ಭಟ್ಕಳ ಡೈರಿ ವರದಿ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಜತಾರ ಹೋಟೆಲ್ ಸಮೀಪ ಬೊಲೆರೋ ವಾಹನವು ಟಿಪ್ಪರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಅಕ್ಟೋಬರ್ ೨೩ರಂದು ನಡೆದಿದೆ.

ಹೊನ್ನಾವರ ಕಡೆಯಿಂದ ಭಟ್ಕಳದತ್ತ ಬರುತ್ತಿದ್ದ ಮಹೀಂದ್ರಾ ಬೊಲೆರೋ ವಾಹನವು ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಚಲಿಸಿ, ಮುಂದೆ ಸಾಗುತ್ತಿದ್ದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಬೊಲೆರೋ ಚಾಲಕ ಮಹ್ಮದ್ ಮರ್ದಾನ್, ಭಟ್ಕಳದ ಹನೀಪಾಬಾದ್ ನಿವಾಸಿಯಾಗಿದ್ದು, ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳದೆ ಅಪಘಾತ ಸಂಭವಿಸಿದೆ ಎಂದು ಟಿಪ್ಪರ್ ಚಾಲಕ ಜಾಲಿಕೊಡಿಯ ವಿಶ್ವನಾಥ ನಾಯ್ಕ ಅವರು ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಅಪಘಾತದಲ್ಲಿ ಹನೀಪಾಬಾದ್ ನಿವಾಸಿಗಳಾದ ಮಹ್ಮದ್ ಸಯ್ಯಾನ್ ಮತ್ತು ಶಾನವಾಜ್ ಅವರಿಗೆ ತಲೆ, ಮುಖ ಹಾಗೂ ಕೈಗಳಿಗೆ ತೀವ್ರ ಗಾಯಗಳಾಗಿವೆ. ಮಹ್ಮದ್ ಸಯ್ಯದ್ ಅವರಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.

ಇದನ್ನೂ ಓದಿ :

ಭಟ್ಕಳದಲ್ಲಿ ನ.೧ರಂದು ಆರ್‌ಎಸ್‌ಎಸ್ ಭವ್ಯ ಪಥಸಂಚಲನ: ಗಣವೇಷ ಖರೀದಿಗೆ ವ್ಯವಸ್ಥೆ

ಮಾರುಕೇರಿಯಲ್ಲಿ ಅಂಗಡಿ ಎದುರು ಅಕ್ರಮವಾಗಿ ಮದ್ಯಪಾನಕ್ಕೆ ಅವಕಾಶ: ಮಹಿಳೆ ವಿರುದ್ಧ ಪ್ರಕರಣ