ಭಟ್ಕಳ (Bhatkal) : ಒಳಚರಂಡಿ ಜೋಡಣೆಗೆ ೫೦ ಸಾವಿರ ರೂ. ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಭಟ್ಕಳ ಪುರಸಭೆಯ (chief officer) ನೀಲಕಂಠ ಮೇಸ್ತ ಅವರನ್ನು ಲೋಕಾಯುಕ್ತ ಎಸ್ಪಿ (Lokayukta SP) ನೇತೃತ್ವದಲ್ಲಿ ಅಧಿಕಾರಿಗಳು ಪುರಸಭೆ ಕಚೇರಿಯಲ್ಲಿಯೇ ಬೆಳ್ಳಿಗ್ಗೆಯಿಂದ ಸಂಜೆ ತನಕ ವಿಚಾರಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೊಹ್ಮದ ಇದ್ರಿಸ್ ಮೋಹತೇಷಾಮ್ ಎನ್ನುವವರು ನೀಡಿದ ದೂರಿನ (Complaint) ಆಧಾರದ ಮೇಲೆ ಶುಕ್ರವಾರ ಕಾರವಾರ (Karwar) ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಒಳಚರಂಡಿ ಜೋಡಣೆ ವಿಚಾರದಲ್ಲಿ ನೀಲಕಂಠ ಮೇಸ್ತ ಲಂಚ ಸ್ವೀಕರಿಸುತ್ತಿದ್ದರು. ದೂರುದಾರ ನೀಡಿದ ಹೇಳಿಕೆ ಪ್ರಕಾರ ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು.

ವಿಡಿಯೋ ಸಹಿತ ಇದನ್ನೂ ಓದಿ :   ಲೋಕಾಯುಕ್ತ ಬಲೆಗೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ

ಈ ಬಗ್ಗೆ ಮಾತನಾಡಿದ ಮಾತನಾಡಿದ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ, ಮೊಹ್ಮದ ಇದ್ರಿಸ್ ಮೋಹತೇಷಾಂ ಎಂಬುವವರ ಸಂಬಂಧಿಕರ ೨೦ ಗುಂಟೆ ಜಾಗ ಭಟ್ಕಳದ ಸೂಸಗಡಿಯಲ್ಲಿದೆ. ಅವರು ಸದ್ಯ ಚೆನೈಯಲ್ಲಿ (chennai) ಕೆಲಸ ಮಾಡುತ್ತಿದ್ದಾರೆ‌. ಅವರು ೨೦೦೩ ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡಿದ್ದರು. ಆದರೆ ಆ ವೇಳೆಯಲ್ಲಿ ಮನೆ ಕಟ್ಟಲು ಸಾಧ್ಯವಾಗದ ಕಾರಣ ಅದನ್ನು ಮುಂದೂಡಿದ್ದರು. ಬಳಿಕ ೨೦೧೫ಕ್ಕೆ ಮನೆ ಕೆಲಸ ಪೂರ್ಣಗೊಳಿಸಿದ್ದರು. ಆದರೆ ಮನೆಯಲ್ಲಿ ವಾಸವಾಗಿರಲಿಲ್ಲ. ಈ ವರ್ಷ ಜುಲೈ ತಿಂಗಳಲ್ಲಿ ನಾವು ಮನೆಯಲ್ಲಿ ವಾಸ ಮಾಡುತ್ತೇವೆ. ಪುರಸಭೆಯಿಂದ ಫಾಮ್ 3 ಪಡೆದುಕೊಳ್ಳುವಂತೆ ಮೋಹತೇಷಾಮ ಬಳಿ ಹೇಳುತ್ತಾರೆ. ಬಳಿಕ ಇವರು ತಮ್ಮ ಸ್ನೇಹಿತ ಶಕೀಲ್ ಮೋಹತೇಷಾಮ ಗೆ ಮುಖ್ಯಾಧಿಕಾರಿ ಬಳಿ ತೆರಳಿ ವಿಚಾರಿಸಿಕೊಂಡು ಫಾಮ್ ೩ಕ್ಕೆ ಅರ್ಜಿ ಹಾಕುವಂತೆ ಹೇಳಿರುತ್ತಾರೆ.

