ಕಾರವಾರ(Karwar) : ಜಗತ್ತಿನಲ್ಲಿ ಜನಿಸಿದ ಪ್ರತೀ ಜೀವಿಯೂ ಮರಣ ಹೊಂದಲೇ ಬೇಕು ಇದು ನಿಸರ್ಗ ನಿಯಮ.. ಜಗತ್ತಿನಲ್ಲಿ ಯಾವುದೇ ಸಾಧನೆಗಳನ್ನು ಮಾಡಲು ದೇಹ ಅಗತ್ಯ. ಆದರೆ ಜೀವಿತಾವಧಿಯಲ್ಲಿ ಯಾವುದೇ ಸಾಧನೆ ಮಾಡದೇ ಇದ್ದರೂ ವ್ಯರ್ಥವಾಗಿ ಸಾಯುವ ಬದಲು, ಮರಣದ ನಂತರವಾದರೂ ತಮ್ಮ ಅಂಗಾಂಗಗಳನ್ನು ದಾನ (multi-organ donation) ಮಾಡುವುದರ ಮೂಲಕ ಮತ್ತೊಬ್ಬರ ದೇಹದ ಮೂಲಕ ಪ್ರತಿಯೊಬ್ಬರೂ ಸದಾ ಜೀವಂತವಾಗಿರಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಪ್ರತಿ ವರ್ಷ ಅನೇಕ ಜನರು ಅಂಗಾಂಗ ವೈಫಲ್ಯದಿಂದ ಮರಣ ಹೊಂದುತ್ತಿದ್ದು, ಭಾರತದಾದ್ಯಂತ ಪ್ರತಿ ವರ್ಷ ಅಂದಾಜು 5 ಲಕ್ಷ ಅಂಗಾಂಗಗಳ ಅಗತ್ಯವಿದೆ. ಆದರೆ ಪ್ರಸ್ತುತ ಕೇವಲ 2-3 ಪ್ರತಿಶತದಷ್ಟು ಬೇಡಿಕೆಯನ್ನು ಮಾತ್ರ ಪೂರೈಸಲಾಗುತ್ತಿದೆ. ಮೆದುಳು ನಿಷ್ಕ್ರೆಯೆಗೊಂಡ ಯಾವುದೇ ವ್ಯಕ್ತಿಯ ಕುಟುಂಬದ ಸದಸ್ಯರ ಒಪ್ಪಿಗೆಯ ಮೇರೆಗೆ ಅಂಗಾಂಗ ದಾನ (multi-organ donation) ಮಾಡಬಹುದಾಗಿದ್ದು, ಇದು ಕಾನೂನು ಬದ್ದವಾಗಿದೆ. ಯಾವುದೇ ವಯಸ್ಸು ಅಥವಾ ಲಿಂಗ ಭೇದವಿಲ್ಲದೇ ಅಂಗಾಂಗ ಮತ್ತು ಅಂಗಾಂಶ ದಾನ ಮಾಡಬಹುದಾಗಿದೆ.

