ಭಟ್ಕಳ (Bhatkal): ವಾಹನ ಪರವಾನಗಿ ರಹಿತ ಹಾಗೂ ಮದ್ಯ ಸೇವಿಸಿ ಬೈಕ್ ಚಲಾಯಿಸಿದ ಸವಾರನಿಗೆ ಭಟ್ಕಳ ಜೆ.ಎಂ.ಎಫ್. ನ್ಯಾಯಾಲಯವು ಬುಧವಾರದಂದು ೨೮ ಸಾವಿರ ರೂ. ದಂಡ ವಿಧಿಸಿದೆ (court order).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನವೆಂಬರ ೩೦ರಂದು ಭಟ್ಕಳ ನಗರದ ನ್ಯೂ ಇಂಗ್ಲೀಷ್ ಶಾಲೆಯ ಸಮೀಪ ಭಟ್ಕಳ ನಗರ ಠಾಣೆಯ ಪಿ.ಎಸ್.ಐ. ನವೀನ ನಾಯ್ಕ ವಾಹನ ತಪಾಸಣೆ ಮಾಡುತ್ತಿರುವ ವೇಳೆ ಪ್ರಕರಣ ಬೆಳಕಿಗೆ ಬಂದಿತ್ತು. ಬಂದರ್ ಕಡೆಗೆ ಸಂತೋಷ ( ಹೆಸರು ಬದಲಿಸಲಾಗಿದೆ) ತನ್ನ ಬೈಕ್ ಚಲಾಯಿಸಿಕೊಂಡು ಬರುವ ವೇಳೆ ಪಿಎಸ್ಐ ಪರಿಶೀಲನೆ ನಡೆಸಿದ್ದರು. ಈ ವೇಳೆ ಸವಾರ ಮದ್ಯ ಸೇವನೆ ಮಾಡಿದ್ದು ದೃಢಪಟ್ಟಿತ್ತು.
ವಿಡಿಯೋ ಸಹಿತ ಇದನ್ನೂ ಓದಿ : ಡಿ.೩೧ರಿಂದ ಅನಿರ್ದಿಷ್ಟಾವಧಿ ಬಸ್ ಮುಷ್ಕರ
ಬೈಕ್ ಸವಾರನ ವಿರುದ್ಧ ಮದ್ಯ ಸೇವಿಸಿ ವಾಹನ ಚಾಲನೆ, ಚಾಲನಾ ಪ್ರಮಾಣ ಪತ್ರ ಹೊಂದದೇ ಇದ್ದದ್ದು, ಅಪಾಯಕಾರಿ ಚಾಲನೆ, ಹೆಲ್ಮೆಟ್ ಧರಿಸದೇ ಇರುವುದು, ಹೊಗೆ ಪ್ರಮಾಣ ಪತ್ರ ಇರದಿರುವುದು, ವಾಹನದ ಇನ್ಸುರೆನ್ಸ್ ಮಾಡಿಸದಿರುವುದು ಮತ್ತು ವಾಹನ ನೊಂದಣಿ ಮಾಡಿಸದಿರುವುದು ಕಂಡು ಬಂದಿತ್ತು.
ಇದನ್ನೂ ಓದಿ : ಬೈಕುಗಳ ನಡುವೆ ಡಿಕ್ಕಿ; ಮಹಿಳೆಗೆ ಗಾಯ
ಸವಾರನ ವಿರುದ್ಧ ಪ್ರಧಾನ ಮತ್ತು ಹೆಚ್ಚುವರಿ ಸಿವಿಲ್ ಹಾಗೂ ಜೆ.ಎಂ.ಎಫ್. ನ್ಯಾಯಾಲಯದಲ್ಲಿ (JMFC) ಅಂತಿಮ ವರದಿ ಸಲ್ಲಿಸಲಾಗಿತ್ತು. ತಪ್ಪಿತಸ್ಥನಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ (court order).
ಇದನ್ನೂ ಓದಿ: ಭಟ್ಕಳದ ಮೂವರು ಶಂಕಿತ ಭಯೋತ್ಪಾದಕರು ದೋಷಿ