ಭಟ್ಕಳ: ರಸ್ತೆಯಲ್ಲಿ ಏಕಾಏಕಿ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟಿ ಸವಾರ ನಿಯಂತ್ರಣ ಕಳೆದುಕೊಂಡು ಬಿದ್ದ ಘಟನೆ ಭಟ್ಕಳದಲ್ಲಿ ನಡೆದಿದೆ. ಅಪಘಾತದಲ್ಲಿ ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿಯ ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಸೆಪ್ಟೆಂಬರ್ ೨೭ರಂದು ಸಂಜೆ ಸುಮಾರು ೬.೩೦ರ ವೇಳೆಗೆ ಈ ಘಟನೆ ನಡೆದಿದ್ದು, ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪೊಲೀಸ್ ದೂರಿನ ಪ್ರಕಾರ, ಬೆಳ್ಕೆ ನಿವಾಸಿ ಗಣೇಶ ಹೊನ್ನಪ್ಪ ನಾಯ್ಕ (೩೯) ಅವರು ದೂರು ನೀಡಿದ್ದಾರೆ. ಬೆಳಲಖಂಡ, ಗುಳ್ಮಿ ನಿವಾಸಿ ದೇವೆಂದ್ರ ನಾರಾಯಣ ಪೂಜಾರಿ ಅವರು ಹೊಂಡಾ ಎಕ್ಟಿವಾ ಸ್ಕೂಟಿಯಲ್ಲಿ ತಮ್ಮ ತಂದೆ ನಾರಾಯಣ ಸುಬ್ಬಯ್ಯ ಪೂಜಾರಿ (೫೬) ಅವರನ್ನು ಹಿಂಬದಿ ಕೂರಿಸಿಕೊಂಡು ಗುಳ್ಮಿ ಕಡೆಯಿಂದ ಭಟ್ಕಳ ರೈಲ್ವೆ ನಿಲ್ದಾಣದ ಕಡೆಗೆ ತೆರಳುತ್ತಿದ್ದರು. ನಾಗಮಾಸ್ತಿ ದೇವಸ್ಥಾನದ ಸಮೀಪ ರಸ್ತೆಯಲ್ಲಿ ಏಕಾಏಕಿ ನಾಯಿ ಅಡ್ಡ ಬಂದಿದ್ದು, ಅದನ್ನು ತಪ್ಪಿಸಲು ಸವಾರ ಪ್ರಯತ್ನಿಸಿದಾಗ ಸ್ಕೂಟಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಪಘಾತದಲ್ಲಿ ಸ್ಕೂಟಿಯ ಹಿಂಬದಿಯಲ್ಲಿ ಕುಳಿತಿದ್ದ ನಾರಾಯಣ ಸುಬ್ಬಯ್ಯ ಪೂಜಾರಿ ಅವರ ಬಲಗಾಲಿಗೆ ತೀವ್ರ ಸ್ವರೂಪದ ಗಾಯವಾಗಿದೆ. ಅತಿವೇಗ ಹಾಗೂ ನಿಷ್ಕಾಳಜಿತನದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ:
ಮುಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ: ೮೦ ಮಂದಿ ಸ್ವಯಂಪ್ರೇರಿತ ರಕ್ತದಾನ
ಸೆ ೨೮ರಿಂದ ಬ್ಯಾಂಕ್ಗಳಿಗೆ ರಜೆ ಇಲ್ಲ: ಮೂರು ದಿನಗಳ ಮುಷ್ಕರ ಮುಂದೂಡಿಕೆ
ಸಂಪಾದಕೀಯ/ ಭಟ್ಕಳದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧದ ಕಾರ್ಯಾಚರಣೆ: ಮುಂದಿನ ಹೆಜ್ಜೆ ಯಾವುದು?


