ಭಟ್ಕಳ ಡೈರಿ ವರದಿ

ಭಟ್ಕಳ: ಸಾಂಪ್ರದಾಯಿಕ ಉಡುಗೆಗಳು ಕೇವಲ ಬಟ್ಟೆಗಳಲ್ಲ; ಅವು ನಮ್ಮ ಸಂಸ್ಕೃತಿಯ ಪ್ರತಿಬಿಂಬ, ಪರಂಪರೆಯ ಸಂಕೇತ ಹಾಗೂ ಪೂರ್ವಜರು ನಮಗೆ ನೀಡಿರುವ ಅಮೂಲ್ಯ ಕೊಡುಗೆಗಳಾಗಿವೆ ಎಂದು ಪ್ರೋಸ್ಕ್ಯಾನ್ ಸಂಸ್ಥೆಯ  ಮಾಲಕಿ ರಿತಿಕಾ ಕಿಣಿ ಹೇಳಿದರು. ಅವರು ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ಉಡುಗೆ ಹಾಗೂ ಗುಂಪು ನೃತ್ಯ ಸ್ಪರ್ಧೆ ‘ನೃತ್ಯಾಂಜಲಿ-೨೦೨೬’ ಉದ್ಘಾಟಿಸಿ ಮಾತನಾಡಿದರು.

ಭಟ್ಕಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ಶಿರಾಲಿ ಬಹುಮಾನ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಗುಂಪು ನೃತ್ಯ ಸ್ಪರ್ಧೆಯಲ್ಲಿ ಸಲ್ಮಾನ್ ಮತ್ತು ನಂದಿತಾ ಕಾಮತ್ ನಿರ್ಣಾಯಕರಾಗಿ ಭಾಗವಹಿಸಿದ್ದರು. ಇನ್ನೋರ್ವ  ನಿರ್ಣಾಯಕರಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್‌ನ ರೋಟರಿ ವೊಕೇಶನಲ್ ಟ್ರೈನಿಂಗ್ ಸೆಂಟರ್‌ನ ತರಬೇತುದಾರರಾದ ರೇಷ್ಮಾ ನಾಯ್ಕ ಉಪಸ್ಥಿತರಿದ್ದರು.

ಸಾಂಪ್ರದಾಯಿಕ ಉಡುಗೆ ಸ್ಪರ್ಧೆ ವಿಜೇತರು: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಿಭಾಗದಲ್ಲಿ ಕರಣ ಸೋಮಶೇಖರ ನಾಯ್ಕ ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ಸಿಂಧು ಶಿವಾಜಿ ಆರೇರಾ ಪ್ರಥಮ ಬಹುಮಾನ ಪಡೆದರು. ಪ್ರಥಮ ಪಿಯುಸಿ ವಿದ್ಯಾರ್ಥಿಗಳ ವಿಭಾಗದಲ್ಲಿ ಸಂಜೀವ ಗೊಂಡ ಹಾಗೂ ವಿದ್ಯಾರ್ಥಿನಿಯರ ವಿಭಾಗದಲ್ಲಿ ತನ್ಮಯಿ ಕಿಣಿ ಪ್ರಥಮ ಸ್ಥಾನ ಗಳಿಸಿದರು.

ಗುಂಪು ನೃತ್ಯ ಸ್ಪರ್ಧೆ ಫಲಿತಾಂಶ:

ವಿದ್ಯಾರ್ಥಿಗಳ ವಿಭಾಗ:

– ಪ್ರಥಮ: ದ್ವಿತೀಯ ಪಿಯುಸಿ ವಿಜ್ಞಾನ ‘ಬಿ’ ವಿಭಾಗ

– ದ್ವಿತೀಯ: ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗ

– ತೃತೀಯ: ಪ್ರಥಮ ಪಿಯುಸಿ ವಾಣಿಜ್ಯ ವಿಭಾಗ

ವಿದ್ಯಾರ್ಥಿನಿಯರ ವಿಭಾಗ:

– ಪ್ರಥಮ: ದ್ವಿತೀಯ ಪಿಯುಸಿ ವಾಣಿಜ್ಯ ‘ಎ’ ವಿಭಾಗ

– ದ್ವಿತೀಯ: ಪ್ರಥಮ ಪಿಯುಸಿ ವಿಜ್ಞಾನ ‘ಎ’ ವಿಭಾಗ

– ತೃತೀಯ: ಪ್ರಥಮ ಪಿಯುಸಿ ವಿಜ್ಞಾನ ‘ಬಿ’ ವಿಭಾಗ

ವಿದ್ಯಾರ್ಥಿಗಳಲ್ಲಿನ ಸಾಂಸ್ಕೃತಿಕ ಪ್ರತಿಭೆ, ಸಾಂಪ್ರದಾಯಿಕ ಉಡುಗೆಗಳ ಮಹತ್ವ ಹಾಗೂ ಕಲಾತ್ಮಕ ಅಭಿವ್ಯಕ್ತಿಗೆ ವೇದಿಕೆಯಾದ ‘ನೃತ್ಯಾಂಜಲಿ-೨೦೨೬’ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಮೂಡಿಸಿತು.

ಭಟ್ಕಳ ಡೈರಿ | ನೈಜ-ನಿಷ್ಪಕ್ಷಪಾತ

ಇದನ್ನೂ ಓದಿ :

ಭಟ್ಕಳ ತಾಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಗುರು ವಿದ್ಯಾಧಿರಾಜ ವಿದ್ಯಾರ್ಥಿಗಳ ಸಾಧನೆಯ ಸರಮಾಲೆ

ಕ್ಯಾಮೆರಾ ಮೂಲಕ ಅಪರಾಧ ತನಿಖೆಯ ಪಾಠ: ಸುಧೀಂದ್ರ ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