ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನಪ್ರಿಯ ಸಾಹಿತ್ಯ ಕಲಾತ್ಮಕ ಸಂಘಟನೆ ನಿನಾದ ಕಲ್ಚರಲ್ ಅಕಾಡೆಮಿಯ ಹತ್ತನೇ ವರ್ಷದ ವರ್ಷಾಚರಣೆ ಹಾಗೂ ಯುಗಾದಿ (Ugadi) ನಿಮಿತ್ತ ನಿನಾದ ಯುಗಾದಿ ಸಾಹಿತ್ಯ ಸಂಭ್ರಮ (literary festival) ಕಾರ್ಯಕ್ರಮ ಗುರುವಾರ  ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಮುಂಡಳ್ಳಿಯಲ್ಲಿ ಹೊಸದಾಗಿ ಆರಂಭವಾದ  ಉತ್ಥಾನ ಕಲಾಭವನದಲ್ಲಿ ಯುಗಾದಿ ಸಾಹಿತ್ಯ ಸಂಭ್ರಮ (literary festival) ಹಾಗೂ ಕವಿಕಾವ್ಯ ಸಿಂಚನ  ಕಾರ್ಯಕ್ರಮ ಆಯೋಜಿಸಲಾಗಿತ್ತು.

Installation/ ಮಾ ೨೭ರಂದು ಬಾಲಾಲಯದಲ್ಲಿ ಸೋಡಿಗದ್ದೆ ಶ್ರೀ ದೇವಿಯ ಮೂಲ ಸನ್ನಿಧಿ ಪ್ರತಿಷ್ಠಾಪನೆ 

ಕಾರ್ಯಕ್ರಮ ಉದ್ಘಾಟಿಸಿದ ಉತ್ತರ ಕನ್ನಡ ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ನಿನಾದ ಎಲ್ಲ ಸಂಘಟನೆಯಂತಲ್ಲ. ಇದು ಎಲ್ಲರ ನಿನಾದ. ಇಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ವಿಶೇಷ ಪ್ರಾಮುಖ್ಯತೆ ಇದೆ. ಯುಗಾದಿ ನೆಪದಲ್ಲಿ ಎಲ್ಲ ಅಪ್ತ ವಲಯಗಳು ಸೇರಿ ಈ ರೀತಿಯಾಗಿಯೂ ಹಬ್ಬವನ್ನು ಆಚರಿಸಬಹುದು ಎನ್ನುವುದನ್ನು ನಿನಾದದಿಂದ ಕಲಿಯಬಹುದಾಗಿದೆ. ನಿನಾದ ಕೇವಲ ಸಾಹಿತ್ಯಕಷ್ಟೇ ಸೀಮಿತವಾಗಿರದೆ.  ಸಂಗೀತ, ನೃತ್ಯ ಜನಪದ ಹೀಗೆ ಕಲೆಯ ಎಲ್ಲಾ ಪ್ರಾಕಾರಗಳಿಗೆ ಪ್ರಾಮುಖ್ಯತೆ ನೀಡುವ ಸಂಘಟನೆಯಾಗಿದೆ. ಇದರ ಸದುಪಯೋಗವನ್ನು ಜಿಲ್ಲೆಯ ಅನೇಕ ವಿದ್ಯಾರ್ಥಿಗಳು ಪಡೆಯಬಹುದಾಗಿದೆ ಎಂದರು.

cattle rescued/ ಜಾಗಟೆಬೈಲ್ ಪ್ರದೇಶದಲ್ಲಿ ೯ ಜಾನುವಾರು ರಕ್ಷಣೆ

ಕವಿ- ಕಾವ್ಯ- ಸಿಂಚನದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ  ಶಂಭು ಹೆಗಡೆ ಮಾನಸುತ ಮಾತನಾಡುತ್ತಾ, ನಿನಾದ ಯುಗಾದಿ ಸಂಭ್ರಮ ನಿಜಕ್ಕೂ ಅರ್ಥಪೂರ್ಣ ಕಾರ್ಯಕ್ರಮ. ಇಲ್ಲಿ ಸಾಹಿತ್ಯ ಸಂಗೀತ, ನೃತ್ಯ, ಚಿತ್ರಕಲೆ, ಎಲ್ಲವೂ ಮೇಳೈಸಿದೆ. ಎಲ್ಲರನ್ನೂ ಗೌರವಿಸಿದಂಥ ಆಪ್ತ ವೇದಿಕೆ ಎಂದರು. ಸರಕಾರದ ಯಾವುದೇ ಸಹಾಯ ಸಹಕಾರ ಇಲ್ಲದೆಯೂ ಯಾರೊಬ್ಬರ ಸಹಾಯ ಬಯಸದೆಯೂ ಕಲೆಗಾಗಿ ತಮ್ಮ ಸ್ವಂತ ದುಡಿಮೆಯ ಹಣದಲ್ಲಿ ಕಲಾತ್ಮಕ ಸೇವೆಯನ್ನು ಹತ್ತು ವರ್ಷಗಳಿಂದ ಮಾಡುತ್ತಾ ಬರುತ್ತಿರುವ ನಿನಾದದ ನಡೆ ಶ್ಲಾಘನೀಯ ಎನ್ನುತ್ತಾ ತಮ್ಮ  ಎರಡು ಕವಿತೆಗಳನ್ನು ವಾಚಿಸಿದರು.

