ಭಟ್ಕಳ: ತಾಲೂಕಿನ ಶಿರಾಲಿ ಗುಡಿಹಿತ್ಲುನ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿ ಒಡೆದು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ೧೨ ಗಂಟೆಯೊಳಗಾಗಿ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (arrested the accused).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತ ಆರೋಪಿಗಳನ್ನು ಕಾರಗದ್ದೆಯ ದರ್ಶನ ಮಂಜುನಾಥ ನಾಯ್ಕ ಮತ್ತು ಶಿರಾಲಿ ಗುಡಿಹಿತ್ಲು ನಿವಾಸಿ ನಾರಾಯಣ ನಾಗಪ್ಪ  ಎಂದು ಗುರುತಿಸಲಾಗಿದೆ. ಇವರು ಆ ೨೯ರ ಮಧ್ಯರಾತ್ರಿ ಭಟ್ಕಳ ತಾಲೂಕಿನ ಶಿರಾಲಿ ಗುಡಿಹಿತ್ಲು ಗ್ರಾಮದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಒಡೆದು, ಹುಂಡಿಯಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಈ ಕುರಿತು ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (case filed). ಪ್ರಕರಣ ದಾಖಲಿಸಿಕೊಂಡ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ೧೨ ಗಂಟೆಯೊಳಗಾಗಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ (arrested the accused).

ಇದನ್ನೂ ಓದಿ: Sad News/ ಪತಿಯ ಹಿಂಸೆ ತಾಳಲಾರದೆ ಜೀವನಕ್ಕೆ ವಿದಾಯ ಹೇಳಿದ ಯುವತಿ

ಆರೋಪಿತರಿಂದ ಕೃತ್ಯಕ್ಕೆ ಬಳಸಲಾದ ಒಂದು ಬೈಕ ಒಳಗೊಂಡಂತೆ ೧,೨೦ ಲಕ್ಷ ರೂ ಮೌಲ್ಯದ ಸ್ವತ್ತನ್ನು ವಶಕ್ಕೆ ವಶಕ್ಕೆ ಪಡೆದುಕೊಂಡಿದ್ದಾರೆ. ಮೊದಲ ಆರೋಪಿ ದರ್ಶನ್‌ ಕಳೆದ ತಿಂಗಳಲ್ಲಷ್ಟೇ ರೈಲ್ವೆ ನಿಲ್ದಾಣ ಸಮೀಪ ಮನೆಯಲ್ಲಿದ್ದ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಜೈಲಿನಿಂದ ಹೊರಬಂದ ಬಳಿಕ ಮತ್ತೆ ಕಳ್ಳತನಕ್ಕೆ ಇಳಿದಿದ್ದಾನೆ. ಪ್ರಕರಣ ದಾಖಲಾದ ೧೨ವಗಂಟೆಯೊಳಗೆ ಆರೋಪಿತರನ್ನು ಬಂಧಿಸಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಪಿಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪಿಎಸ್ಐ ರನ್ನಗೌಡ ಮತ್ತು ಠಾಣೆಯ ಸಿಬ್ಬಂದಿಯವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ ಎಂ ಎನ್ ಅಭಿನಂಧಿಸಿದ್ದಾರೆ.

ಇದನ್ನೂ ಓದಿ: viral video/ ಬೈಕ್‌ ಸವಾರ ಮೃತಪಟ್ಟ ಸ್ಥಳದಲ್ಲೇ ಮತ್ತೊಂದು ಅಪಘಾತ !