ಭಟ್ಕಳ ಡೈರಿ ವರದಿ

ಹೊನ್ನಾವರ: ವಿದ್ಯುತ್‌ ದುರಸ್ತಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ಗೆ (electric shock) ಒಳಗಾಗಿ ಮೃತಪಟ್ಟ ಘಟನೆ ಮಂಕಿ ಪೊಲೀಸ್ ಠಾಣೆ (police station) ವ್ಯಾಪ್ತಿಯ ಬಣಸಾಲೆಯಲ್ಲಿ ನಡೆದಿದೆ. ಮೃತರನ್ನು ಬಣಸಾಲೆ ನಿವಾಸಿ ಸಂತೋಷ ಪರಮೇಶ್ವರ ನಾಯ್ಕ (೪೦) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು (Daily wage worker).

martyred soldier/ ಹುತಾತ್ಮ ಯೋಧ ವಿನೋದ ನಾಯ್ಕರ ೨೧ನೇ ಪುಣ್ಯತಿಥಿ ಆಚರಣೆ 

ಆಗಸ್ಟ್ ೨೯ರಂದು ಬೆಳಿಗ್ಗೆ ಸುಮಾರು ೯.೨೦ರ ವೇಳೆಗೆ ಸಂತೋಷ ಅವರು ತಮ್ಮ ಎದುರಿನ ಮನೆಯ ನಿವಾಸಿ ನಾಗವೇಣಿ ರಾಮಕೃಷ್ಣ ನಾಯ್ಕ ಅವರ ಮನೆಗೆ ವಿದ್ಯುತ್ ದುರಸ್ತಿ ಮಾಡಲು ತೆರಳಿದ್ದರು. ಈ ವೇಳೆ ವಿದ್ಯುತ್ ಪೂರೈಕೆಯಲ್ಲಿದ್ದ ತಂತಿಯನ್ನು ಆಕಸ್ಮಿಕವಾಗಿ ಮುಟ್ಟಿದ ಪರಿಣಾಮ ವಿದ್ಯುತ್ ಶಾಕ್ (electric shock) ಹೊಡೆದು ನೆಲಕ್ಕೆ ಬಿದ್ದಿದ್ದಾರೆ. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಹೊನ್ನಾವರ (Honnavar) ಸರ್ಕಾರಿ ಆಸ್ಪತ್ರೆಗೆ (government hospital) ಬೆಳಿಗ್ಗೆ ೧೦.೨೦ರ ಸುಮಾರಿಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಸಂತೋಷ ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Mechanic dies/ ರೈಲಿನಿಂದ ಆಕಸ್ಮಿಕವಾಗಿ ಬಿದ್ದು ಮೆಕ್ಯಾನಿಕ್ ಸಾವು

ಮೃತರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ ಎಂದು ಅವರ ಸಹೋದರ ರಾಜು ಪರಮೇಶ್ವರ ನಾಯ್ಕ ಅವರು ಮಂಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (case registered) ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.

Raksha Bandhan/ ಚಿತ್ರಾಪುರ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