ಭಟ್ಕಳ: ಪ್ರಪ್ರಥಮ ಬಾರಿಗೆ ಎಂ ಆರ್ ಎಸ್ ಸ್ಪೋರ್ಟ್ಸ್ ಕ್ಲಬ್‌ ಮಣ್ಕುಳಿ ವತಿಯಿಂದ ನಡೆದ ಮಣ್ಕುಳಿ ಪ್ರೀಮಿಯರ್ ಲೀಗ್ ೨೦೨೬ರ ಚಾಂಪಿಯನ್ (champion) ಪಟ್ಟವನ್ನು ನಾಗರಾಜ ಬಾಗಲ್ ಹಾಗೂ ಹರೀಶ ನಾಯ್ಕ ಮಾಲೀಕತ್ವದ ರಾಯಲ್ ಸಾಮ್ರಾಟ ತಂಡವು ತನ್ನ ಮುಡಿಗೇರಿಸಿಕೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಎರಡು ದಿನಗಳ ಕಾಲ ನಡೆದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ (cricket tournament) ಒಟ್ಟು ಆರು ತಂಡಗಳು ಪಾಲ್ಕೊಂಡಿದ್ದವು. ಈ  ಆರು ತಂಡದ ಮಾಲೀಕರು ತನ್ನೆಲ್ಲ ಆಟಗಾರರನ್ನು ಹಾರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

arrested/ ಕೋರ್ಟ್ ಜಾಮೀನಿಗೆ ನಕಲಿ ದಾಖಲೆ ನೀಡಲು ಯತ್ನಿಸಿ ಪರಾರಿಯಾಗಿದ್ದ ಮಂಗಳೂರು ವ್ಯಕ್ತಿ ಬಂಧನ

ಫೈನಲ್ನಲ್ಲಿ ಸಾನ್ವಿ ವಾರಿಯರ್ಸ್ ಹಾಗೂ ರಾಯಲ್ ಸಾಮ್ರಾಟ ತಂಡದ ನಡೆಯುವ ಹಣಾಹಣಿ ಏರ್ಪಟ್ಟಿದ್ದು, ಟಾಸ್ ಗೆದ್ದುಕೊಂಡ ರಾಯಲ್ ಸಾಮ್ರಾಟ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಣಕ್ಕಿಳಿದ ಆರಂಭಿಕ ಜೋಡಿ ಸಂದೀಪ ಹಾಗೂ ದೀಪಕ ೧೦೦ ರನ್ ಜೊತೆ ಆಟ ನೀಡಿದ್ದಲ್ಲದೆ, ಇಬ್ಬರೂ ಅರ್ಧ ಶತಕ ಸಿಡಿಸುವುದರ ಮೂಲಕ ತಂಡಕ್ಕೆ ಬೃಹತ್ ಮೊತ್ತ ಕಲೆ ಹಾಕಲು ಯಶಸ್ವಿಯಾದರು.

fishing/ ಮೀನುಗಾರಿಕೆಗೆ ತೆರಳಿದ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವು

೬ ಓವರುಗಳ ಮುಕ್ತಾಯಕ್ಕೆ ೨ ವಿಕೆಟ್ ನಷ್ಟಕ್ಕೆ ೧೩೦ ರನ್ ಕಲೆ ಹಾಕುವ ಮೂಲಕ ಎದುರಾಳಿ ತಂಡ ಸಾನ್ವಿ ವಾರಿಯರ್ಸ್ ಗೆ ೧೩೧ ರನ್ ಟಾರ್ಗೆಟ್ ನೀಡಿದ್ದರು. ನಂತರ ಬ್ಯಾಟಿಂಗಿಗಿಳಿದ ಸಾನ್ವಿ ವಾರಿಯರ್ಸ ತಂಡದ ಆರಂಭಿಕ ಆಟಗಾರ ಮದನ ಹಾಗೂ ಭರತ ಕುಮಾರ ಆರಂಭಿಕ ಅಬ್ಬರದ ಆಟಕ್ಕೆ ಇಬ್ಬರ ವಿಕೆಟ್ ಕಳೆದುಕೊಂಡು ಕ್ರಮವಾಗಿ ೨೮ ಮತ್ತು ೧೯ ರನ್ ಸೇರಿಸಿದರು. ನಂತರ ತಂಡದ ನಾಯಕ ಪವನ ಆರಂಭದಿಂದಲೇ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಆರಂಭಿಸಿ, ೪೨ ರನ್ ಹೊಡೆದರೂ ೩೭ ರನ್ ಗಳ ಅಂತರದಿಂದ ರಾಯಲ್ ಸಾಮ್ರಾಟ್ ತಂಡದೆದರು ಸೋಲನ್ನೊಪ್ಪಿಕೊಂಡಿತು.

football tournament/ ಎಐಟಿಎಂನಲ್ಲಿ ವಿಟಿಯು ಅಂತರ-ಕಾಲೇಜು ಮಂಗಳೂರು ವಿಭಾಗ ಫುಟ್ಬಾಲ್ ಪಂದ್ಯಾವಳಿ ಉದ್ಘಾಟನೆ

ವಿಶೇಷವೆಂದರೆ ರಾಯಲ್ ಸಾರ್ಮಾಟ್ ತಂಡದಲ್ಲಿ ಬಹುತೇಕ ಅನುಭವಿ ಕ್ರಿಕೆಟ್ ಆಟಗಾರರೇ ಇದ್ದರು. ಪಂದ್ಯಾವಳಿ ಬೆಸ್ಟ್ ಬ್ಯಾಟ್ಸಮನ್ ಆಗಿ ಡಿ ಸ್ಟಾರ್ ತಂಡದ ಆಟಗಾರ ಗುರುದತ್ತ ತೆಂಗೇರಿ, ಬೆಸ್ಟ್ ಬೌಲರ್ ಆಗಿ ರಾಮದೂತ ಸ್ಕ್ವಾಡ್ ತಂಡ ಗಣೇಶ ಹೆಗಡೆ, ಸರಣಿ ಶ್ರೇಷ್ಠ ಆಟಗಾರನಾಗಿ ಸಾನ್ವಿ ವಾರಿಯರ್ಸ್ ತಂಡದ ನಾಯಕ ಪವನ್ ನಾಯಕ ಆಯ್ಕೆಯಾದರು.

National award/ ವಿದ್ಯಾಭಾರತಿ ಇಂಗ್ಲಿಷ್ ಮಾಧ್ಯಮ ಶಾಲೆಗೆ ಅತ್ಯುತ್ತಮ ಅರ್ಹತಾ ಅಧ್ಯಾಪಕ ರಾಷ್ಟ್ರೀಯ ಪ್ರಶಸ್ತಿ 

ಚಾಂಪಿಯನ್ (champion) ರಾಯಲ್ ಸಾಮ್ರಾಟ್ ತಂಡಕ್ಕೆ ೩೩,೩೩೩ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ರನ್ನರ್ ಅಪ್ ತಂಡವಾದ ಸಾನ್ವಿ ವಾರಿಯರ್ಸ್ ಗೆ ೨೨,೨೨೨ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಿದರು.

promoted/ ಹೆಮ್ಮೆಯ ಐಎಎಸ್‌ ಅಧಿಕಾರಿ  ತೇಜಸ್ವಿ ನಾಯ್ಕಗೆ ಪದೋನ್ನತಿ