ಹೊನ್ನಾವರ: ಇತ್ತೀಚೆಗೆ ಹೊನ್ನಾವರದಲ್ಲಿ ಸುಧಾ ಮತ್ತು ಗಣೇಶ್ ಭಂಡಾರಿಯವರ ಸುಪುತ್ರ ಸುಮಿತ್ ಕುಮಾರ್ ಮತ್ತು ಸ್ವಾತಿ ಅವರ ವಿವಾಹ ಆರತಕ್ಷತೆ ಸಮಾರಂಭದಲ್ಲಿ ಸಂಗೀತ ಮತ್ತು ಸಾಹಿತ್ಯದ ಸಿಂಚನ (book released) ಸೇರಿದ ಎಲ್ಲಾ ಸಭಿಕರ ಮನಸೂರೆಗೊಂಡಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಿಶೇಷ ಕಲಾವಿದರಾಗಿ ಕೀರ್ತನ್ ಹೊಳ್ಳ ಮತ್ತು ಬಿ ಜಿ ಸುಮಿತ್ ಕುಮಾರ್ ಇವರ ಜುಗಲ್ ಬಂಧಿ ಜೊತೆಗೆ ಕುಮಾರ್ ಅರ್ಜುನ್ ಸಿತಾರ್ ವಾದನದಲ್ಲಿ, ಗುರುರಾಜ ಹೆಗಡೆ ಆಡುಕಳ ತಬಲಾ ವಾದನದಲ್ಲಿ ಹರಿಶ್ಚಂದ್ರ ನಾಯ್ಕ ಹಾರ್ಮೋನಿಯಂ ಸಾತ್ ನಲ್ಲಿ ಮೂಡಿಬಂದ ಅಪರೂಪದ ಸಂಗೀತ ಕಾರ್ಯಕ್ರಮ ಸೇರಿದ ಸಾವಿರಕ್ಕೂ ಅಧಿಕ ಜನರ ಮನಸ್ಸನ್ನು ಸೂರ್ಯಗೊಂಡಿತು.
Karate students/ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಸಾಧನೆ ಮಾಡಿದ ಕರಾಟೆ ವಿದ್ಯಾರ್ಥಿಗಳಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಸುಧಾ ಭಂಡಾರಿ ಅವರ ೧೧ ನೇ ಕೃತಿ ‘ ಅಮೃತವಾಣಿ’ ಪುಸ್ತಕ ಬಿಡುಗಡೆಗೊಂಡಿತು (book released). ವೇದಿಕೆಯಲ್ಲಿ ನಾಡಿನ ಹಿರಿಯ ಸಾಹಿತಿಗಳಾದ ರೋಹಿದಾಸ್ ನಾಯಕ್ ಪುಸ್ತಕ ಬಿಡುಗಡೆಗೊಳಿಸಿದರೆ ಜಿಲ್ಲಾ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪಿ ಆರ್ ನಾಯ್ಕ, ನಿವೃತ್ತ ಎಸ್ಪಿ ಎನ್ ಟಿ ಪ್ರಮೋದ್ ರಾವ್, ಹಿರಿಯ ಸಾಹಿತಿಗಳಾದ ಸುಮುಖಾನಂದ ಜಲವಳ್ಳಿ ಮತ್ತು ಸುಧಾ ಅವರ ಕುಟುಂಬ ವರ್ಗದವರು ಉಪಸ್ಥಿತರಿದ್ದರು.
AITM/ ವಿಟಿಯು ಫುಟ್ಬಾಲ್ ತಂಡಕ್ಕೆ ಆಯ್ಕೆಯಾದ ಎಐಟಿಎಂ ವಿದ್ಯಾರ್ಥಿ
ಸುಧಾ ಅವರು ಮಾತನಾಡಿ, ಪ್ರತಿ ದಿನ ರಾತ್ರಿ ಹತ್ತು ಗಂಟೆಯ ನಂತರದಲ್ಲಿ ದಿನಕ್ಕೊಂದು ವಿಚಾರವನ್ನು ಸಂಕ್ಷಿಪ್ತವಾಗಿ ಜನಸಾಮಾನ್ಯರನ್ನು ಮುಟ್ಟುವಂತೆ ತಮ್ಮ ಸ್ಟೇಟಸ್ ನಲ್ಲಿ ದಾಖಲಿಸುತ್ತಾ ಬಂದಿದ್ದು ಓದುಗರ ಅಭಿಮಾನ ಮತ್ತು ಒತ್ತಾಸೆಯಿಂದ ಅಂತಹ ೨೩೦ ವಿಚಾರಗಳ ಸಂಕಲನ ಇಂದು ತೆರೆಕಂಡಿದ್ದು ಅರತಾಕ್ಷತೆ ಸಮಾರಂಭದಲ್ಲಿ ಪಾಲ್ಗೊಂಡ ಪ್ರತಿ ಕುಟುಂಬಕ್ಕೆ ಒಂದು ಪುಸ್ತಕವನ್ನು ನೀಡುವ ತನ್ನಿಚ್ಛೆಯಂತೆ ಪುಸ್ತಕ ಬಿಡುಗಡೆಗೊಂಡಿರುವ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಾಡಿನ ನಾಮಾಂಕಿತ ಸಂಗೀತಗಾರ ಪಂ ಪರಮೇಶ್ವರ ಹೆಗಡೆ ಅವರನ್ನು ಗೌರವಿಸಲಾಯಿತು.
SSLC result/ ಶಿರಾಲಿಯ ಸೇಂಟ್ ಥಾಮಸ್ ಇಂಗ್ಲಿಷ್ ಮೀಡಿಯಂ ಶಾಲೆ ಶೇ ೧೦೦ ಸಾಧನೆ