arrested/ ಭಟ್ಕಳದಲ್ಲಿ ಜಾನುವಾರು ಅಕ್ರಮ ಸಾಗಾಟ: ಒಬ್ಬ ಸೆರೆ, ಇನ್ನೊಬ್ಬ ಪರಾರಿ 

ಈ ಸಂದರ್ಭದಲ್ಲಿ ಅರವಿಂದ ಕರ್ಕಿಕೋಡಿ, ಸಾಹಿತಿ ಮಾನಾಸುತ ಹಾಗೂ ಚಿತ್ರಕಲಾವಿದ ಶಿಕ್ಷಕ ಸಂಜಯ ಗುಡಿಗಾರ ಅವರನ್ನು ನಿನಾದ ಕಲ್ಚರಲ್ ಅಕಾಡೆಮಿ ವತಿಯಿಂದ ಫಲತಾಂಬೂಲ ಮತ್ತು ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ನಂತರ ನಡೆದ ಕವಿ ಕಾವ್ಯ ಸಿಂಚನದಲ್ಲಿ ಕವಿಗಳಾದ  ಪೂರ್ಣಿಮಾ ನಾಯ್ಕ ಮುರುಡೇಶ್ವರ, ವಿಭಾ ನಾಯಕ ಚಿತ್ರಾಪುರ, ಸುಮಲತಾ ರಾಜೇಶ, ರಮ್ಯ ವಿನಯ್ ಉಡುಪಿ, ಸವಿತಾ ನಾಯ್ಕ  ಮುಂಡಳ್ಳಿ, ಕುಸುಮಾ ನಾಯ್ಕ ಹನೆಹಳ್ಳಿ, ರೇಷ್ಮಾ ಉಮೇಶ, ಉಮೇಶ ಮುಂಡಳ್ಳಿ, ಮೋನಿಕಾ ನಾಯ್ಕ, ಚರಣ ನಾಯ್ಕ ಕವಿತೆ ವಾಚಿಸಿದರು.

SSLC exams/ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಭಟ್ಕಳದಲ್ಲಿ ಮೊದಲ ದಿನ ೩೫ ವಿದ್ಯಾರ್ಥಿಗಳು ಗೈರು

ನಿನಾದದ ಪ್ರಧಾನ ಸಂಚಾಲಕಿ ರೇಷ್ಮಾ ಉಮೇಶ, ನಿನಾದ ನಡೆದ ಬಂದ ದಾರಿ ಹಾಗೂ ಮುಂದಿನ ಆಶೋತ್ತರಗಳ ಬಗ್ಗೆ ತಮ್ಮ ಅಧ್ಯಕ್ಷೀಯ ಮಾತುಗಳಲ್ಲಿ ನುಡಿದರು. ಮೊದಲಿಗೆ ನಿನಾದ ಸಂಚಾಲಕ ಉಮೇಶ ಮುಂಡಳ್ಳಿ ಏಪ್ರಿಲ್ ತಿಂಗಳಲ್ಲಿ ಉತ್ಥಾನ ಕಲಾಭವನದಲ್ಲಿ ನಡೆಯುವ ಸಂಭವನೀಯ ಕಾರ್ಯಕ್ರಮ ಭಜನೆ, ಜನಪದ ಕಮ್ಮಟ ಹಾಗೂ ಕಲಾತ್ಮಕ ಸಿನೇಮೋತ್ಸವ ಬಗ್ಗೆ ಮಾಹಿತಿ ನೀಡಿ ಸ್ವಾಗತಿಸಿದರು. ಉತ್ಥಾನ ಉಮೇಶ ಪ್ರಾರ್ಥಿಸಿದರು. ಹರ್ಷಿತಾ ಪಡಿಯಾರ ಭರತನಾಟ್ಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿನಾದ ಉಮೇಶ ಕಾರ್ಯಕ್ರಮ ನಿರ್ವಹಿಸಿದರು. ಮುಂಡಳ್ಳಿ ಗ್ರಂಥಪಾಲಕ ಸುರೇಶ ನಾಯ್ಕ, ತಾಲೂಕು ಪಂಚಾಯತ್ ಭಟ್ಕಳದ ಸಿಬ್ಬಂದಿ ಗೋಪಾಲ ನಾಯ್ಕ, ದಿನೇಶ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

car collision/ ಕಾರು ಡಿಕ್ಕಿಯಾಗಿ ಬೈಕ್ ಸವಾರರಿಬ್ಬರಿಗೆ ಗಾಯ