ಭಟ್ಕಳ: ಮುರ್ಡೇಶ್ವರ (Murudeshwar) ಮತ್ತು ಭಟ್ಕಳದಲ್ಲಿ (Bhatkal) ಅಕ್ರಮ ಗಾಂಜಾ ಮಾರಾಟ ಮತ್ತು ಗೋಕಳವು ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟುವಂತೆ ಉದ್ಯಮಿ ಹಾಗೂ ಸಮಾಜ ಸೇವಕ ಮಾಸ್ತಪ್ಪ ನಾಯ್ಕ ಬಲಸೆ ಅವರು ಭಟ್ಕಳ ಡಿವೈಎಸ್ಪಿ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದರು (Appeal to SP).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಳೆದ ಎರಡು ದಿನಗಳ ಹಿಂದೆ ಮುರುಡೇಶ್ವರ ಭಾಗದ ಬೈಲೂರು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಗಾಂಜಾ ಸೇವಿಸಿ ಅಪ್ರಾಪ್ತ ವಯಸ್ಸಿನ ಕೆಲವು ಬಾಲಕರು ಬೈಲೂರು ಗ್ರಾಮದ ಹಿಂದೂ ಮನೆಗಳಿಗೆ ದುರುದ್ದೇಶಪೂರ್ವಕವಾಗಿ ಕಲ್ಲೆಸೆದು ಮನೆಯ ಕಿಟಗಿ-ಬಾಗಿಲು ಒಡೆದು ನಷ್ಟಪಡಿಸಿ ಓಡಿ ಹೋಗುವ ಸಂದರ್ಭ ಊರಿನ ಯುವಕರು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಕೋಮು ಭಾವನೆಯನ್ನು ಕೆರಳಿಸಿ ಸಮಾಜದ ಸ್ವಾಸ್ಥ್ಯ ಹಾಳುಮಾಡುವ ಇಂತಹ ಪ್ರಕರಣಗಳು, ಗಾಂಜಾ ಸೇವಿಸಿ ವಿದ್ಯಾರ್ಥಿಗಳು ಭಾಗಿಯಾಗಿರುವುದು ನೋಡಿದರೆ ಗಾಂಜಾ ವಿದ್ಯಾರ್ಥಿಗಳಿಗೆ ಎಲ್ಲಿಂದ ದೊರೆಯುತ್ತಿದೆ, ಅಪ್ರಾಪ್ತ ಬಾಲಕರು ಬೈಕ್ ಒಡಿಸಲು ಉತ್ತೇಜಿಸಿದವರು ಯಾರು? ಮೋಟಾರು ಸೈಕಲ್ ನೀಡಿದವರ ಮೇಲೂ ಪ್ರಕರಣ ದಾಖಲಿಸಬೇಕು. ಕೋಮು ಗಲಭೆಗೆ ಪಿತೂರಿ ನಡೆಸಿ ಉತ್ತೇಜನ ನೀಡಿದವರು ಯಾರು ಎಂದು ಭೇದಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
attacked/ ರಸ್ತೆ ಅಗೆತ ಪ್ರಶ್ನಿಸಿದ್ದಕ್ಕೆ ಮಹಿಳೆ ಸಹಿತ ಇಬ್ಬರ ಮೇಲೆ ಹಲ್ಲೆ
ಅನಧಿಕೃತವಾಗಿ ನಡೆಸುತ್ತಿರುವ ಮದರಾಸಗಳನ್ನು ಈ ಕೂಡಲೇ ಮುಚ್ಚಿಸಬೇಕು. ಭಟ್ಕಳ ತಾಲೂಕಿನ ಸಮುದ್ರತೀರ, ನಿರ್ಜನ ಪ್ರದೇಶ, ಕಾಲೇಜ್ ಕ್ಯಾಂಪಸ್ನಲ್ಲಿ ಗಾಂಜಾ ಸೇವನೆ ಬೆಳಕಿಗೆ ಬರುತ್ತಿದ್ದು, ಇದನ್ನು ಸಂಪೂರ್ಣ ತಡೆಯಲು ಪೊಲೀಸ್ ಇಲಾಖೆ ಮುಂದಾಗಬೇಕು. ಭಟ್ಕಳ ತಾಲೂಕಿನಾದ್ಯಂತ ರಾತ್ರಿ ಗೋಕಳವು ಪ್ರಕರಣ ದಿನ ನಿತ್ಯ ಬೆಳಕಿಗೆ ಬರುತ್ತಿದ್ದು, ತಕ್ಷಣ ಅವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳ ಬೇಕು ಹಾಗೂ ಇಲಾಖೆ ಇದನ್ನು ಜಾಗೃತ ಕಾರ್ಯಾಚರಣೆ ಮೂಲಕ ಪ್ರಕರಣಗಳನ್ನು ಸೇರಿಸಬೇಕು ಎಂದು ಎಸ್ಪಿಗೆ ಕಳಿಸಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ (Appeal to SP). ಈ ಸಂದರ್ಭದಲ್ಲಿ ವಿಶ್ವ ನಾಯ್ಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Dongarapalli/ ಭಟ್ಕಳ ಡೊಂಗರಪಳ್ಳಿ ಸಮಿತಿಗೆ ಫೈಜಾನ್ ನದ್ವಿ ಅಧ್ಯಕ್ಷ, ಇನಾಯತ್ ಗವಾಯಿ ಪ್ರಧಾನ ಕಾರ್ಯದರ್ಶಿಯಾಗಿ



