ಭಟ್ಕಳ (Bhatkal) : ತಾಲೂಕಿನ ನಾಮಧಾರಿ (Namadhari) ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ಶ್ರೀ ದೇವರ ಪಲ್ಲಕ್ಕಿ ನಗರದಾದ್ಯಂತ ಸಂಚರಿಸಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿವಿಡಿಯೋ

ಫೆಬ್ರವರಿ ನಾಲ್ಕರಂದು ನಡೆದ ಅದ್ದೂರಿ ಪಲ್ಲಕ್ಕಿ ಮಹೋತ್ಸವ ಸಾವಿರಾರು ಭಕ್ತ ಸಮೂಹ ಭಕ್ತಿ ಪರವಶತೆಯಲ್ಲಿ ತೇಲುವಂತೆ ಮಾಡಿತು. ಈ ಪಲ್ಲಕ್ಕಿ ಮಹೋತ್ಸವಕ್ಕೆ ಮಾಜಿ ಶಾಸಕ ಸುನೀಲ ನಾಯ್ಕ ಸೇರಿದಂತೆ ನಾಮಧಾರಿ ಸಮಾಜದ ಅಧಿಕ ಬಂಧುಗಳು ಪಾಲ್ಗೊಂಡಿದ್ದರು.

ಇದನ್ನು ಓದಿ : overturned/ ಭಟ್ಕಳಕ್ಕೆ ಬರುತ್ತಿದ್ದ ಲಾರಿ ಪಲ್ಟಿ

ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ದೇವರಿಗೆ ತುಲಾಭಾರ ಸಮರ್ಪಣೆ ಮಾಡಲಾಯಿತು. ನಂತರ ಸಂಜೆ ೪.೩೦ ಕ್ಕೆ ವೆಂಕಟೇಶ್ವರ ದೇವರ ಪಲ್ಲಕ್ಕಿ ಸಹಸ್ರಕ್ಕೂ ಅಧಿಕ ನಾಮಧಾರಿ (Namashari) ಭಕ್ತರ ಜಯಘೋಷದಲ್ಲಿ ನಗರದಾದ್ಯಂತ ಸಂಚರಿಸಿತು. ನಸುಕಿನ ಜಾವ ೨ ಗಂಟೆಯ ವೇಳೆಗೆ ಪಲ್ಲಕ್ಕಿ ದೇವಸ್ಥಾನಕ್ಕೆ ಮರಳಿತು. ಬಳಿಕ ಪೂಜೆ ಸಲ್ಲಿಸುವ ಮೂಲಕ ಪಲ್ಲಕ್ಕಿ ಉತ್ಸವ ಮುಕ್ತಾಯಗೊಂಡಿತು.

ಇದನ್ನು ಓದಿ : Marriage Anniversary/ ಪುಸ್ತಕ ಮಾರಾಟದಿಂದ ಬಂದ ಹಣ ಕ್ಯಾನ್ಸರ್ ರೋಗಿಗಳಿಗೆ ದಾನ

ದೇವಸ್ಥಾನದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆ ಸೋನಾರಕೇರಿ, ನಗರ ಪೊಲೀಸ ಠಾಣಾ ಮಾರ್ಗವಾಗಿ ಹಳೆ ಬಸ್ ನಿಲ್ದಾಣ, ಮಾರಿಗುಡಿ ದೇವಸ್ಥಾನ, ಕಾಸ್ಮುಡಿ ದೇವಸ್ಥಾನ ಸಮೀಪದ ಕಟ್ಟೆಯ ತನಕ ತೆರಳಿತು. ಅಲ್ಲಿ ಭಕ್ತರಿಂದ ವಿಶೇಷ ಪೂಜೆ ಸಲ್ಲಿಕೆಯಾಯಿತು. ಅದೇ ಮಾರ್ಗವಾಗಿ ಚೌತನಿ ಕುದುರೆ ಬೀರಪ್ಪ ದೇವಸ್ಥಾನದಲ್ಲಿಯೂ ಪೂಜೆಯನ್ನು ಭಕ್ತರು ಸಲ್ಲಿಸಿದರು.

ಇದನ್ನು ಓದಿ : Bhatkal/ ಖೇತಪೈ ನಾರಾಯಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

ರಘುನಾಥ ರಸ್ತೆಯ ಮೂಲಕ ಮಣ್ಕುಳಿಗೆ ಮೆರವಣಿಗೆ ಬಂದಾಗ ಮಣ್ಕುಳಿಯಲ್ಲಿನ ಭಕ್ತರು ಪೂಜೆ ಸಲ್ಲಿಸಿದರು. ಬಳಿಕ ಪಲ್ಲಕ್ಕಿಯು ಅಲ್ಲಿಂದ ವಾಪಸ್ಸು ಬಂದು ಪದ್ಮಾವತಿ ದೇವಸ್ಥಾನಕ್ಕೆ ಆಗಮಿಸಿತು. ಪೂಜೆ ಪುನಸ್ಕಾರದೊಂದಿಗೆ ಸತಿಪತಿಯರ ಭೇಟಿಗೆ ವಿಶೇಷ ಮೆರುಗು ಬಂದಿತು. ನಂತರ ಕಳಿ ಹನುಮಂತ ದೇವಸ್ಥಾನ ಮಾರ್ಗವಾಗಿ ನಸುಕಿನ ಜಾವ ೨ ಗಂಟೆ ಸುಮಾರಿಗೆ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನಕ್ಕೆ ತಲುಪಿತು.

ಇದನ್ನು ಓದಿ : Cancer Day/ ಕ್ಯಾನ್ಸರ್ ಚಿಕಿತ್ಸೆಯಲ್ಲಿ ರೇಡಿಯೇಷನ್ ಅಕಾಲಜಿಯ ಪಾತ್ರ

ಬಳಿಕ ಮಹಾ ಮಂಗಳಾರತಿ ಹಾಗೂ ತೀರ್ಥ ಪ್ರಸಾದ ನೀಡಿದ ನಂತರ ಪಲ್ಲಕ್ಕಿ ಮಹೋತ್ಸವ ಮುಕ್ತಾಯಗೊಂಡಿತು. ಪಲ್ಲಕ್ಕಿ ಮೆರವಣಿಗೆ ಉದ್ದಕ್ಕೂ ಮಹಿಳೆಯ ಭಜನಾ ಕುಣಿತ, ಚಂಡೆ ಹಾಗೂ ಗೊಂಬೆ ಕುಣಿತ ಎಲ್ಲರ ಆಕರ್ಷಣೆಗೆ ಕಾರಣವಾಯಿತು.

ಮೆರವಣಿಗೆಯ ವಿಡಿಯೋವನ್ನು  ಯೂಟ್ಯೂಬ್ಇನ್ಸ್ಟಾಗ್ರಾಂ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನು ಓದಿ : Album release / ಭಕ್ತಿಗೀತೆಗಳ ಅಲ್ಬಮ್ ಬಿಡುಗಡೆ