ಇದನ್ನೂ ಓದಿ :  ಎದೆಯುರಿ ಕಾಣಿಸಿಕೊಂಡು ಮೃತಪಟ್ಟ ಕೂಲಿ ಕಾರ್ಮಿಕ

ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಆಂಗಾಂಗ ದಾನ ಮಾಡಲು ಇದುವರೆಗೆ 483 ಜನ ನೊಂದಾಯಿಸಿಕೊಂಡಿದ್ದಾರೆ. ಇದರಲ್ಲಿ 18 ವರ್ಷದಿಂದ 60 ವರ್ಷ ಮೇಲ್ಪಟ್ಟ ವಯೋಮಿತಿಯವರೂ ಇದ್ದಾರೆ. ನೋಂದಣಿ ಮಾಡಿದವರಲ್ಲಿ ಮಹಿಳೆಯರ ಸಂಖ್ಯೆಯೇ ಅತ್ಯಧಿಕವಾಗಿರುವುದು ವಿಶೇಷವಾಗಿದೆ. ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರಲ್ಲಿ, 283 ಸಂಖ್ಯೆಯ ಹೃದಯ, 209 ಕರುಳು 278 ಕಿಡ್ನಿ, 243 ಲಿವರ್, 221 ಶ್ವಾಸಕೋಶ, 211 ಮೇದೋಜೀರಕ ಗ್ರಂಥಿಗಳನ್ನು ದಾನ ಮಾಡಲು ನೋಂದಾಯಿಸಿಕೊಂಡಿದ್ದಾರೆ. ಇದರ ಜೊತೆಗೆ ಈ ಅಂಗಗಳ ಅಂಗಾಂಶಗಳಾದ ರಕ್ತನಾಳಗಳು 179, ಮೂಳೆ 167, ಕಾರ್ಟಿಲೇಜ್ 167, ಎರಡು ಕಣ್ಣುಗಳ ಕಾರ್ನಿಯಾ 433, ಹೃದಯದ ಕವಾಟಗಳು 188 ಮತ್ತು 177 ಸಂಖ್ಯೆಯ ಚರ್ಮವನ್ನೂ ಕೂಡಾ ದಾನವಾಗಿ ನೀಡಲು ತಮ್ಮ ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ಕೋಲ್ಕತ್ತಾ ಘಟನೆ ಖಂಡಿಸಿ ‘ಮೊಂಬತ್ತಿ’ ಪ್ರತಿಭಟನೆ

ಮೂತ್ರಪಿಂಡ ಮತ್ತು ಯಕೃತ್ತನ್ನು ಜೀವಂತ ದಾನಿಗಳು ಮೂಲಕ ಮತ್ತೊಬ್ಬರಿಗೆ ಕಸಿ ಮಾಡಬಹುದಾಗಿದೆ. ಹೃದಯ, ಶ್ವಾಸಕೋಶ ಮತ್ತು ಮೇದೋಜೀರಕ ಗ್ರಂಥಿಯ ದಾನಗಳನ್ನು ಮೆದುಳು ಮರಣ ಹೊಂದಿದ ದಾನಿಗಳ ಮೂಲಕ ಮಾತ್ರ ಪಡೆಯಬಹುದಾಗಿದೆ.
ಜೀವಂತ ದಾನಿಯು, ತನ್ನ ಹತ್ತಿರದ ಸಂಬಂಧಿ ಅಥವಾ ದೂರದ ಸಂಬಂಧಿ, ಸಂಗಾತಿ, ಮಗ-ಮಗಳು, ಸಹೋದರ-ಸಹೋದರಿ, ಪೋಷಕರು, ಅಜ್ಜಿ-ತಾತ ಮತ್ತು ಮೊಮ್ಮಕ್ಕಳು ಮತ್ತು ನಿಕಟ ಸ್ನೇಹಿತರಿಗೆ ಮಾತ್ರ ಅಂಗಾಂಗ ದಾನ ಮಾಡಬಹುದಾಗಿದೆ. ಇವರು ತಮ್ಮ ಅಂಗಾಂಗ ದಾನ ಮಾಡಲು ರಾಜ್ಯ ಅಧಿಕಾರ ಸಮಿತಿಯಿಂದ ಅನುಮೋದನೆ ಪಡೆಯಬೇಕು.

ಇದನ್ನೂ ಓದಿ : ಖಗೋಳ ನಮ್ಮ ಬದುಕಿನ ಕನ್ನಡಿ: ರಾಘವೇಶ್ವರ ಸ್ವಾಮೀಜಿ

ಮೃತ ದಾನಿಯು ಸಾಮಾನ್ಯವಾಗಿ ತಲೆಗೆ ಮಾರಣಾಂತಿಕ ಗಾಯವನ್ನು ಅನುಭವಿಸಿ, ಮೆದುಳು ಮರಣ ಹೊಂದಿದೆ ಎಂದು ಘೋಷಿಸಿದರೆ, ದಾನಿಗಳ ಕುಟುಂಬವು ದಾನಕ್ಕೆ ಒಪ್ಪಿಗೆ ನೀಡಲು ಆಯ್ಕೆ ಮಾಡಬಹುದು. ಅಂಗಾಂಗಗಳನ್ನು ಪಡೆದ ನಂತರ ದಾನಿಯ ದೇಹವನ್ನು ಗೌರವಯುತವಾಗಿ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತದೆ. ಮತ್ತು ದಾನಿಯ ಅಂಗಗಳನ್ನು, ಅದನ್ನು ಸ್ವೀಕರಿಸುವ ರೋಗಿ ದಾಖಲಾಗಿರುವ ಆಸ್ಪತ್ರೆಗಳಿಗೆ ನಿಗದಿತ ಅವಧಿಯೊಳಗೆ ತಲುಪುವಂತೆ ಸುರಕ್ಷಿತವಾಗಿ ಸಾಗಿಸಲಾಗುತ್ತದೆ.

