ಕಾರವಾರ (Karwar) : ಬೆಂಗಳೂರಿನ ಹಿಂದುಸ್ಥಾನ ಏರೊನಾಟಿಕ್ಸ್ ಲಿಮಿಟೆಡ್ನ (HAL) ಟ್ರೇನಿಂಗ್ ಸಂಸ್ಥೆಯು ಒಂದು ವರ್ಷದ ತರಬೇತಿಗಾಗಿ (Apprentice Training) ಅರ್ಜಿ ಆಹ್ವಾನಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫಿಟ್ಟರ್, ಟರ್ನರ್, ಮಶಿನಿಷ್ಟ, ಇಲೆಕ್ಟ್ರಿಶಿಯನ್, ವೆಲ್ಡರ್, ಕೋಪಾ, ಕಾರ್ಪೆಂಟರ್, ಫೌಂಡ್ರಿಮ್ಯಾನ್, ಶೀಟ್ಮೆಟಲ್ ವರ್ಕರ್, ಡೈ ಮೇಕರ್, ಪ್ರೊಗ್ರಾಮರ್ ಕಂ ಆಪರೇಟರ್ ಟ್ರೇಡ್ಗಳಲ್ಲಿ ಕರ್ನಾಟಕ ರಾಜ್ಯದ ಮಾನ್ಯತೆ ಪಡೆದ ಐ.ಟಿ.ಐ.ಗಳಿಂದ ಕ್ರಾಫ್ಟ್ಸ್ ಮೆನ್ ಟ್ರೇನಿಂಗ್ ಸ್ಕೀಮ್ (CTS) ತೇರ್ಗಡೆಯಾದ ಅರ್ಹ ಅಭ್ಯರ್ಥಿಗಳಿಂದ ಒಂದು ವರ್ಷದ ಅಪ್ರೆಂಟಿಸ್ ತರಬೇತಿಗಾಗಿ (Apprentice Training) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಮೊದಲು https://apprenticeshipindia.gov.in ಪೋರ್ಟಲ್ನಲ್ಲಿ ನೋಂದಣಿ ಮಾಡಿ, ಅಪ್ರೆಂಟಿಸ್ ನೋಂದಣಿ ಸಂಖ್ಯೆಯೊಂದಿಗೆ ಉದ್ಯೋಗ ವಿನಿಮಯ ಕಚೇರಿಯನ್ನು ಖುದ್ದಾಗಿ ಭೇಟಿ ನೀಡಬಹುದು.
ಇದನ್ನೂ ಓದಿ : job fair/ ಉದ್ಯೋಗ ಮೇಳದಲ್ಲಿ ಬರಲಿವೆ ಪ್ರತಿಷ್ಠಿತ ಕಂಪನಿಗಳು
ಕಚೇರಿಯಲ್ಲಿ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು, ಭರ್ತಿ ಮಾಡಬೇಕು. ಸ್ವಧೃಢೀಕೃತ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಮತ್ತು ರಾಷ್ಟ್ರೀಯ ವೃತ್ತಿ ತರಬೇತಿ ಕೌನ್ಸಿಲ್ನಿಂದ ಅಂಗೀಕೃತವಾದ ಸಂಸ್ಥೆಯಿಂದ ಪಡೆದ ಐ.ಟಿ.ಐ. ಎನ್.ಸಿ.ವಿ.ಟಿ. ಪ್ರಮಾಣ ಪತ್ರ ಮತ್ತು ಅಂಕಪಟ್ಟಿಗಳು, ಇತರೆ ಜಾತಿ ಪ್ರಮಾಣಪತ್ರ, ಪಿ.ಎಚ್, ಆರ್ಮಡ ಪಸರ್ನಲ್, ಆಧಾರಕಾರ್ಡ ಪ್ರತಿ, ಪಾನಕಾರ್ಡ ಪ್ರತಿ, ಆನ್ಲೈನ್ ಅಪ್ರೆಂಟಿಸ್ ನೋಂದಣಿ ಪ್ರತಿ ಹಾಗೂ ಇತ್ತೀಚಿನ ಎರಡು ಪಾಸ್ಪೊರ್ಟ ಸೈಜ್ ಫೊಟೊಗಳೊಂದಿಗೆ ಅಕ್ಟೋಬರ್ ೫ ರೊಳಗಾಗಿ ಉದ್ಯೊಗ ವಿನಿಮಯ ಕಚೇರಿಗೆ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೮೨-೨೨೬೩೮೬ ಹಾಗೂ ೯೭೪೩೩೬೦೬೫೬ನ್ನು ಸಂಪರ್ಕಿಸುವಂತೆ ಕಾರವಾರ ಯೋಜನಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Consumer Meeting/ ವಿದ್ಯುತ್ ಸಮಸ್ಯೆಯಿದ್ದಲ್ಲಿ ಸಭೆಗೆ ಬನ್ನಿ…