ಭಟ್ಕಳ (Bhatkal) : ದನ ಅಡ್ಡ ಬಂದಿದ್ದರಿಂದ ತಪ್ಪಿಸಲು ಹೋಗಿ ಬೈಕ್‌ ಸ್ಕಿಡ್‌ ಆಗಿ (Bike Skidded) ಬಿದ್ದು, ಹಿಂಬದಿ ಸವಾರ ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಹಡೀಲ್‌ ಸಬ್ಬತ್ತಿ ಗ್ರಾಮದ ಶ್ರೀಧರ ದುರ್ಗಯ್ಯ ಗೊಂಡ ಗಾಯಗೊಂಡವರು. ಸಬ್ಬತ್ತಿ ಗ್ರಾಮದವರೇ ಆದ ಬೈಕ್‌ ಸವಾರ ಮಂಜುನಾಥ ಗೊಯ್ದ ನಾಯ್ಕ (೪೮) ವಿರುದ್ಧ ದೂರು (Complaint) ದಾಖಲಾಗಿದೆ. ಡಿ.೨೧ರಂದು ಬೆಳಿಗ್ಗೆ ೧೧.೧೫ರ ಸುಮಾರಿಗೆ ಕೋಣಾರ ಸರ್ಕಾರಿ ಆಸ್ಪತ್ರೆ ಹತ್ತಿರ ಈ ಘಟನೆ (Bike Skidded) ನಡೆದಿದೆ.

ಇದನ್ನೂ ಓದಿ : ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹೆಚ್ಚಳ