ವಿಡಿಯೋ ಸಹಿತ ಇದನ್ನೂ ಓದಿ : ಬಾಂಗ್ಲಾ ಹಿಂಸಾಚಾರ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ

ನೀ ನಾರಿಗಾದೇಯೋ ಎಲೆ ಮಾನವ ಎಂಬ ನುಡಿಗೆ ತದ್ದಿರುದ್ಧವಾಗಿ, ಯಾವುದೇ ವ್ಯಕ್ತಿ ತನ್ನ ಮರಣದ ನಂತರವೂ ಅಂಗಾಂಗ ದಾನದ ಮೂಲಕ ಹಲವರ ಜೀವ ಉಳಿಸುವ ಮತ್ತು ಹಲವು ಮಂದಿಯ ಜೀವಕ್ಕೆ ಬೆಳಕಾಗಬಹುದಾದ ಕಾರ್ಯಕ್ಕೆ ಪ್ರತಿಜ್ಞೆ ಮಾಡುವ ಮೂಲಕ ಮಣ್ಣಲ್ಲಿ ಮಣ್ಣಾಗುವ ತನ್ನ ದೇಹವನ್ನು, ಹಲವಾರು ಜೀವಗಳನ್ನು ಉಳಿಸುವ ಸಾರ್ಥಕ ಬದುಕನ್ನಾಗಿ ಪರಿವರ್ತಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆರೋಗ್ಯ ಇಲಾಖೆಯ 24*7 ಕಾರ್ಯ ನಿರ್ವಹಿಸುವ ಜೀವ ಸಾರ್ಥಕತೆ ಮೊ.ಸಂಖ್ಯೆ ೯೮೪೫೦೦೬೭೬೮ ನ್ನು ಅಥವಾ ಸಮೀಪದ ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ವೈದ್ಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಖಂಡಿಸಿ ಪ್ರತಿಭಟನೆ

ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿರುವವರ ಸಂಖ್ಯೆ ಕಡಿಮೆ ಇದೆ. ಆರೋಗ್ಯ ಇಲಾಖೆಯ ಮೂಲಕ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಆರಂಭಗೊಂಡು ಜಿಲ್ಲಾಸ್ಪತ್ರೆಯ ವರೆಗೂ ಕೂಡಾ ಅಂಗಾಂಗ ದಾನದ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಮೂಡನಂಬಿಕೆಗಳಿಗೆ ಒಳಪಟ್ಟು ಅಂಗಾಂಗ ದಾನದಂತಹ ಮಹಾನ್ ಕಾರ್ಯದಿಂದ ಹಿಂದೆ ಸರಿಯಬಾರದು. ವ್ಯಕ್ತಿಯು ಸಹಜ ಸಾವಿನ ನಂತರ ಅತನ ಅಂಗಾಂಗಗಳಿಂದ ೮ ಜನರ ಜೀವ ಉಳಿಸಬಹುದು ಮತ್ತು ಅಂದಾಜು ೫೦ ಜನರ ಜೀವಕ್ಕೆ ಬೆಳಕಾಗಬಹುದು. – ಡಾ.ಅರ್ಚನಾ ನಾಯಕ್, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಉತ್ತರ ಕನ್ನಡ ಜಿಲ್ಲೆ.

ಇದನ್ನೂ ಓದಿ : ಬಾವಿಗೆ ಹಾರಿ ಯುವಕ ಸಾವಿಗೆ ಶರಣು