ಇದನ್ನೂ ಓದಿ :  ಚುಟುಕು ಕ್ರೀಡಾ ಹಬ್ಬದಲ್ಲಿ ಮಕ್ಕಳ ಕಲರವ

ಬಳಿಕ ಶಕೀಲ್ ಅರ್ಜಿ ನೀಡಿ ಮುಖ್ಯಾಧಿಕಾರಿ ಬಳಿ ವಿಚಾರಿಸಿದಾಗ ಅನೇಕ ವರ್ಷದಿಂದ ತೆರಿಗೆ ತುಂಬದೇ ಬಾಕಿ ಇರುವುದರಿಂದ ತೆರಿಗೆ ಮತ್ತು ದಂಡ ತುಂಬಿದರೆ ಫಾಮ್ ೩ ಸಿಗುತ್ತದೆ ಎಂದು ಹೇಳಿದ್ದಾರೆ. ನಂತರ ಜುಲೈ ೨೧ಕ್ಕೆ ಹೋಗಿ ಎಷ್ಟು ಹಣ ನೀಡಬೇಕು ಎಂದು ಕೇಳಿದಾಗ ೨ ಲಕ್ಷ ಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದ್ದರು. ನಂತರ ದೂರುದಾರರು ತಮ್ಮ ಸಂಬಂಧಿಕರ ಬಳಿ ಹೇಳಿದಾಗ ಹಣ ನೀಡುವಂತೆ ಹೇಳಿ, ಶಕೀಲ್ ಬಳಿ ೨ ಲಕ್ಷ ಕೊಟ್ಟು ಕಳುಹಿಸುತ್ತಾರೆ. ನಂತರ ಮುಖ್ಯಾಧಿಕಾರಿ ಹಣ ತೆಗೆದುಕೊಂಡು ಮನಗೆ ಬರಲು ತಿಳಿಸಿದಂತೆ, ೨ ಲಕ್ಷ ಹಣ ಪಡೆದುಕೊಂಡ ಮುಖ್ಯಾಧಿಕಾರಿ ೯೦,೦೬೮ ರೂಪಾಯಿ ರಶೀದಿ ನೀಡಿ, ಉಳಿದ ಮೊತ್ತವನ್ನು ತಾವೇ ಇಟ್ಟುಕೊಂದಿದ್ದರು. ಆದರೂ ಆ ವೇಳೆ ಫಾರ್ಮ್‌ ೩ ನೀಡಿರಲಿಲ್ಲ.

ಇದನ್ನೂ ಓದಿ :  ಉಸ್ತುವಾರಿಯಿಂದ ವಸತಿ ನಿಲಯಗಳ ಪರಿಶೀಲನೆ

ಇಷ್ಟಾದರೂ ಒಂದು ವರ್ಷದಿಂದ ಫಾಮ್ ೩ ನೀಡದೆ ಯುಜಿಡಿ ಕಾಮಗಾರಿ ಕೂಡ ನಡೆಸದೆ ಇರುವುದರಿಂದ ನವೆಂಬರ್ ೧೨ರಂದು ಶಕೀಲ್ ಪುನಃ ಮುಖ್ಯಾಧಿಕಾರಿ ಬಳಿ ಬಂದು ಮನವಿ ಮಾಡಿಕೊಳ್ಳುತ್ತಾರೆ. ಆ ವೇಳೆ ಮತ್ತೆ ಮುಖ್ಯಾಧಿಕಾರಿ ೧ ಲಕ್ಷಕ್ಕೆ ಬೇಡಿಕೆ ಇಟ್ಟು,  ೫೦ ಸಾವಿರ ನೀಡಿದ ಬಳಿಕ ತಕ್ಷಣ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಮತ್ತೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಗುರುವಾರ ನಮ್ಮ ಕಾರವಾರದ ಕಚೇರಿಗೆ ಬಂದು ದೂರು ನೀಡಿದ್ದರು. ಅದರಂತೆ ನಾವು ಬೆಳ್ಳಿಗ್ಗೆ ಬಂದು ಅವರು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ (Lokayukta SP) ಕುಮಾರಚಂದ್ರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ :   ಭಟ್ಕಳದಲ್ಲಿ ನೌಕರರ ವರ್ಗಾವಣೆಗೆ ಆಗ್ರಹಿಸಿ ಪ್ರತಿಭಟನೆ

ಲೋಕಾಯುಕ್ತ ದಾಳಿ ವೇಳೆ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಪ್ರಸಾದ ಪನ್ನೆಕರ ಹಾಗೂ 14 ಜನ ಪಿ.ಐ ಸಿಬ್ಬಂದಿ ಉಪಸ್ಥಿತರಿದ್ದರು. ಇತ್ತಿಚೆಗಷ್ಟೇ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರ ನೇತೃತ್ವದ ತಂಡ, ಹೊನ್ನಾವರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರ ಹೇಳಿಕೆಯ ವಿಡಿಯೋವನ್ನು  ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಗೋವಾ ಪೊಲೀಸರಿಂದ ಕಾರವಾರದ ಮಹಿಳೆ ಬಂಧನ