ಭಟ್ಕಳ ಡೈರಿ ವರದಿ
ಭಟ್ಕಳ: ಕರ್ನಾಟಕ ವಿಧಾನಸಭೆಯ ಉಪಸಭಾಧ್ಯಕ್ಷರಾಗಿರುವ (deputy speaker) ಭಟ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕೆಡಿಸಿಸಿ ಬ್ಯಾಂಕ್ (KDCC bank) ನಿರ್ದೇಶಕ ಮಂಕಾಳ ಎಸ್ ವೈದ್ಯ (Mankal Vaidya) ಅವರನ್ನು ಕೆಡಿಸಿಸಿ ಬ್ಯಾಂಕ್ ಭಟ್ಕಳ (Bhatkal) ತಾಲೂಕಿನ ನೌಕರರು ಮಂಗಳವಾರ ಭಟ್ಕಳ ಶಾಖೆಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು (felicitation).
Power disruption/ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೆ ೨, ೩ರಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಗೊತ್ತಾ?
ವಿಧಾನಸಭೆಯ ಉಪಸಭಾಧ್ಯಕ್ಷರಂತಹ ಮಹತ್ವದ ಜವಾಬ್ದಾರಿ ಮಂಕಾಳ ಎಸ್ ವೈದ್ಯ ಅವರಿಗೆ ಲಭಿಸಿರುವುದು ಭಟ್ಕಳ ಕ್ಷೇತ್ರದ ಜನತೆ ಮಾತ್ರವಲ್ಲದೆ ಸಹಕಾರಿ ಕ್ಷೇತ್ರಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆಡಿಸಿಸಿ ಬ್ಯಾಂಕ್ನ ಭಟ್ಕಳ ತಾಲೂಕಿನ ವಿವಿಧ ಶಾಖೆಗಳ ನೌಕರರು ಹಾಗೂ ಸಿಬ್ಬಂದಿ ಒಟ್ಟಾಗಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು.
MP Kageri/ ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಕಾಗೇರಿ
ಕಾರ್ಯಕ್ರಮದಲ್ಲಿ ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ವಿ ಕೆ ವಿಶಾಲ್ ಉಪಸ್ಥಿತರಿದ್ದು, ನೂತನ ಉಪಸಭಾಧ್ಯಕ್ಷ ಮಂಕಾಳ ವೈದ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅವರು, ಮಂಕಾಳ ವೈದ್ಯರು ಶಾಸಕರಾಗಿ, ಸಚಿವರಾಗಿ ಹಾಗೂ ಇದೀಗ ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಕ್ಷೇತ್ರದ ಜನತೆಗೆ ಹೆಮ್ಮೆಯ ವಿಚಾರವಾಗಿದೆ ಎಂದರು.
Aadhaar centre/ ಉತ್ತರ ಕನ್ನಡ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಕಚೇರಿ ಸ್ಥಾಪನೆಗೆ ಆಗ್ರಹ
ಕಾರ್ಯಕ್ರಮದಲ್ಲಿ ಭಟ್ಕಳ ತಾಲೂಕಿನ ಕೆಡಿಸಿಸಿ ಬ್ಯಾಂಕ್ನ ವಿವಿಧ ಶಾಖೆಗಳ ಸಿಬ್ಬಂದಿ, ನೌಕರರು ಹಾಗೂ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಂಕಾಳ ಎಸ್ ವೈದ್ಯ ಅವರಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು (felicitation). ಆರ್ ವಿ ನಾಯ್ಕ ಸ್ವಾಗತಿಸಿದರು. ಕೆ ಜಿ ಪೈ ನಿರೂಪಿಸಿದರು.
Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಬೆಂಗಳೂರಿಗರ ನೆರವು
