುರ್ಡೇಶ್ವರ ಯೂನಿಯನ್ ಅಧ್ಯಕ್ಷ ಶ್ರೀಧರ ನಾಯ್ಕ, ವಿನಾಯಕ, ಪ್ರಮೋದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
village assistants/ ನಾಲ್ಕೈದು ದಿನಗಳಲ್ಲಿ ಸಿಎಂ ಜತೆ ಗ್ರಾಮ ಸಹಾಯಕರ ಸಂಘದ ಪ್ರತಿನಿಧಿಗಳ ಸಭೆ: ಜಿ ಪರಮೇಶ್ವರ

