ಭಟ್ಕಳ (Bhatkal) : ತಾಲೂಕಿನ ಹೆಬಳೆಯ ಗಾಂಧಿನಗರದಲ್ಲಿ ಪೊಲೀಸರು ದಾಳಿ (police raid) ನಡೆಸಿದಾಗ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಏಳು ಜನರು ಸಿಕ್ಕಿಬಿದ್ದಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆರೋಪಿಗಳು ಫೆಬ್ರವರಿ ನಾಲ್ಕರಂದು ರಾತ್ರಿ ೧೦ ಗಂಟೆ ಸುಮಾರಿಗೆ ಗಾಂಧಿನಗರದ ಮನೆ ಎಂದರೆ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಜೂಜಾಟ ಆಡುತ್ತಿದ್ದರು ಎಂದು ಆರೋಪಿಸಲಾಗಿದೆ. ಭಟ್ಕಳ (Bhatkal) ಗ್ರಾಮೀಣ ಠಾಣೆ ಪಿಎಸ್ಐ ಭರಮಪ್ಪ ಬೆಳಗಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನು ಓದಿ : Bike skid/ ಬೈಕ್ ಸ್ಕಿಡ್ ಆಗಿ ಮೂವರಿಗೆ ಗಾಯ 

ಹೆಬಳೆಯ ಹೇರೇಕೇರಿ ನಿವಾಸಿಗಳಾದ ಶೇಖರ ಬಡಿಯಾ ಗೊಂಡ (೩೦), ರಾಜೇಶ ಮಂಜು ಗೊಂಡ (೪೦), ತೆಂಗಿನಗುಂಡಿ ನಿವಾಸಿಗಳಾದ ನವೀನ ಬಡಿಯಾ ಗೊಂಡ (೨೮), ಜಗದೀಶ ಮಂಜುನಾಥ ನಾಯ್ಕ (೩೫), ಹೆರ್ತಾರಿನ ರಾಮ ತಿಮ್ಮಪ್ಪ ಗೊಂಡ (೪೨), ವರಕೊಡ್ಲು ನಿವಾಸಿ ಪಾಂಡು ಸಣ್ಣು ಗೊಂಡ (೩೦), ಶಿರಾಲಿ ಚಿತ್ರಾಪುರದ ರಾಜೇಶ ತಿಮ್ಪಪ್ಪ ಗೊಂಡ (೨೫) ಪೊಲೀಸರ ದಾಳಿ ವೇಳೆ ಸಿಕ್ಕಿಬಿದ್ದ ಆರೋಪಿಗಳು.

ಇದನ್ನು ಓದಿ : Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು