ಭಟ್ಕಳ ಡೈರಿ ವರದಿ
ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರ ಮರಣವನ್ನಪ್ಪಿದ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ ಹುತಾತ್ಮ (martyred soldier) ವಿನೋದ ನಾಯ್ಕ ಅವರ ೨೧ನೇ ಪುಣ್ಯತಿಥಿಯನ್ನು (death anniversary) ಭಕ್ತಿಭಾವ ಹಾಗೂ ಗೌರವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಹುತಾತ್ಮ ಯೋಧರ (martyred soldier) ಸ್ಮಾರಕಕ್ಕೆ ನೂತನವಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟ್‌ನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್ ನಾಯ್ಕ ಉದ್ಘಾಟಿಸಿದರು.
Mechanic dies/ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೆಕ್ಯಾನಿಕ್ ಸಾವು
ನಂತರ ಮಾತನಾಡಿದ ರೂಪಾಲಿ ನಾಯ್ಕ, “ಏಕೈಕ ಪುತ್ರನಾಗಿದ್ದರೂ ಭಾರತ ಮಾತೆಗೆ ಅಮೂಲ್ಯವಾದ ರತ್ನವನ್ನು ನೀಡಿದ ವಿನೋದ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ಪಾದನಮನ ಸಲ್ಲಿಸುತ್ತೇನೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ” ಎಂದು ಹೇಳಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆನಂದು ಆರ್ ನಾಯ್ಕ ಮಾತನಾಡಿ, ಹುತಾತ್ಮ ಯೋಧನ ತಂದೆ ಮಹಾದೇವ ನಾಯ್ಕ ಅವರು ತಮ್ಮ ಪುತ್ರನ ಸ್ಮರಣೆಯನ್ನು ಜೀವಂತವಾಗಿಡುವ ಉದ್ದೇಶದಿಂದ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
Raksha Bandhan/ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ
ಹುತಾತ್ಮ ಯೋಧನ ತಂದೆ ಮಹಾದೇವ ಡಿ ನಾಯ್ಕ ಮಾತನಾಡಿ, ಸ್ಮಾರಕದ ಸುತ್ತಲೂ ನೂತನ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟ್ ನಿರ್ಮಿಸಲು ಸ್ವಂತ ಧನಸಹಾಯ ನೀಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಮಾತನಾಡಿ, ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಗೌರವ ನಮನ ಸಲ್ಲಿಸುವ ಮೂಲಕ ಹುತಾತ್ಮ ಯೋಧನ ಕುಟುಂಬಕ್ಕೆ ಸಮಸ್ತ ದೇಶದ ಜನರ ಪರವಾಗಿ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
Felicitation/ ಭಟ್ಕಳ ತಾಲೂಕು ಕಸಾಪದಿಂದ ನಿವೃತ್ತ ಮುಖ್ಯಾಧ್ಯಾಪಕ ಗಣಪತಿ ಶಿರೂರು ಸನ್ಮಾನ
ಕಾರ್ಯಕ್ರಮದ ಸಂದರ್ಭದಲ್ಲಿ ವಂದೇ ಮಾತರಂ ಹಾಗೂ ರಾಷ್ಟ್ರಗೀತೆ ಹಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಆನಂದು ಆರ್. ನಾಯ್ಕ, ಮಾಜಿ ಸದಸ್ಯರಾದ ಕಿಶೋರ ಕಡವಾಡಕರ, ದೇವಿದಾಸ ತಳೇಕರ, ನಿವೃತ್ತ ಸೈನಿಕರಾದ ಶೆಶಾಂಕ ಕಡವಾಡಕರ, ಬಾಲಕೃಷ್ಣ ಭೋವಿ, ಅನಿಲ ನಾಯ್ಕ, ಗಣಪತಿ ಗುರವ, ಕೃಷ್ಣಪ್ಪ ಬಾಂದೇಕರ, ಲಿಂಗೇಶ್ವರ ತಳೇಕರ, ಉದಯ ಮಾಂಜ್ರೇಕರ, ಅಶೋಕ ತಾಮಸೆ, ಪ್ರವೀಣ ಮಾಂಜ್ರೇಕರ, ರಾಜಾರಾಮ ನಾಯ್ಕ, ನಂದನ ಮಾಂಜ್ರೇಕರ, ರಾಮನಾಥ ನಾಯ್ಕ, ರೋಹಿದಾಸ ನಾಯ್ಕ, ರೇಖಾ ಆರ್. ನಾಯ್ಕ, ವಿಷ್ಣು ಗಾಯಕ ಸೇರಿದಂತೆ ಗಣ್ಯರು, ಯೋಧನ ಅಭಿಮಾನಿಗಳು ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.
memorandum/ ಭಟ್ಕಳ ರಿಕ್ಷಾ ಚಾಲಕರ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ
ಗಡಿಯಲ್ಲಿ ಹುತಾತ್ಮರಾದ ವೀರ ಯೋಧ ಲ್ಯಾನ್ಸ್ ನಾಯಕ ವಿನೋದ ನಾಯ್ಕ ಅವರು ೨೦೦೫ರ ಆಗಸ್ಟ್ ೧೮ರಂದು ಜಮ್ಮು-ಕಾಶ್ಮೀರದ ಪೂಂಚ್ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ವೀರ ಮರಣವನ್ನಪ್ಪಿದ್ದರು. ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದ್ದ ಸಂದರ್ಭದಲ್ಲಿ, ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಲು ತಾಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಮಂದಿ ಕಡವಾಡಕ್ಕೆ ಆಗಮಿಸಿದ್ದರು. ರಕ್ಷಾ ಬಂಧನದ (Raksha Bandhan) ಸಂದರ್ಭದಲ್ಲಿ ದೇಶದ ಗಡಿಯಲ್ಲಿ ಉಗ್ರರ ಗುಂಡೇಟಿಗೆ ವೀರ ಮರಣವನ್ನಪ್ಪಿದ ವಿನೋದ ನಾಯ್ಕ ಅವರ ಶೌರ್ಯ, ದೇಶಪ್ರೇಮ ಹಾಗೂ ಬಲಿದಾನಕ್ಕೆ ಇದೀಗ ೨೧ ವರ್ಷಗಳು ಕಳೆದರೂ ಅವರ ಸ್ಮರಣೆ ಅಜರಾಮರವಾಗಿದೆ.
‘Drugs Beda Bro’/ ಮಾದಕ ವ್ಯಸನದ ವಿರುದ್ಧ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನ
ಹುತಾತ್ಮ ಯೋಧನ ಸ್ಮರಣಾರ್ಥ ಅವರ ತಂದೆ-ತಾಯಿ ಗ್ರಾಮದಲ್ಲಿ ನೂತನ ಬಸ್ ತಂಗುದಾಣವನ್ನು ನಿರ್ಮಿಸಿ, ಕಳೆದ ಆಗಸ್ಟ್ ೧೫ರಂದು ನಿವೃತ್ತ ಸೈನಿಕರ (retired soldier) ಅಮೃತ ಹಸ್ತದಿಂದ ಉದ್ಘಾಟಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದರು. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುತ್ರನ ಸ್ಮರಣೆಯನ್ನು ಸಮಾಜಮುಖಿ ಕಾರ್ಯಗಳ ಮೂಲಕ ಜೀವಂತವಾಗಿಟ್ಟಿರುವ ಕುಟುಂಬದ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Bike collision/ ಮುರ್ಡೇಶ್ವರದಲ್ಲಿ ಬೈಕ್ ಡಿಕ್ಕಿ: ಪಾದಚಾರಿ ಮಹಿಳೆಗೆ ಗಾಯ

